2,658 ಮಂದಿಗೆ ಕೋವಿಡ್: 18 ಸಾವು

2,558

Get real time updates directly on you device, subscribe now.

ತುಮಕೂರು: ಬುಧವಾರದಂದು ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತೆ 2,658 ಏರಿಕೆ ಕಂಡಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 719 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 69,382 ಕ್ಕೆ ಏರಿಕೆ ಕಂಡಿದೆ. 18,148 ಸಕ್ರಿಯ ಪ್ರಕರಣಗಳ ಪೈಕಿ 2,673 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 719, ಚಿನಾಹಳ್ಳಿ 165, ಗುಬ್ಬಿ 262, ಕೊರಟಗೆರೆ 257, ಕುಣಿಗಲ್ 182, ಮಧುಗಿರಿ 322, ಪಾವಗಡ 299, ಶಿರಾ 263, ತಿಪಟೂರು 110, ತುರುವೇಕೆರೆಯಲ್ಲಿ 79 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಕೋವಿಡ್ ನಿಂದ ತುಮಕೂರು ತಾಲೂಕಿನ ಹಒಳಕಲ್ಲು ಗ್ರಾಮದ ವ್ಯಕ್ತಿ (35), ಕೊರಟಗೆರೆ ತಾಲೂಕಿನ ಬುರುಗನಹಳ್ಳಿ ಗ್ರಾಮದ ವ್ಯಕ್ತಿ (60), ಮಧುಗಿರಿ ತಾಲೂಕಿನ ಲಿಂಗೇನಹಳ್ಳಿ ಗ್ರಾಮದ ಮಹಿಳೆ (65), ಮಧುಗಿರಿ ತಾಲೂಕಿನ ಬಡವನಹಳ್ಳಿ ಗ್ರಾಮದ ಮಹಿಳೆ (70), ಗುಬ್ಬಿ ತಾಲೂಕಿನ ಬೋಗಸಂದ್ರ ಗ್ರಾಮದ ಮಹಿಳೆ (59), ತುರುವೇಕೆರೆ ತಾಲೂಕಿನ ಬೆನಕನಕೆರೆ ಗ್ರಾಮದ ವ್ಯಕ್ತಿ (75), ತುಮಕೂರು ನಗರ ಕ್ಯಾತಸಂದ್ರದ ಚಂದ್ರಮೌಳೇಶ್ವರ ಬಡಾವಣೆಯ ಮಹಿಳೆ (51), ತುಮಕೂರು ನಗರ ವೀರಾಪುರದ ವ್ಯಕ್ತಿ (60), ಅನ್ಯಕಾರಣದಿಂದ ಕೊರಟಗೆರೆ ತಾಲೂಕಿನ ವಜ್ಜನಕುರಿಕೆ ಗ್ರಾಮದ ಮಹಿಳೆ (70), ತುಮಕೂರು ನಗರ ರಾಜೀವ್ ನಗರದ ಮಹಿಳೆ (51), ಕೊರಟಗೆರೆ ತಾಲೂಕಿನ ಮಹಿಳೆ (50), ಕೊರಟಗೆರೆ ತಾಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದ ಮಹಿಳೆ (53), ಪಾವಗಡ ತಾಲೂಕಿನ ದಾಸರಮ್ಮನಹಳ್ಳಿ ಗ್ರಾಮದ ವ್ಯಕ್ತಿ (65), ಗುಬ್ಬಿ ತಾಲೂಕಿನ ವ್ಯಕ್ತಿ (35), ತುರುವೇಕೆರೆ ತಾಲೂಕಿನ ಸೋಮೇನಹಳ್ಳಿ ಗ್ರಾಮದ ಮಹಿಳೆ (65), ತುಮಕೂರು ತಾಲೂಕಿನ ಕಲ್ಲೇನಹಳ್ಳಿ ಗ್ರಾಮದ ವ್ಯಕ್ತಿ (68), ತುಮಕೂರು ತಾಲೂಕಿನ ಬೆಳ್ಳಾವಿ ಗ್ರಾಮದ ವ್ಯಕ್ತಿ (50), ತುಮಕೂರು ತಾಲೂಕಿನ ಹೆಬ್ಬೂರು ಗ್ರಾಮದ ವ್ಯಕ್ತಿ (51)ಒಟ್ಟು18 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!