ಕೊರೊನಾ ಪ್ರಕರಣಗಳ ಅಂಕಿ-ಅಂಶ ಆತಂಕ ಮೂಡಿಸಿದೆ: ಸ್ವಾಮಿನಾಥನ್‌

385

Get real time updates directly on you device, subscribe now.

ದೆಹಲಿ: ಕೊರೊನಾದ ಎರಡನೇ ಅಲೆ ಭಾರತದಲ್ಲಿ ಹೆಚ್ಚಾಗಿದ್ದು, ಸೋಂಕಿನ ಪ್ರಕರಣಗಳು ಮತ್ತು ಸಾವಿನ ಪ್ರಮಾಣ ಏರುತ್ತಿರುವುದು ಆತಂಕಕಾರಿ ವಿಚಾರ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್‌ ತಿಳಿಸಿದ್ದಾರೆ.
ಭಾರತ ಮತ್ತು ಆಗ್ನೇಯ ದೇಶಗಳಲ್ಲಿನ ಕೋವಿಡ್‌ ವರದಿ ಮತ್ತು ಸಾವಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ, ಇಷ್ಟರ ಮಟ್ಟಿಗೆ ಕೊರೊನಾ ಪ್ರಕರಣ ಏರಿಕೆ ಕಾಣುತ್ತದೆ ಎಂದು ಊಹಿಸಿರಲಿಲ್ಲ, ಕೇವಲ ಕೊರೊನಾ ಮಾತ್ರವಲ್ಲದೇ ಇತರೆ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಪಡೆಯದೇ ಜೀವ ಕಳೆದುಕೊಳ್ಳುತಿದ್ದಾರೆ ಈ ವಿಚಾರದ ಕಡೆ ಗಮನಹರಿಸಬೇಕಿದೆ ಎಂದರು.
ರೂಪಾಂತರ ವೈರಸ್‌ ಹರಡುವಿಕೆ ಇದರಿಂದ ಆಗುವ ರೋಗದ ಪರಿಣಾಮ ಹೆಚ್ಚು, ಲಸಿಕೆ ಪಡೆದುಕೊಂಡವರಿಗೆ ಪ್ರತಿಕಾಯ ಪ್ರತಿಕ್ರಿಯೆಗಳ ಬಗ್ಗೆ ಭಾರತದಲ್ಲಿ ಅಧ್ಯಯನ ನಡೆಯುತ್ತಿದೆ ಎಂದು ರಾಷ್ಟ್ರ ರಾಜಧಾನಿ ಸುದ್ದಿ ಮೂಲಗಳು ತಿಳಿಸಿವೆ.

Get real time updates directly on you device, subscribe now.

Comments are closed.

error: Content is protected !!