ತುಮಕೂರು: ಕಳೆದ ವರ್ಷ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಫೋಕ್ಸೋ ಪ್ರಕರಣದ ಆರೋಪಿಗೆ
ತುಮಕೂರು ಎಫ್ ಟಿ ಎಸ್ ಸಿ-1 ನ್ಯಾಯಾಲಯ ತೀರ್ಪು ನೀಡಿ ಶಿಕ್ಷೆ ಪ್ರಕಟಿಸಿದೆ.
ಬಾಲಕಿ ತಾಯಿ ಆಂಜಿನಮ್ಮ ನೀಡಿದ ದೂರಿನ ಮೇರೆಗೆ ಆರೋಪಿ ರಘು (29) ಕೋಡಿಹಳ್ಳಿ ಗ್ರಾಮ, ಕೋರ ಹೋಬಳಿ ತುಮಕೂರು ತಾಲ್ಲೂಕು ಈತನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿ ನ್ಯಾಯಾಲಕ್ಕೆ ದೋಷಾ ರೋಪಣ ಪತ್ರ ಸಲ್ಲಿಕೆಯಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ ಏ.8 ರಂದು ಈ ಪ್ರಕರಣದ ಆರೋಪಿ ರಘು ಎಂಬಾತನಿಗೆ 20 ವಷರ್ ಜೈಲು ಶಿಕ್ಷೆ ಮತ್ತು 1 ಲಕ್ಷ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾದ ಆಶಾ ಕೆ.ಎಸ್ ವಾದ ಮಂಡಿಸಿದ್ದರು. ತನಿಖಾ ಸಹಾಯಕರಾಗಿ ಗಂಗರಾಜು ಸಿಹೆಚ್ ಸಿ ಕಾರ್ಯ ನಿರ್ವಹಿಸಿದ್ದರು.