18 ವರ್ಷ ಮಲ್ಪಟ್ಟವರು ವ್ಯಾಕ್ಸಿನ್ ಗೆ ನೋಂದಣಿ ಕಡ್ಡಾಯ

507

Get real time updates directly on you device, subscribe now.

ಶಿರಾ: 18 ರಿಂದ 44 ವರ್ಷ ವಯಸ್ಸಿನವರು ಕೋವಿಡ್‌ ಲಸಿಕೆ ಪಡೆಯಲು ಕೋವಿನ್‌ ಅಥವಾ ಆರೋಗ್ಯ ಸೇತು ಆಪ್‌ ಮೂಲಕ ನೋಂದಣಿ ಮಾಡಿಕೊಳ್ಳಬೇಕು, ಅಂತಹವರಿಗೆ ಸಮಯ ನಿಗ ಮಾಡಿಕೊಂಡು ಸಂಬಂಧಿಸಿದ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ನಗರದ ಮಿನಿ ವಿಧಾನಸೌಧದಲ್ಲಿ ಕೋವಿಡ್‌ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 18 ವರ್ಷದಿಂದ 44 ವರ್ಷದವರೆಗಿನ ಎಲ್ಲರೂ ತಪ್ಪದೇ ಆನ್ ಲೈನ್ ನಲ್ಲಿ ನೋಂದಣಿ ಮಾಡಿ, ನೋಂದಣಿ ಇಲ್ಲದೆ ನೇರವಾಗಿ ಲಸಿಕಾ ಕೇಂದ್ರಕ್ಕೆ ಬರುವವರಿಗೆ ಅವಕಾಶವಿಲ್ಲ, ಸದ್ಯ 45 ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್‌ ಲಸಿಕೆಯನ್ನು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಎಂದಿನಂತೆ ಹಾಕಲಾಗುತ್ತಿದೆ ಎಂದರು.

ಕರ್ತವ್ಯಕ್ಕೆ ತಪ್ಪಿಸಿಕೊಂಡರೆ 7 ವರ್ಷ ಶಿಕ್ಷೆ: ಎಲ್ಲಾ ಕೊರೊನಾ ವಾರಿಯರ್ಸ್ ಗಳೂ ಯಾವುದೇ ಕಾರಣ ನೀಡಿ ತಮ್ಮ ಕರ್ತವ್ಯಕ್ಕೆ ಹಾಜರಾಗದೆ ನಿರ್ಲಕ್ಷ ವಹಿಸುವಂತಿಲ್ಲ, ಆ ರೀತಿ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಲು ಕಾನೂನಿನಲ್ಲಿ ಅವಕಾಶವಿದೆ, ಸರಕಾರದ ಆದೇಶದಂತೆ ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು, ಅಂತಹವರಿಗೆ ಸುಮಾರು 7 ವರ್ಷ ಶಿಕ್ಷೆ ವಿಸಲಾಗುತ್ತದೆ, ಆದ್ದರಿಂದ ಎಲ್ಲರೂ ತಪ್ಪದೆ ತಮ್ಮ ಕರ್ತವ್ಯ ಪಾಲಿಸಿ ಎಂದರು.

ರೋಗಿಗಳ ಸಹಾಯಕರನ್ನು ನಿಯಂತ್ರಿಸಿ: ಶಿರಾ ಸಾರ್ವಜನಿಕ ಆಸ್ಪತ್ರೆಯ ಹೊರ ರೋಗಿಗಳ ವಿಭಾಗದಲ್ಲಿ ರೋಗಿಗಳ ಜೊತೆಗೆ ಒಬ್ಬರು ಸಹಾಯಕರು ಬರದೆ ಹಲವು ಜನ ಬರುತ್ತಿದ್ದಾರೆಂಬ ಮಾಹಿತಿ ಇದ್ದು, ಇದರಿಂದ ಇತರೆ ರೋಗಿಗಳಿಗೆ ತೊಂದರೆಯಾಗುತ್ತಿದೆ, ಆದ್ದರಿಂದ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಜನಸಂದಣಿ ನಿಯಂತ್ರಿಸಿ ಎಂದು ಸೂಚಿಸಿದರು.
ಶಿರಾ ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳ ಹಿಂದ 734 ಪ್ರಕರಣ ಏಕಾಏಕಿ ಹೆಚ್ಚಾಗಲು ಕಾರಣ ಅಂದಿನ ವರದಿ ಸುಮಾರು ಐದು ದಿನಗಳ ವರದಿಗಳನ್ನು ಒಟ್ಟು ಸೇರಿಸಿ ನೀಡಲಾಗಿತ್ತು, ಆದ್ದರಿಂದ ಪ್ರಕರಣ ಸಂಖ್ಯೆ ಹೆಚ್ಚಾಗಿದೆ, ಈಗ ಇಳಿಕೆಯಾಗುತ್ತಿದ್ದು, ಸಾರ್ವಜನಿಕರು ಆತಂಕ ಪಡಬೇಡಿ, ಗ್ರಾಮೀಣ ಪ್ರದೇಶದಲ್ಲಿ ಈ ಬಾರಿ ಸೋಂಕು ಹೆಚ್ಚಿದ್ದು, ಸೋಂಕಿತರನ್ನು ಶಿರಾ ನಗರದ ಕೊವೀಡ್‌ ಕೇರ್‌ ಸೆಂಟರ್ ಗೆ ಮನವೊಲಿಸಿ ಕರೆದುಕೊಂಡು ಬರುವುದು ಕಷ್ಟದ ಕೆಲಸವಾಗುತ್ತಿದೆ. ಆದ್ದರಿಂದ ಸಮೀಪದಲ್ಲಿ ಇರುವ ಸರಕಾರಿ ಹಾಸ್ಟೆಲ್ ಗಳನ್ನು ಕೋವಿಡ್‌ ಕೇರ್‌ ಸೆಂಟರ್‌ ಮಾಡಿ ಅಲ್ಲಿಯೇ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುವುದು. ಸದ್ಯ ಸೋಂಕು ಹೆಚ್ಚಾದರೆ ಜನರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಶಿರಾ ನಗರ ಸೇರಿದಂತೆ ಹೋಬಳಿ ಮಟ್ಟದಲ್ಲಿ ಸರಕಾರಿ ಕಟ್ಟಡಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಿಧಾನಪರಿಷತ್‌ ಸದಸ್ಯ ಚಿದಾನಂದ್‌ ಎಂ.ಗೌಡ, ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ, ಜಿಲ್ಲಾ ಪೊಲೀಸ್‌ ವರಿಷ್ಠಾಕಾರಿ ಡಾ.ವಂಶಿಕೃಷ್ಣ, ಜಿಲ್ಲಾ ಆರೋಗ್ಯಾಕಾರಿ ಡಾ.ನಾಗೇಂದ್ರಪ್ಪ, ಡಿವೈಎಸ್‌ಪಿ ಕುಮಾರಪ್ಪ, ತಹಶೀಲ್ದಾರ್‌ ಮಮತ, ತಾಲ್ಲೂಕು ಆಡಳಿತ ವೈದ್ಯಾಕಾರಿ ಡಾ.ಶ್ರೀನಾಥ್‌, ತಾಲ್ಲೂಕು ಆರೋಗ್ಯಾಕಾರಿ ಡಾ.ಅಬ್ಜಲ್‌ ಉರ್‌ ರೆಹಮಾನ್‌ ಹಾಗೂ ತಾಲ್ಲೂಕು ಮಟ್ಟದ ಅಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!