ಕುಣಿಗಲ್: ಕೊವಿಡ್ ವ್ಯಾಕ್ಸಿನ್ ಪಡೆಯಲು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾಮಾಜಿಕ ಅಂತರ ಮರೆತು ನೂಕು ನುಗ್ಗಲಿಗೆ ಕಾರಣವಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿನ ವ್ಯಾಕ್ಸಿನ್ ಕೇಂದ್ರವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವಂತೆ ವಿವಿಧ ಪಕ್ಷಗಳು ಮುಖಂಡರು ಆಗ್ರಹಿಸಿದ್ದಾರೆ.
ಕೊವಿಡ್ ಎರಡನೆ ಅಲೆ ಪ್ರಾರಂಭವಾದ ಏಪ್ರಿಲ್ ಮೊದಲ ವಾರದಲ್ಲಿ ಆರೋಗ್ಯ ಇಲಾಖೆ ಪುರಸಭೆ ಸಹಯೋಗದೊಂದಿಗೆ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ವ್ಯಾಕ್ಸಿನ್ ಕೇಂದ್ರ ಮಾಡಿ ವ್ಯಾಕ್ಸಿನ್ ಪಡೆಯುವಂತೆ ಪುರಸಭೆ, ಆರೋಗ್ಯ, ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳು ಜಾಥಾ ಮಾಡಿ ಮನವಿ ಮಾಡಿದರೂ ಜನ ವ್ಯಾಕ್ಸಿನ್ ಪಡೆಯಲು ಮುಂದೆ ಬಂದಿರಲಿಲ್ಲ. ಆದರೆ ಒಂದು ತಿಂಗಳ ಅವಧಿಯಲ್ಲೆ ಜನ ವ್ಯಾಕ್ಸಿನ್ ಪಡೆಯಲು ಮುಗಿ ಬೀಳುತ್ತಿದ್ದು ಸುಮಾರು ಒಂದು ವಾರಗಳ ಕಾಲ ವ್ಯಾಕ್ಸಿನ್ ಕೊರತೆ ಇಂದ ವ್ಯಾಕ್ಸಿನೇಶನ್ ಕಾರ್ಯಕ್ರಮ ಸ್ಥಗಿತಗೊಳಿಸಿ ಇದೀಗ ಚಾಲನೆ ನೀಡಲಾಗಿದೆ. ಕೊವಿಡ್ ಎರಡನೆ ಅಲೆಯಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿ ವ್ಯಾಕ್ಸಿನ್ ಪಡೆದವರು ಸೋಂಕಿನಿಂದ ಪಾರಾದ ಬಗ್ಗೆ ವರದಿಗಳು ವ್ಯಾಪಕವಾಗಿ ಪ್ರಕಟಗೊಂಡ ಕಾರಣ ಇದೀಗ ವ್ಯಾಕ್ಸಿನ್ ಪಡೆಯಲು ಜನ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯ ಕೊವಿಡ್ ವಾರ್ಡ್ ಸಮೀಪವೆ ವ್ಯಾಕ್ಸಿನೇಶನ್ ಕೇಂದ್ರ ಇದ್ದು ಹಿರಿಯರು ಹೆದರಿಕೊಂಡು ವ್ಯಾಕ್ಸಿನ್ ಪಡೆಯಲು ಬಂದರೆ ಇದೀಗ ರಾಜ್ಯಸರ್ಕಾರ 18ರ ಮೇಲ್ಪಟ್ಟ ವಯೋಮಾನದವರಿಗೂ ಅವಕಾಶ ನೀಡಿದ ಕಾರಣ, ಸೋಮವಾರದಿಂದ ವ್ಯಾಕ್ಸಿನ್ ಸರಬರಾಜ ಕಾರಣ ವ್ಯಾಕ್ಸಿನ್ ಪಡೆಯಲು ಜನ ವ್ಯಾಕ್ಸಿನೇಶನ್ ಕೇಂದ್ರಕ್ಕೆ ಎಡತಾಕುತ್ತಿದ್ದರೆ, ಹಿರಿಯರು, 18ರ ಮೇಲ್ಪಟ್ಟವರು ಬರುತ್ತಿರುವ ಕಾರಣ ಜನದಟ್ಟಣೆ ಹೆಚ್ಚಾಗುತ್ತಿದೆ. ಈ ಮಧ್ಯೆ ಸ್ಥಳೀಯರಿಗಿಂತ ಬೆಂಗಳೂರಿನಿಂದ ವಿವಿಧೆಡೆ ಬಂದಿರುವವರೆ ಹೆಚ್ಚಾಗಿ ವ್ಯಾಕ್ಸಿನ್ ಪಡೆಯುತ್ತಿದ್ದಾರೆ.
ಜನ ಹೆಚ್ಚಾದ ಕಾರಣ ವ್ಯಾಕ್ಸಿನೇಶನ್ ಕೇಂದ್ರದ ಬಳಿ ಸಾಮಾಜಿಕ ಅಂತರವೆ ಮರೆತಿದೆ, ಇನ್ನು ಕೊವಿಡ್ ವಾರ್ಡ್ ಪಕ್ಕದಲ್ಲೆ ಇರುವ ಕಾರಣ ಅಲ್ಲದೆ ಇಡೀ ಆಸ್ಪತ್ರೆಯನ್ನೆ ಕೊವಿಡ್ ಆಸ್ಪತ್ರೆಯನ್ನಾಗಿ ಮಾರ್ಪಾಟಾಗಿ ಮಾಡಿರುವುದರಿಂದ ವ್ಯಾಕ್ಸಿನ್ ಪಡೆಯಲು ಬಂದವರು ಸೋಂಕಿಗೆ ಒಳಗಾಗುವ ಆತಂಕ ಹೆಚ್ಚಾಗಿರುವ ಕಾರಣ ತಾಲೂಕು ಆಡಳಿತ ಕೂಡಲೆ ಅಗತ್ಯ ಕ್ರಮ ಕೈಗೊಂಡು ವ್ಯಾಕ್ಸಿನೇಶನ್ ಕೇಂದ್ರವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಬಿಜೆಪಿ ಅಧ್ಯಕ್ಷ ಬಲರಾಮ್, ಜೆಡಿಎಸ್ ಅಧ್ಯಕ್ಷ ಕೆ.ಎಲ್.ಹರೀಶ್, ಪುರಸಭೆ ಸದಸ್ಯ ರಂಗಸ್ವಾಮಿ, ಕನ್ನಡಪರ ಸಂಘಟನೆಯ ಪ್ರಮುಖ ಮಾರುತಿ ಒತ್ತಾಯಿಸಿದ್ದಾರೆ.
Get real time updates directly on you device, subscribe now.
Next Post
Comments are closed.