ಕುಣಿಗಲ್‌ ನಲ್ಲಿ ಅನಗತ್ಯ ವಾಹನ ಸಂಚಾರಕ್ಕೆ ತಡೆ

87

Get real time updates directly on you device, subscribe now.

ಕುಣಿಗಲ್‌: ಸೋಮವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು ಕೊರೊನ ಎರಡನೆ ಅಲೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಲಾಕ್ ಡೌನ್‌ ಮಾಡಲು ಪಟ್ಟಣದ ನಾಲ್ಕುಕಡೆ ಚೆಕ್‌ಪೋಸ್ಟ್ ಮಾಡಿ ಅನಗತ್ಯ ವಾಹನಕ್ಕೆ ಸಂಚಾರಕ್ಕೆ ತಡೆಹಾಕಿದರು.
ಸೋಮವಾರ ಬೆಳಗ್ಗೆ ಆರುಗಂಟೆ ವೇಳೆಗೆ ಚೆಕ್‌ ಪೋಸ್ಟ್ ನಲ್ಲಿ ನಿಯೋಜಿತರಾದ ಪೊಲೀಸರು, ಪಟ್ಟಣಕ್ಕೆ ಆಗಮಿಸಿದ ವಾಹನ ಸವಾರರನ್ನು ತಡೆದು ವಿಚಾರಣೆ ಮಾಡಿದರು, ರೈತರು, ತರಕಾರಿ ಮಾರಾಟಗಾರರು ಸೇರಿದಂತೆ ಅಗತ್ಯ ಸೇವೆಯಲ್ಲಿರುವವರಿಗೆ ವಿನಾಯಿತಿ ನೀಡಿದರು. ಕೆಲವರು ವಾಹನದಲ್ಲಿ ಆಗಮಿಸಿ ಸೂಕ್ತ ಕಾರಣ ನೀಡದೆ ಇದ್ದಾಗ ಪೊಲೀಸರು ತಡೆ ಹಾಕಿದ್ದು ಪೊಲೀಸರೊಂದಿಗೆ ವಾಗ್ವಾದ ನಡೆಸಿ, ಸರ್ಕಾರಕ್ಕೆ ಹಿಡಿಶಾಪ ಹಾಕಿದರು.
ಸರ್ಕಾರದ ಲಾಕ್ ಡೌನ್‌ ನೀತಿಯಲ್ಲಿ ಬೆಳಗ್ಗೆ ಹೊತ್ತು ವಾಹನ ಬಳಕೆ ನಿಷೇಧಿಸಿರುವ ಬಗ್ಗೆ ತಾಲೂಕು ಜೆಡಿಎಸ್‌ ಅಧ್ಯಕ್ಷ ಕೆ.ಎಲ್‌.ಹರೀಶ್‌ ಅಸಮಾಧಾನ ವ್ಯಕ್ತಪಡಿಸಿ, ವೃದ್ಧರು, ವಿಕಲಾಂಗರು ಸೇರಿದಂತೆ ಬಹುತೇಕರು ವಾಹನಗಳನ್ನು ಅವಲಂಬಿಸಿದ್ದಾರೆ. ಬೆಳಗ್ಗೆ ಖರೀದಿ ಸಮಯದಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕು, ಪಟ್ಟಣದ ಕೆಲ ಬಡಾವಣೆಗಳು ಹೃದಯಭಾಗದಿಂದ ಎರಡು ಮೂರು ಕಿ.ಮೀ ಇದೆ, ಇವರೆಲ್ಲರೂ ನಡೆದುಕೊಂಡು ಬಂದು ಅಗತ್ಯ ವಸ್ತು ಖರೀದಿ ಮಾಡಲಾಗುತ್ತದೆಯೆ. ಸರ್ಕಾರ ಖರೀದಿಗೆ ಅವಕಾಶ ಮಾಡಿರುವ ಸಮಯದಲ್ಲಿ ವಾಹನ ಬಳಕೆಗೆ ಅವಕಾಶ ನೀಡಿ ಜನರ ಸಮಸ್ಯೆಗ ಸ್ಪಂದಿಸಬೇಕು, ಈ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಜನರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!