1,457 ಮಂದಿಗೆ ಕೋವಿಡ್: 16 ಸಾವು

477

Get real time updates directly on you device, subscribe now.

ತುಮಕೂರು: ಮಂಗಳವಾರದಂದು ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತೆ 1,457ಏರಿಕೆ ಕಂಡಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 430 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 66,724 ಕ್ಕೆ ಏರಿಕೆ ಕಂಡಿದೆ. 18,181 ಸಕ್ರಿಯ ಪ್ರಕರಣಗಳ ಪೈಕಿ 1,588 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 430, ಚಿನಾಹಳ್ಳಿ 74, ಗುಬ್ಬಿ 49, ಕೊರಟಗೆರೆ 30, ಕುಣಿಗಲ್ 169, ಮಧುಗಿರಿ 127, ಪಾವಗಡ 148, ಶಿರಾ 282, ತಿಪಟೂರು 92, ತುರುವೇಕೆರೆಯಲ್ಲಿ 56 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಕೋವಿಡ್ ನಿಂದ ಮಧುಗಿರಿ ತಾಲೂಕಿನ ಮಹಿಳೆ (50), ಮಧುಗಿರಿ ತಾಲೂಕಿನ ಕೋಡ್ಲಾಪುರ ಗ್ರಾಮದ ವ್ಯಕ್ತಿ (43), ಗುಬ್ಬಿ ತಾಲೂಕಿನ ಚಿಂದಿಗೆರೆ ಗ್ರಾಮದ ವ್ಯಕ್ತಿ (46), ತುಮಕೂರು ನಗರ ಹನುಮಂತಪುರದ ವ್ಯಕ್ತಿ (69), ತುಮಕೂರು ನಗರದ ಕ್ಯಾತಸಂದ್ರದ ಗಾಣಿಗರ ಬೀದಿಯ ಮಹಿಳೆ (43), ತುಮಕೂರು ತಾಲೂಕಿನ ಕನ್ನೇನಹಳ್ಳಿ ಗ್ರಾಮದ ವ್ಯಕ್ತಿ (45), ತುಮಕೂರು ನಗರದ ಉಪ್ಪಾರಹಳ್ಳಿ ಬಡಾವಣೆಯ ವ್ಯಕ್ತಿ (41), ಗುಬ್ಬಿ ತಾಲೂಕಿನ ಕಲ್ಲಹಳ್ಳಿ ಗ್ರಾಮದ ವ್ಯಕ್ತಿ (40), ಪಾವಗಡ ತಾಲೂಕಿನ ಪಳವಳ್ಳಿ ಗ್ರಾಮದ ವ್ಯಕ್ತಿ (40), ಅನ್ಯಕಾರಣದಿಂದ ಕೊರಟಗೆರೆ ತಾಲೂಕಿನ ನಾಗಸಂದ್ರ ಗ್ರಾಮದ ವ್ಯಕ್ತಿ (67), ತುಮಕೂರು ನಗರ ಶ್ರೀರಾಮ ನಗರದ ವ್ಯಕ್ತಿ (55), ತುಮಕೂರು ನಗರ ಲೇಬರ್ ಕಾಲೋನಿಯ ವ್ಯಕ್ತಿ (70), ಪಾವಗಡ ತಾಲೂಕಿನ ನಾಗಲಪುರ ಗ್ರಾಮದ ಮಹಿಳೆ (45), ಪಾವಗಡ ತಾಲೂಕಿನ ತಿಮ್ಮನಹಳ್ಳಿ ಗ್ರಾಮದ ಮಹಿಳೆ (58), ಗುಬ್ಬಿ ತಾಲೂಕಿನ ವ್ಯಕ್ತಿ (70), ಮಧುಗಿರಿ ತಾಲೂಕಿನ ವ್ಯಕ್ತಿ (60) ಒಟ್ಟು16 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!