2,156 ಮಂದಿಗೆ ಕೋವಿಡ್: 15 ಸಾವು

1,427

Get real time updates directly on you device, subscribe now.

ತುಮಕೂರು: ಸೋಮವಾರದಂದು ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತೆ 2,156 ಏರಿಕೆ ಕಂಡಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 793 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 65,267 ಕ್ಕೆ ಏರಿಕೆ ಕಂಡಿದೆ. 18,328 ಸಕ್ರಿಯ ಪ್ರಕರಣಗಳ ಪೈಕಿ 1,975 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 793, ಚಿನಾಹಳ್ಳಿ 203, ಗುಬ್ಬಿ 148, ಕೊರಟಗೆರೆ 106, ಕುಣಿಗಲ್ 66, ಮಧುಗಿರಿ 115, ಪಾವಗಡ 93, ಶಿರಾ 100, ತಿಪಟೂರು 314, ತುರುವೇಕೆರೆಯಲ್ಲಿ 218 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಕೋವಿಡ್ ನಿಂದ ತಿಪಟೂರು ತಾಲೂಕಿನ ಮಹಿಳೆ (38), ಚಿಕ್ಕನಾಯಕನಹಳ್ಳಿ ತಾಲೂಕಿನ ಹೊನ್ನೇಬಾಗಿ ಗ್ರಾಮದ ಮಹಿಳೆ (58), ಗುಬ್ಬಿ ತಾಲೂಕಿನ ಮಾರುತಿ ನಗರದ ವ್ಯಕ್ತಿ (65), ಪಾವಗಡ ತಾಲೂಕಿನ ಓಬಳಾಪುರ ಗ್ರಾಮದ ವ್ಯಕ್ತಿ (30), ಪಾವಗಡ ತಾಲೂಕಿನ ಮಹಿಳೆ (30), ಪಾವಗಡ ತಾಲೂಕಿನ ಮಹಿಳೆ (55), ತುಮಕೂರು ನಗರದ ಉಪ್ಪಾರಹಳ್ಳಿ ಬಡಾವಣೆಯ ವ್ಯಕ್ತಿ (60), ಅನ್ಯಕಾರಣದಿಂದ ಗುಬ್ಬಿ ತಾಲೂಕಿನ ವ್ಯಕ್ತಿ (57), ಶಿರಾ ತಾಲೂಕಿನ ಭುವನಹಳ್ಳಿ ಗ್ರಾಮದ ವ್ಯಕ್ತಿ (73), ಶಿರಾ ತಾಲೂಕಿನ ಕಲ್ಲಾಪುರ ಗ್ರಾಮದ ಮಹಿಳೆ (63), ತುಮಕುರು ನಗರದ ವಿನೋಭ ನಗರದ ವ್ಯಕ್ತಿ (71), ಶಿರಾ ತಾಲೂಕಿನ ಸೋರೆಕುಂಟೆ ಗ್ರಾಮದ ವ್ಯಕ್ತಿ (60), ತುಮಕೂರು ನಗರದ ಎಸ್ಐಟಿ ಬಡಾವಣೆಯ ಮಹಿಳೆ (50),ತುಮಕೂರು ನಗರ ಬಟವಾಡಿ ಬಡಾವಣೆಯ ಮಹಿಳೆ (53), ತುಮಕೂರು ನಗರ ಸರಸ್ವತಿಪುರಂ ಬಡಾವಣೆಯ ವ್ಯಕ್ತಿ (42) ಒಟ್ಟು15 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!