ಚಿಕ್ಕನಾಯಕನಹಳ್ಳಿ: ಪಟ್ಟಣದ 6ನೇ ವಾರ್ಡ್ ಕಲ್ಲೇನಹಳ್ಳಿಯ ನಿವಾಸಿ ಶಿವರಾಜು ತೋಟದ ಬಳಿ ಹೋಗುವ ಸಂದರ್ಭದಲ್ಲಿ ಹಾವು ಕಚ್ಚಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಸುತ್ತಿದರು ಸಹ ಸರಿಯಾದ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದು, ಕೂಲಿ ಕೆಲಸ ಮಾಡಿ ಸಂಸಾರ ನೋಡಿಕೊಳ್ಳುತ್ತಿದ್ದ ಕುಟುಂಬಕ್ಕೆ ಅಘಾತವಾಗಿದೆ.
ಕೃಷಿ ಚಟುವಟಿಕೆ ಹಾಗೂ ಕೂಲಿ ಕೆಲಸ ಮಾಡುತ್ತಿದ್ದ ಶಿವರಾಜು ತೋಟಕ್ಕೆ ಹೋಗುವ ಸಂದರ್ಭದಲ್ಲಿ ಹಾವು ಕಚ್ಚಿದ್ದು, ಕುಟುಂಬದವರು ತಕ್ಷಣ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು, ಆದರೆ ಆಸ್ಪತ್ರೆಯಲ್ಲಿ ಯಾವುದೇ ಚಿಕಿತ್ಸೆ ನೀಡದೆ ತುಮಕೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ, ತುಮಕೂರಿಗೆ ಹೋದ ಸಂದರ್ಭದಲ್ಲಿ ಅಲ್ಲಿಯೂ ಯಾವ ಚಿಕಿತ್ಸೆ ಸಿಗದಿದ್ದಾಗ ತಿಪಟೂರಿಗೆ ಕರೆದುಕೊಂಡು ಬಂದ ಸಂದರ್ಭದಲ್ಲಿ ಶಿವರಾಜು ಸಾವನಪ್ಪಿದ್ದಾರೆ, ಚಿಕ್ಕನಾಯಕನಹಳ್ಳಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮಾಡದಿರುವುದು ಹಾಗೂ ತಾಲೂಕಿನಲ್ಲಿ ಬಹುತೇಕ ಭಾಗ ಕೃಷಿ ಚಟುವಟಿಕೆಯನ್ನು ಆವಲಂಭಿಸಿದ್ದು ರೈತರಿಗೆ ಹೊಲ ತೋಟಗಳಿಗೆ ಹೋದ ಸಂದರ್ಭದಲ್ಲಿ ಹಾವು ಕಡಿತ ಸಮಾನ್ಯವಾಗಿರುತ್ತದೆ, ಇಂತಹ ಸಂದರ್ಭದಲ್ಲಿ ಹಾವು ಕಡಿತಕ್ಕೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದಿರುವುದು ದುರಂತ.
ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಶಿವರಾಜು ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದು ಸರ್ಕಾರ ಇವರ ಕುಟುಂಬಕ್ಕೆ ಪರಿಹಾರ ನೀಡಬೇಕಿದೆ. ತಾಲೂಕಿನಲ್ಲಿ ಶಿವರಾಜುಗೆ ಆದಾ ಪರಿಸ್ಥಿತಿ ಬೇರೆಯವರಿಗೆ ಆಗದಂತೆ ಹಾವು ಕಡಿತಕ್ಕೆ ಸೂಕ್ತ ಚಿಕಿತ್ಸೆ ನೀಡುವಂತಾಗಲಿ ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.
ಹಾವು ಕಡಿತ- ಚಿಕಿತ್ಸೆ ಸಿಗದೆ ವ್ಯಕ್ತಿ ಸಾವು
Get real time updates directly on you device, subscribe now.
Prev Post
Next Post
Comments are closed.