ಜಿಲ್ಲಾ ಮಟ್ಟದ ಕಂಟ್ರೋಲ್‌ ರೂಂ ಸ್ಥಾಪನೆ

285

Get real time updates directly on you device, subscribe now.

ತುಮಕೂರು: ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾತ್ತಿದ್ದು, ಆಸ್ಪತ್ರೆಗಳಲ್ಲಿ ಸೂಕ್ತ ಬೆಡ್‌ ಸಿಗುತ್ತಿಲ್ಲವೆಂಬ ದೂರುಗಳು ಬರುತ್ತಿರುವ ಕಾರಣ ಹೊಸದಾಗಿ ಜಿಲ್ಲಾ ಮಟ್ಟದ ಕಂಟ್ರೋಲ್‌ ರೂಂ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ತಿಳಿಸಿದ್ದಾರೆ.
ಯಾವುದೇ ವ್ಯಕ್ತಿಗೆ ಕೆಮ್ಮು, ಜ್ವರ, ಮೈಕೈ ನೋವು ಇತರೆ ಕೋವಿಡ್‌-19 ಸೋಂಕಿಗೆ ಸಂಬಂಧಿಸಿದಂತಹ ಲಕ್ಷಣಗಳು ಕಂಡು ಬಂದಲ್ಲಿ ಅಂತಹವರು ಕೋವಿಡ್‌- 19 ಕಂಟ್ರೋಲ್‌ ರೂಂ ಗೆ ಕರೆ ಮಾಡಿ ಸೂಕ್ತ ವೈದ್ಯಕೀಯ ಸಲಹೆ ಪಡೆಯಬೇಕು. ಕೋವಿಡ್‌ ಸೋಂಕು ದೃಢಪಟ್ಟಲ್ಲಿ ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಂಡಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಲೂ ಈ ಕಂಟ್ರೋಲ್‌ ರೂಂ ವ್ಯವಸ್ಥೆಯನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಮನವಿ ಮಾಡಿದ್ದಾರೆ.
ಅಲ್ಲದೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಮಟ್ಟದಲ್ಲಿ ತಾಲೂಕು ಆಸ್ಪತ್ರೆಗಳಲ್ಲಿ ಟ್ರಯಾಜ್‌ ಸೆಂಟರ್‌ ಅನ್ನು ಸ್ಥಾಪನೆ ಮಾಡಲಾಗಿದ್ದು, ತುರ್ತು ಚಿಕಿತ್ಸೆಗಾಗಿ ಈ ಟ್ರಯಾಜ್‌ ಸೆಂಟರ್ ಗೆ ಆಗಮಿಸಬಹುದಾಗಿದೆ ಅಥವಾ ಆ್ಯಂಬುಲೆನ್ಸ್ ವ್ಯವಸ್ಥೆಗಾಗಿಯೂ ಈ ಕಂಟ್ರೋಲ್‌ ರೂಂ ನಿಂದ ಸಹಾಯ ಪಡೆಯಬಹುದಾಗಿದೆ. ಈ ಟ್ರಯಾಜ್‌ ಸೆಂಟರ್ ಗಳಲ್ಲಿ ಹೆಲ್ತ್ ಡೆಸ್ಕ್ ಸ್ಥಾಪನೆಯಾಗಿದ್ದು, ಇಲ್ಲಿ ಯಾವ ಸರ್ಕಾರಿ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಬೆಡ್‌ ವ್ಯವಸ್ಥೆ ಇದೆಯೆಂದು ಮಾಹಿತಿ ಪಡೆದು ಬೆಡ್‌ ಬ್ಲಾಕ್‌ ಮಾಡಿ 3 ಗಂಟೆಯೊಳಗೆ ಸದರಿ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೋವಿಡ್‌ ಸೋಂಕಿಗೆ ಒಳಗಾಗಿರುವ ಜನರಲ್ಲಿ ಕೆಲವರಿಗೆ ಮಾತ್ರ ಆಸ್ಪತ್ರೆಯ ವ್ಯವಸ್ಥೆ ಬೇಕಾಗಿರುತ್ತದೆ. ಆದ ಕಾರಣ ಯಾವುದೇ ಗಾಳಿ ಸುದ್ದಿಗೆ ಕಿವಿಗೊಡದೆ ತಮ್ಮ ಆರೋಗ್ಯದ ಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ವೈದ್ಯರ ಸಲಹೆ ಇದ್ದರೆ ಮಾತ್ರ ಆಸ್ಪತ್ರೆಗೆ ದಾಖಲಾಗಲು ಮುಂದಾಗಬೇಕು. ಒಂದು ನಿಮಿಷ ಕಾಲ ಪಲ್ಸ್ ಆಕ್ಸಿ ಮೀಟರ್ ನ್ನು ತಮ್ಮ ಬೆರಳಿಗೆ ಹಾಕಿ ಕೊಂಡಾಗ ಪಲ್ಸ್ ಲೆವೆಲ್‌ 94 ಕ್ಕಿಂತ ಕಡಿಮೆ ಬಂದಾಗ ಮಾತ್ರ ತಾವು ಈ ಕಂಟ್ರೋಲ್‌ ರೂಂ ಗೆ ಕರೆ ಮಾಡಬೇಕು. ಯಾವುದೇ ಒತ್ತಡಕ್ಕೆ ಒಳಗಾಗದೆ ಶಾಂತಿಯುತವಾಗಿ ಬೆಡ್‌ ಸಿಗುವ ತನಕ ಎಲ್ಲಿ ಐಸೋಲೇಟ್‌ ಆಗಿದ್ದಿರೋ ಅಲ್ಲಿಯೇ ಪ್ರೋನಿಂಗ್‌ ಟೆಕ್ನಿಕ್‌ ಅನ್ನು ಬಳಸಿ ತಮ್ಮ ದೇಹದಲ್ಲಿನ ಆಕ್ಸಿಜನ್‌ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ಕೋವಿಡ್‌ 19 ಗೆ ಸಂಬಂಧಿಸಿದ ತುರ್ತು ಮಾಹಿತಿಗಾಗಿ ದಿನದ 24 ಗಂಟೆಗಳ ಕಾಲ ಈ ಕಂಟ್ರೋಲ್‌ ರೂಮ್‌ ನಂಬರ್‌ ಗಳು ಕಾರ್ಯನಿರ್ವಹಿಸಲಿವೆ. ಅಗತ್ಯವಿರುವವರು ಕಂಟ್ರೋಲ್‌ ರೂಮ್‌ ಸಂಖ್ಯೆ 0816- 2213401, 0816- 2213402, 0816- 2213403, 0816- 2213404, 0816- 2213405ನ್ನು ಸಂಪರ್ಕಿಸಬೇಕು. ಕರೆ ಮಾಡಿದಾಗ ಸೋಂಕಿತರ ಹೆಸರು, ವಯಸ್ಸು, ಲಿಂಗ, ಸೋಂಕಿತರ ಅಥವಾ ಅಸಿಸ್ಟೆಂಟ್ ನ ಮೊಬೈಲ್‌ ನಂಬರ್‌ ಮತ್ತಿತರ ಮಾಹಿತಿ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ

Get real time updates directly on you device, subscribe now.

Comments are closed.

error: Content is protected !!