ಕೋವಿಡ್‌ ಚಿಕಿತ್ಸಾ ವಾರ್ಡ್ ಗೆ ಶಾಸಕ ರಾಜೇಶ್ ಗೌಡ ಭೇಟಿ

154

Get real time updates directly on you device, subscribe now.

ಶಿರಾ: ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಕೋವಿಡ್‌ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದ ವಾರ್ಡ್‌ಗೆ ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ ಬುಧವಾರ ಪಿಪಿಇ ಕಿಟ್‌ ಧರಿಸಿ ಭೇಟಿ ನೀಡಿ ಸೋಂಕಿತರಿಗೆ ನೀಡುತ್ತಿದ್ದ ಚಿಕಿತ್ಸೆಗಳ ಬಗ್ಗೆ ಪರಿಶೀಲನೆ ನಡೆಸಿ ಧೈರ್ಯ ತುಂಬಿದರು.
ಆಸ್ಪತ್ರೆಯಲ್ಲಿ ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆಯೇ, ಏನಾದರೂ ಸಮಸ್ಯೆ ಇದೆಯೇ ಎಂದು ವಿಚಾರಿಸಿದ ಶಾಸಕರು ಸೋಂಕಿತರು ಯಾವುದೇ ಆತಂಕ ಪಡಬೇಡಿ, ಶಿರಾದಲ್ಲಿ ಆಕ್ಸಿಜನ್‌ ಕೊರತೆ ಇಲ್ಲ, ಔಷಧಿಗಳ ಕೊರತೆ ಇಲ್ಲ, ಎಲ್ಲರೂ ಗುಣಮುಖರಾಗುತ್ತೀರಿ ಎಂದು ಸೋಂಕಿತರಿಗೆ ಆತ್ಮಸ್ಥೈರ್ಯ ಮೂಡಿಸಿದರು.
ನಂತರ ಮಾತನಾಡಿದ ಅವರು ಶಿರಾ ತಾಲೂಕಿನಲ್ಲಿ ಸೋಂಕು ನಿಯಂತ್ರಣಕ್ಕೆ ಜನರ ಸಹಕಾರ ಅಗತ್ಯವಾಗಿದೆ, ಅನಗತ್ಯವಾಗಿ ದ್ವಿಚಕ್ರ ವಾಹನಗಳಲ್ಲಿ ಓಡಾಡುವುದು ಬೇಡ, ಅಗತ್ಯವಾಗಿದ್ದಲ್ಲಿ ಮಾತ್ರ ಹೋಗಬೇಕು, ಶಿರಾ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಮತ್ತು ಬೆಡ್‌ ಕೊರತೆ ಇಲ್ಲ, ಕೊವೀಡ್‌ ಕೇರ್‌ ಸೆಂಟರ್ ಗಳಲ್ಲಿ ಪೌಷ್ಠಿಕ ಆಹಾರ ನೀಡುತ್ತಿದ್ದೇವೆ, ಅಲ್ಲದೆ ಸೋಂಕಿತರು ಸಹ ಚಿಕಿತ್ಸೆ ಮತ್ತು ಹಾರೈಕೆ ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖರಾಗಿ ಮನೆಗೆ ಹೋಗುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಜನ ತಾಳ್ಮೆಯಿಂದ ಸಹಕರಿಸಿದರೆ ಸೋಂಕು ಶೀಘ್ರ ನಿಯಂತ್ರಣಕ್ಕೆ ಬರಲಿದೆ ಎಂದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಾಥ್‌ ಸಹ ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ ಅವರ ಜೊತೆ ಕೋವಿಡ್‌ ಚಿಕಿತ್ಸಾ ವಾರ್ಡ್‌ಗೆ ಭೇಟಿ ನೀಡಿ ರೋಗಿಗಳ ಆರೋಗ್ಯದ ಬಗ್ಗೆ ವಿವರಿಸಿದರು.

Get real time updates directly on you device, subscribe now.

Comments are closed.

error: Content is protected !!