ಕೊರೊನಾ ತಡೆಗೆ ಗ್ರಾಮಸ್ಥರಿಂದ ಚೆಕ್ ಪೋಸ್ಟ್ ನಿರ್ಮಾಣ

553

Get real time updates directly on you device, subscribe now.

ನಿಟ್ಟೂರು: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆಅಧಿಕವಾಗುತ್ತಿರುವುದರಿಂದ ನಮ್ಮೂರನ್ನ ನಾವೇ ರಕ್ಷಣೆ ಮಾಡಿಕೊಳ್ಳಬೇಕು ಎಂದು ಗ್ರಾಮದ ಜನರೇ ಸ್ವಯಂ ನಿರ್ಬಂಧಕ್ಕೆ ಮುಂದಾಗಿದ್ದು ಗ್ರಾಮದ ಮುಂಭಾಗದಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಿ ಬೇರೆ ಜಿಲ್ಲೆಯಿಂದ ಬರುವವರನ್ನು ಗ್ರಾಮದ ಒಳಗೆ ಬರದಂತೆ ಮತ್ತು ಬೆಳಗ್ಗೆ 10 ಗಂಟೆಯ ನಂತರ ಗ್ರಾಮದ ಜನರು ಸಹ ಬೇರೆ ಭಾಗಕ್ಕೆ ಹೊರ ಹೋಗದಂತೆ ನಿರ್ಬಂಧ ಮಾಡಿಕೊಂಡು ಕೊರೊನಾ ನಿಯಂತ್ರಣ ಮಾಡಲು ಮುಂದಾಗಿದ್ದಾರೆ.
ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಬಂಡಿಹಳ್ಳಿ ಗ್ರಾಮದ ಗ್ರಾಮಸ್ಥರು ಇಂತಹ ನಿರ್ಧಾರ ಮಾಡಿಕೊಂಡಿದ್ದು ಈ ರೀತಿ ಸಲ್ಪ ದಿನವಾದರೂ ಮಾಡಿದರೆ ಗ್ರಾಮದ ಒಳಗೆ ಕೊರೊನಾ ಮಹಾಮಾರಿ ತಡೆಯಬಹುದು ಎಂಬ ದೃಡ ನಿರ್ಧಾರಕ್ಕೆ ಬಂದಿದ್ದು ಚೆಕ್ ಪೋಸ್ಟ್ ಗೆ ಒಬ್ಬರ ನೇಮಕ ಸಹ ಮಾಡಿದ್ದಾರೆ, ಅವರು ಗ್ರಾಮದ ಮುಂದೆ ಕುಳಿತು ಬೇರೆಯವರು ಬಾರದ ರೀತಿಯಲ್ಲಿ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದು, ತುರ್ತು ಪರಿಸ್ಥಿತಿ ಇದ್ದಾಗ ಅವರೆ ಮುಂದೆ ನಿಂತು ಸಮಸ್ಯೆ ಬಗೆಹರಿಸುವ ಹೊಣೆ ಹೊತ್ತಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ನಿಜಾನಂದಮೂರ್ತಿ ಮಾತನಾಡಿ, ಪ್ರತಿದಿನ ಕೊರೊನಾ ಪ್ರಕರಣ ಹೆಚ್ಚುತ್ತಿದ್ದು ಇದನ್ನು ನೋಡಿದಾಗ ಭಯವಾಗುತ್ತಿದೆ, ಹಿರಿಯರು, ಮಕ್ಕಳ ಮೇಲೆ ಬೇಗ ಪರಿಣಾಮ ಬೀರುತ್ತದೆ ಎಂದು ಹಿಂದೆ ವೈದ್ಯರು ತಿಳಿಸಿದ್ದರು, ಆದರೆ ಇತ್ತೀಚೆಗೆ ನೋಡಿದಾಗ 40 ವರ್ಷದ ಒಳಗಿನ ಯುವಕರೆ ಈ ಮಹಾಮಾರಿ ರೋಗಕ್ಕೆ ತುತ್ತಾಗುತ್ತಿರುವುದು ನೋಡಿದಾಗ ಇದು ಎಲ್ಲರ ಮೇಲೆ ಎರಗುತ್ತದೆ, ಹಾಗಾಗಿ ಬೇರೆಯವರು ಬಂದಲ್ಲಿ ಅವರ ಸ್ಥಿತಿಗತಿ ನಮಗೆ ತಿಳಿಯದೆ ಗ್ರಾಮ್ಕಕ್ಕೆ ಸೋಂಕು ಹರಡುತ್ತದೆ ಎಂಬ ದೃಷ್ಟಿಯಿಂದ ಈ ಕೆಲಸ ಮಾಡುತ್ತಿದ್ದೇವೆ, ತುರ್ತು ಪರಿಸ್ಥಿತಿ ಬಂದಲ್ಲಿ ಎಲ್ಲಾ ರೀತಿಯ ಸಹಕಾರಕ್ಕೆ ಗ್ರಾಮಸ್ಥರು ಸಿದ್ಧರಿರುತ್ತೇವೆ ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!