1,655 ಮಂದಿಗೆ ಕೋವಿಡ್: 15 ಸಾವು

411

Get real time updates directly on you device, subscribe now.

ತುಮಕೂರು: ಶನಿವಾರದಂದು ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತೆ 1,655 ಏರಿಕೆ ಕಂಡಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 245 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 60,696 ಕ್ಕೆ ಏರಿಕೆ ಕಂಡಿದೆ. 17,077 ಸಕ್ರಿಯ ಪ್ರಕರಣಗಳ ಪೈಕಿ 1,538 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 245, ಚಿನಾಹಳ್ಳಿ 73, ಗುಬ್ಬಿ 311, ಕೊರಟಗೆರೆ 115, ಕುಣಿಗಲ್ 34, ಮಧುಗಿರಿ 70, ಪಾವಗಡ 36, ಶಿರಾ 342, ತಿಪಟೂರು 299, ತುರುವೇಕೆರೆಯಲ್ಲಿ 130 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಕೋವಿಡ್ ನಿಂದ ತುಮಕೂರು ತಾಲೂಕಿನ ನುರಗನಹಳ್ಳಿ ಗ್ರಾಮದ ಮಹಿಳೆ (38), ಪಾವಗಡ ತಾಲೂಕಿನ ಕನ್ನಕಲಬಂಡೆ ಗ್ರಾಮದ ವ್ಯಕ್ತಿ (80), ಚಿಕ್ಕನಾಯಕನಹಳ್ಳಿಯ ವ್ಯಕ್ತಿ (58), ಮಧುಗಿರಿ ತಾಲೂಕಿನ ಕೂನ್ನಹಳ್ಳಿ ಗ್ರಾಮದ ವ್ಯಕ್ತಿ (55), ಕೊರಟಗೆರೆ ತಾಲೂಕಿನ ಡಿ.ಎಂ ಪಾಳ್ಯದ ಗ್ರಾಮದ ವ್ಯಕ್ತಿ (52), ಮಧುಗಿರಿ ತಾಲೂಕಿನ ಜೋಗೇನಹಳ್ಳಿ ಗ್ರಾಮದ ವ್ಯಕ್ತಿ (60), ಅನ್ಯಕಾರಣದಿಂದ ತಿಪಟೂರು ತಾಲೂಕಿನ ಸರಸ್ವತಹಳ್ಳಿ ಗ್ರಾಮದ ಮಹಿಳೆ (61), ತಿಪಟೂರು ತಾಲೂಕಿನ ಹಳೇ ಪಾಳ್ಯ ಗ್ರಾಮದ ವ್ಯಕ್ತಿ (47), ತುಮಕೂರು ನಗರ ಉಪ್ಪಾರಹಳ್ಳಿ ಬಡಾವಣೆಯ ವ್ಯಕ್ತಿ (60), ತಿಪಟೂರು ತಾಲೂಕಿನ ವಿರೂಪಾಕ್ಷಿಪುರ ಗ್ರಾಮದ ವ್ಯಕ್ತಿ (85),ಶಿರಾ ತಾಲೂಕಿನ ಗೋಪಿಕುಂಟೆ ಗ್ರಾಮದ ವ್ಯಕ್ತಿ (30), ತುಮಕೂರು ತಾಲೂಕಿನ ಕೆಸ್ತೂರು ಗ್ರಾಮದ ಮಹಿಳೆ (52), ತಿಪಟೂರು ತಾಲೂಕಿನ ವ್ಯಕ್ತಿ (72), ಶಿರಾ ತಾಲೂಕಿನ ಸೊಪ್ಪಿನ ಹಟ್ಟಿ ಗ್ರಾಮದ ವ್ಯಕ್ತಿ (58), ತಿಪಟೂರು ತಾಲೂಕಿನ ಕಂಚಗಟ್ಟ ಗ್ರಾಮದ ಮಹಿಳೆ (67) ಒಟ್ಟು15 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!