ನಿಟ್ಟೂರು: ಗುಬ್ಬಿ ತಾಲ್ಲೂಕಿನ ನಿಟ್ಟೂರು, ಕಡಬ, ಹೊಸಕೆರೆ, ಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಾಳೆ, ತೆಂಗು, ಅಡಿಕೆ, ಮಾವು, ಹಲಸು ಸೇರಿದಂತೆ ಬಹುತೇಕ ಮರಗಳು ಸೋಮವಾರ ರಾತ್ರಿ ಗಾಳಿ ಮಳೆಗೆ ನೆಲಕ್ಕೆ ಉರುಳಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಅಡಿಕೆ ಮರದಲ್ಲಿ 20 ರಿಂದ 25 ಕೆಜಿಗೂ ಹೆಚ್ಚು ಅಡಿಕೆಯ ಹೊಂಬಾಳೆ ಇತ್ತು, ಬೀಸಿದ ಗಾಳಿಗೆ ಸಾಕಷ್ಟು ಮರಗಳು ಕೆಳಗೆ ಬಿದ್ದಿವೆ, ವಿದ್ಯುತ್ ಕಂಬಗಳ ಮೇಲೆ ಮರಗಳು ಉರುಳಿರುವುದರಿಂದ ರಾತ್ರಿಯಿಡಿ ಹಲವು ಗ್ರಾಮಗಳು ಕತ್ತಲೆಯಲ್ಲೇ ಮುಳುಗಿದ್ದು ಸಾಕಷ್ಟು ಸಮಸ್ಯೆ ಅನುಭವಿಸಿವೆ, ಈ ನಿಟ್ಟಿನಲ್ಲಿ ಬೆಸ್ಕಾಂ ಸಂಪರ್ಕ ಮಾಡಿದರೆ ನೌಕರರ ಸಮಸ್ಯೆ ಇದೆ ಎನ್ನುವ ಉತ್ತರ ನೀಡುತ್ತಾರೆ, ಏಕಾ ಕಾಲದಲ್ಲಿ ಈ ರೀತಿ ಆದಾಗ ವಿದ್ಯುತ್ ನೀಡುವುದು ಸಮಸ್ಯೆಯಾಗುತ್ತದೆ, ಆದಷ್ಟು ಬೇಗ ವಿದ್ಯುತ್ ನೀಡಲಾಗುತ್ತದೆ ಎನ್ನುತ್ತಾರೆ.
ಪುರದ ಗ್ರಾಮದ ಶಂಕರಾನಂದ ಮಾತನಾಡಿ, ಇಂಥ ಸಂದರ್ಭದಲ್ಲಿ ವಿದ್ಯುತ್ ಅವಶ್ಯಕವಾಗಿ ಬೇಕಾಗಿದೆ, ಕುಡಿಯುವ ನೀರಿನಿಂದ ಹಿಡಿದು ಈಗ ಕೊರೊನಾ ಹಿನ್ನಲೆಯಲ್ಲಿ ಆಸ್ಪತ್ರೆಗೆ ಸಹ ವಿದ್ಯುತ್ ಅವಶ್ಯಕತೆ ಇರುವುದರಿಂದ ವಿದ್ಯುತ್ ಸರಬರಾಜು ಮಾಡಲು ಬೇಕಾದ ನೌಕರರನ್ನು ಒದಗಿಸುವುದು ಸೂಕ್ತ ಎಂದು ಮನವಿ ಮಾಡಿದ್ದಾರೆ.
ಕಚೇರಿಗಳು ಕೊರೊನಾ ಹಿನ್ನಲೆಯಲ್ಲಿ ಇಲ್ಲ, ಹಾಗಾಗಿ ವರ್ಕ್ ಪ್ರಮ್ ಹೋಮ್ ನಲ್ಲಿ ಕೆಲಸ ಮಾಡುತ್ತಿದ್ದು ವಿದ್ಯುತ್ ಸಮಸ್ಯೆ ಆದರೆ ಕೆಲಸ ಮಾಡಲು ಸಾಧ್ಯವಿಲ್ಲ, ದಯವಿಟ್ಟು ವಿದ್ಯುತ್ ನೀಡಬೇಕು ಎಂದು ಉದ್ಯೋಗಿ ವಿನುತಾ ಒತ್ತಾಯಿಸಿದ್ದಾರೆ.
ಮಳೆ ಗಾಳಿ ಹೊಡೆತಕ್ಕೆ ಬೆಳೆ ನಾಶ- ಅಪಾರ ನಷ್ಟ
Get real time updates directly on you device, subscribe now.
Prev Post
Comments are closed.