1,702 ಮಂದಿಗೆ ಕೋವಿಡ್: 11 ಸಾವು

1,732

Get real time updates directly on you device, subscribe now.

ತುಮಕೂರು: ಗುರುವಾರದಂದು ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತೆ 1,702 ಏರಿಕೆ ಕಂಡಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 430 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 71,084 ಕ್ಕೆ ಏರಿಕೆ ಕಂಡಿದೆ. 17,728 ಸಕ್ರಿಯ ಪ್ರಕರಣಗಳ ಪೈಕಿ 2,111 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 430, ಚಿನಾಹಳ್ಳಿ 56, ಗುಬ್ಬಿ 232, ಕೊರಟಗೆರೆ 140, ಕುಣಿಗಲ್ 177, ಮಧುಗಿರಿ 68, ಪಾವಗಡ 115, ಶಿರಾ 267, ತಿಪಟೂರು 146, ತುರುವೇಕೆರೆಯಲ್ಲಿ 71 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಕೋವಿಡ್ ನಿಂದ ತುಮಕೂರಿನ ಆದರ್ಶ ನಗರದ ಮಹಿಳೆ (60), ತುಮಕೂರಿನ ಆದರ್ಶ ನಗರದ ವ್ಯಕ್ತಿ (34), ತಿಪಟೂರು ನಗರ ಗಾಂಧಿನಗರದ ವ್ಯಕ್ತಿ (48), ಪಾವಗಡ ತಾಲೂಕಿನ ಸಿ.ಎಸ್ ಹಟ್ಟಿ ಗ್ರಾಮದ ವ್ಯಕ್ತಿ (20), ಗುಬ್ಬಿ ತಾಲೂಕಿನ ಹಂದನಹಳ್ಳಿ ಗ್ರಾಮದ ವ್ಯಕ್ತಿ (61), ಕುಣಿಗಲ್ ತಾಲೂಕಿನ ಯಾಚಘಟ್ಟ ಗ್ರಾಮದ ಮಹಿಳೆ (70), ಅನ್ಯಕಾರಣದಿಂದ ತುಮಕೂರಿನ ಜಯನಗರದ ಮಹಿಳೆ (78), ತುಮಕೂರು ತಾಲೂಕಿನ ಮುದಿಗೆರೆ ಗ್ರಾಮದ ವ್ಯಕ್ತಿ (65), ತುಮಕೂರಿನ ಸದಾಶಿವ ನಗರದ ವ್ಯಕ್ತಿ (45), ಕೊರಟಗೆರೆ ತಾಲೂಕಿನ ಮಹಿಳೆ (52), ತುಮಕೂರಿನ ವಿದ್ಯಾನಗರದ ವ್ಯಕ್ತಿ(74) ಒಟ್ಟು11 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!