ತುಮಕೂರು: ಉಸಿರಾಟದ ಸಮಸ್ಯೆಯಿಂದ ಮೇ 9 ರಂದು ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾಗಿದ್ದ ಡಿ.ಮಂಜುನಾಥ್ ಅವರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಿಲ್ಲೆಯ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಪತ್ರಿಕಾ ಸಂಪಾದಕರು, ವರದಿಗಾರರು, ಕಚೇರಿಯ ಅಧಿಕಾರಿ, ಸಿಬ್ಬಂದಿ ಸೇರಿದಂತೆ ಹಲವರು ಡಿ.ಮಂಜುನಾಥ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಮೌನಾಚರಣೆ ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಿದರು.
ನೂತನ ಪ್ರಭಾರ ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಜಿ. ಮಾತನಾಡಿ, ಮಂಜುನಾಥ ಅವರ ಅಗಲಿಕೆ ಅತೀವ ದುಃಖ ತಂದಿದೆ, ತುಂಬಾ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಅವರು ಜಿಲ್ಲೆಯ ಎಲ್ಲಾ ಇಲಾಖೆ ಅಧಿಕಾರಿ ಮತ್ತು ಪತ್ರಕರ್ತರೊಂದಿಗೆ ಬಹಳ ಹೊಂದಾಣಿಕೆಯಿಂದ ಸ್ನೇಹಮಯವಾಗಿದ್ದರು, ದಕ್ಷ, ನಿಷ್ಠಾವಂತ ಅಧಿಕಾರಿಯಾಗಿದ್ದ ಮಂಜುನಾಥ್ ನನ್ನೊಡನೆ ಒಡನಾಟ ಹೊಂದಿದ್ದರು, ಅವರ ಅಗಲಿಕೆ ಇಲಾಖೆಗೆ ತುಂಬಾಲಾರದ ನಷ್ಟವಾಗಿದೆ. ಅವರ ಸಾವು ಆಕಸ್ಮಿಕ, ರಾಜ್ಯದ ವಾರ್ತಾ ಇಲಾಖೆಯ ಎಲ್ಲಾ ವರ್ಗದ ಅಧಿಕಾರಿಗಳು ಇವರಿಗೆ ಸಂತಾಪ ಸೂಚಿಸಿದ್ದಾರೆ, ಇವರ ಸಾವು ದುರಂತವೇ ಸರಿ ಎಂದು ತಮ್ಮ ಮನದಾಳದ ನೋವನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಚಿ.ನಿ.ಪುರೋತ್ತಮ್ ಮಾತನಾಡಿ, ಎಲ್ಲರ ಜೊತೆಯೂ ಒಡನಾಡಿಯಾಗಿದ್ದ ಮಂಜುನಾಥ್ ಅವರ ಸಾವನ್ನು ಈಗಲೂ ನಂಬಲಾಗುತ್ತಿಲ್ಲ, ಜಿಲ್ಲೆಯಲ್ಲಿ ಐದು ವರ್ಷ ಉತ್ತಮವಾದ ಸೇವೆ ಸಲ್ಲಿಸಿದ್ದರು, ಅವರು ಬಹಳ ಸರಳ ಹಾಗೂ ಸ್ನೇಹಜೀವಿಯಾಗಿದ್ದರು. ಅಧಿಕಾರಿಯಾಗಿ ದರ್ಪ ತೋರದೆ ಮಾಧ್ಯಮ ಮಿತ್ರರೊಂದಿಗೆ ಸಹಾನುಭೂತಿಯಾಗಿ ನಡೆದುಕೊಳ್ಳುತ್ತಿದ್ದರು. ಎಲ್ಲರೊಡನೆ ಮುಕ್ತವಾಗಿ ಮಾತನಾಡುತ್ತಿದರು, ಇಂತಹ ಸರಳ ಸಜ್ಜನಿಕೆಯ ವ್ಯಕ್ತಿ ಅಗಲಿರುವುದು ತುಂಬ ದುಖಃಕರ, ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನೆರೆದಿದ್ದ ಅನೇಕ ಪತ್ರಕರ್ತರು ಮಂಜುನಾಥ್ ಅವರೊಡನೆ ತಮ್ಮ ಸ್ನೇಹ, ಸಂಬಂಧ ವಿಚಾರಗಳ ಕುರಿತು ಅಭಿಪ್ರಾಯಗಳನ್ನ ಹಂಚಿಕೊಂಡರು. ಈ ವೇಳೆ ವಾರ್ತಾ ಇಲಾಖೆಯ ಸಿಬ್ಬಂದಿ ಸೇರಿದಂತೆ ಜಿಲ್ಲೆಯ ಪತ್ರಿಕೆಗಳ ಸಂಪಾದಕರು, ವರದಿಗಾರರು, ಛಾಯಾ ಚಿತ್ರಗಾರರು ಹಾಜರಿದ್ದರು.
ವಾರ್ತಾಧಿಕಾರಿ ಡಿ.ಮಂಜುನಾಥ್ ನಿಧನಕ್ಕೆ ಪತ್ರಕರ್ತರಿಂದ ಶ್ರದ್ಧಾಂಜಲಿ
ಮಂಜುನಾಥ್ ಪ್ರಾಮಾಣಿಕ, ಸ್ನೇಹಜೀವಿ
Get real time updates directly on you device, subscribe now.
Prev Post
Next Post
Comments are closed.