ಅಪರಿಚಿತ ವಾಹನ ಡಿಕ್ಕಿ- ಇಬ್ಬರ ದುರ್ಮರಣ

181

Get real time updates directly on you device, subscribe now.

ತುಮಕೂರು: ಅಪರಿಚಿತ ವಾಹನ ಬೈಕಿಗೆ ಡಿಕ್ಕಿ ಹೊಡೆದ ಬೈಕ್‌ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಹೊರವಲಯದ ಸಿದ್ಧಾರ್ಥ ಡೆಂಟಲ್‌ ಕಾಲೇಜು ಮುಂಭಾಗದಲ್ಲಿ ಬುಧವಾರ ನಡೆದಿದೆ.
ಲುಕ್ಸಾನ್‌ ( 20) ಹಾಗೂ ಅಫ್ರೋಜ್‌ (18) ಮೃತರು, ಈ ಇಬ್ಬರು ಸ್ನೇಹಿತರಾಗಿದ್ದು ಲುಕ್ಸಾನ್‌ ತುಮಕೂರಿನ ಸದಾಶಿವನಗರದ ನಿವಾಸಿ ಆಗಿದ್ದು ತನ್ನ ಸ್ನೇಹಿತ ಹೆಗ್ಗೆರೆಯ ನಿವಾಸಿ ಅಫ್ರೋಜ್‌ ಮನೆಗೆ ಪ್ರತಿ ದಿನ ಬಂದು ಬೆಳಗಿನ ಜಾವ ರಂಜಾನ್‌ ಹಬ್ಬದ ಹಿನ್ನೆಲೆಯಲ್ಲಿ ನಮಾಜ್‌ ಮಾಡಿ ನಂತರ ಊಟ ಮಾಡಿ ವಾಪಸ್‌ ಆಗುತ್ತಿದ್ದರು, ಅದೇ ಬುಧವಾರ ಬೆಳಗಿನ ಜಾವ ನಮಾಜ್‌ ಮುಗಿಸಿಕೊಂಡು ತುಮಕೂರಿಗೆ ಬರುವಾಗ ಗುಬ್ಬಿ ಕಡೆ ಹೋಗುತ್ತಿದ್ದ ಅಪರಿಚಿತ ವಾಹನ ಬೈಕಿಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಡಿವೈಎಸ್ಪಿ ಶ್ರೀನಿವಾಸ್‌, ನಗರದ ವೃತ್ತ ನಿರೀಕ್ಷಕ ನವೀನ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಚಾರಿ ಪೊಲೀಸ್‌ ಠಾಣೆ ಸಬ್‌ ಇನ್ಸ್ಪೆಕ್ಟರ್‌ ಶಿವಕುಮಾರ್‌ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!