ಹೋಬಳಿಗೊಂದರಂತೆ ಕೇರ್‌ ಸೆಂಟರ್‌: ವೀರಭದ್ರಯ್ಯ

255

Get real time updates directly on you device, subscribe now.

ಮಧುಗಿರಿ: ತಾಲ್ಲೂಕಿನಲ್ಲಿ ಹೋಬಳಿಗೊಂದರಂತೆ ಕೋವಿಡ್‌ ಕೇರ್ ಸೆಂಟರ್‌ ತೆರೆಯಲು ತಹಸೀಲ್ದಾರ್ ಗೆ ಸೂಚಿಸಲಾಗಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ನಂತರ ಮಾತನಾಡಿ, ಈ ಆಸ್ಪತ್ರೆಯಲ್ಲಿ ಐವತ್ತು ಆಕ್ಸಿಜನ್‌ ಬೆಡ್‌ ಮತ್ತು 5 ಐಸಿಯು ಬೆಡ್ ಗಳು ಭರ್ತಿಯಾಗಿದೆ, ಇಲ್ಲಿಯವರೆಗೂ ಹದಿನೇಳು ಸಾವು ಸಂಭವಿಸಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ, ಕೊರೊನಾ ಹೆಮ್ಮಾರಿ ಹೆಚ್ಚುತ್ತಿದ್ದು ಪ್ರಾಥಮಿಕ ಹಂತದಲ್ಲಿ ಸೋಂಕು ಕಂಡು ಬಂದಲ್ಲಿ ಅಂಥವರನ್ನು ಮನೆಯಲ್ಲೇ ಓಂ ಐಸೋಲೇಷನ್‌ ಮಾಡಲಾಗುತ್ತಿತ್ತು, ಈಗ ಪ್ರತಿ ಹೋಬಳಿಗೊಂದು ನೂರು ಹಾಸಿಗೆಗಳುಳ್ಳ ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲು ತೀರ್ಮಾನಿಸಲಾಗಿದೆ, ಈ ಕೇರ್‌ ಸೆಂಟರ್ ನಲ್ಲಿ ವೈದ್ಯರು, ನರ್ಸ್‌ಗಳು ಮತ್ತು ಸ್ಟಾಪ್ ಗಳು ಇರುತ್ತಾರೆ, ಮಧುಗಿರಿಯಲ್ಲಿ ಯಾವುದೇ ಆಕ್ಸಿಜನ್‌ ಮತ್ತು ಬೆಡ್ ಗಳ ಕೊರತೆ ಕಂಡು ಬಂದಿಲ್ಲ ಎಂದರು.
ನಾನು ನನ್ನ ಶಾಸಕರ ಅನುದಾನದಲ್ಲಿ ಇಪ್ಪತ್ತು ಲಕ್ಷ ರೂ. ವೆಚ್ಚದಲ್ಲಿ 1 ಶಾಶ್ವತ ಆ್ಯಂಬುಲೆನ್ಸ್ ನೀಡುತ್ತೇನೆ, ಜೊತೆಗೆ ಕೋವಿಡ್‌ ಅವಧಿ ಮುಗಿಯುವವರೆಗೂ 2ಆ್ಯಂಬುಲೆನ್ಸ್‌, 5 ಲೀಟರ್‌ನ ಐವತ್ತು ಸ್ಯಾನಿಟೈಜರ್‌, ಇನ್ನೂರ ಐವತ್ತು ಬೆಡ್ ಶೀಟ್ ಗಳು, 100 ಪಿಪಿಇ ಕಿಟ್ ಗಳನ್ನು ನೀಡುತ್ತೇನೆ ಎಂದರು.

ಆತಂಕ ಬೇಡ: ಕೋವಿಡ್‌ ಸೋಂಕು ಬಂತೆಂದು ಯಾರೂ ಆತಂಕಕ್ಕೆ ಒಳಗಾಗಬೇಡಿ, ಔಷಧಿ ನಮ್ಮ ಕೈಯಲ್ಲೇ ಇದೆ, ಶುಚಿತ್ವ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್‌ ಬಳಸುವುದು, ದೈಹಿಕ ಅಂತರ ಪಾಲಿಸುವುದು ಹಾಗೂ ಸರಕಾರದ ಗೈಡ್ ಲೈನ್ ಗಳನ್ನು ಯಥಾವತ್ತಾಗಿ ಪಾಲಿಸುವ ಮೂಲಕ ಕೊರೊನ ದೂರವಿಡಬಹುದು ಎಂದರು.
ಈ ವೇಳೆ ತಹಶೀಲ್ದಾರ್‌ ವೈ.ರವಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಮೇಶ್‌ ಬಾಬು, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ, ಡಾ.ಗಂಗಾಧರ್‌, ಪುರಸಭಾ ಸದಸ್ಯರಾದ ಎಂ.ಆರ್‌.ಜಗನ್ನಾಥ್‌, ಎಂ.ಎಲ್‌.ಗಂಗರಾಜು, ಎಂ.ಎಸ್‌.ಚಂದ್ರಶೇಖರ್‌ ಬಾಬು, ನಾರಾಯಣ್‌, ಸಿಪಿಐ ಎಂ.ಎಸ್‌.ಸರ್ದಾರ್‌, ಪಿಎಸ್‌ ಐ ಮಂಗಳಗೌರಮ್ಮ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!