ಬಿರುಗಾಳಿ ಮಳೆಗೆ ಬಾಳೆತೋಟ ನಾಶ

329

Get real time updates directly on you device, subscribe now.

ಕೊರಟಗೆರೆ: ಗುಡುಗು, ಬಿರುಗಾಳಿ ಸಹಿತ ಮುಂಗಾರು ಮಳೆಗೆ ರೈತ ಮಹಿಳೆ ಬ್ಯಾಂಕ್ ನಿಂದ ಸಾಲ ಪಡೆದು 1 ಎಕರೆ ಜಮೀನಿನಲ್ಲಿ ಕಷ್ಟಪಟ್ಟು ಬೆಳೆಸಿರುವ 750 ಕ್ಕೂ ಅಧಿಕ ಬಾಳೆ ಗಿಡಗಳು ನೆಲಕ್ಕೆ ಉರುಳಿರುವ ಘಟನೆ ನಡೆದಿದೆ.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂ ವ್ಯಾಪ್ತಿಯ ಹಕ್ಕಿಪಿಕ್ಕಿ ಕಾಲೋನಿಯ ರೈತ ಮಹಿಳೆ ಸಬ್ಜಾನ್‌ ಬಿ ಎಂಬುವರ ಜಮೀನಿನ ಬೆಳೆದಿರುವ ಬಾಳೆ ತೋಟವು ಸಂಪೂರ್ಣ ನೆಲಕಚ್ಚಿದೆ. ದಾರಿ ಕಾಣದ ರೈತ ಮಹಿಳೆ ಸರಕಾರದ ಪರಿಹಾರಕ್ಕೆ ಮನವಿ ಮಾಡಿದ್ದಾರೆ.
ಹಕ್ಕಿಪಿಕ್ಕಿ ಕಾಲೋನಿಯ ರೈತ ಮಹಿಳೆ ಸಬ್ಜಾನ್ ಬೀ ಮಾತನಾಡಿ ನಾವು ಬೈರೇನಹಳ್ಳಿ ಕೆನರಾ ಬ್ಯಾಂಕ್ ನಲ್ಲಿ ಸಾಲಪಡೆದು 1 ಎಕರೆ ಜಮೀನಿನಲ್ಲಿ 1200 ಬಾಳೆಗಿಡ ಹಾಕಿದ್ದೇವೆ, ಮುಕ್ಕಾಲು ಭಾಗ ಬಾಳೆತೋಟ ನಾಶವಾಗಿ ಸುಮಾರು 1 ಲಕ್ಷಕ್ಕೂ ಅಧಿಕ ನಷ್ಟವಾಗಿದೆ. ನಮ್ಮ ಜೀವನವೆ ಈಗ ಬೀದಿಗೆ ಬಂದಿದೆ, ಸರಕಾರ ಸಹಾಯಧನ ನೀಡಿ ರೈತರನ್ನು ಉಳಿಸಬೇಕಾಗಿದೆ ಎಂದು ಮನವಿ ಮಾಡಿದರು.
ಕೊರಟಗೆರೆ ತಹಶೀಲ್ದಾರ್‌ ಗೋವಿಂದರಾಜು ಮಾತನಾಡಿ, ರೈತರ ಬಾಳೆತೋಟಕ್ಕೆ ಈಗಾಗಲೇ ಕಂದಾಯ ಅಧಿಕಾರಿ ವರ್ಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಷ್ಟದ ಅಂಕಿ ಅಂಶದ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಗೆ ಪತ್ರ ಬರೆಯುತ್ತೇವೆ. ನಷ್ಟದ ಮಾಹಿತಿ ಬಂದ ಕೂಡಲೆ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದರು.
ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಪುಪ್ಪಲತಾ ಮಾತನಾಡಿ, ಕಂದಾಯ ಇಲಾಖೆಯಿಂದ ಮಾಹಿತಿ ಪಡೆದು ರೈತರು ತೋಟಕ್ಕೆ ನಾಳೆಯೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಷ್ಟದ ಅಂಕಿ ಅಂಶದ ವರದಿ ನೀಡುತ್ತೇವೆ, ರೈತರಿಗೆ ಪರಿಹಾರ ನೀಡುವಂತೆ ಸರಕಾರಕ್ಕೆ ಮನವಿ ಮಾಡುತ್ತೇವೆ ಎಂದು ಹೇಳಿದರು.

Get real time updates directly on you device, subscribe now.

Comments are closed.

error: Content is protected !!