ರೇಣುಕಾ ವಿದ್ಯಾಪೀಠದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಕೇರ್‌ ಸೆಂಟರ್‌ ಆರಂಭ

ರೋಗಿಗಳಿಗೆ ಸಿಗಲಿದೆ ಸಕಲ ಸೌಲಭ್ಯ: ಸೊಗಡು ಶಿವಣ್ಣ

211

Get real time updates directly on you device, subscribe now.

ತುಮಕೂರು: ಹೋಮ್ ಕ್ವಾರಂಟೈನ್‌ ನಿಂದ ಕೊರೊನಾ ಹರಡುತ್ತಿದ್ದು, ಇದನ್ನು ನಿಯಂತ್ರಿಸುವುದಕ್ಕಾಗಿ ಸಂಘ ಸಂಸ್ಥೆ ನೆರವಿನಿಂದ ಕೋವಿಡ್ ಕೇರ್‌ ಸೆಂಟರ್‌ ಪ್ರಾರಂಭಿಸಲಾಗುತ್ತಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು.
ನಗರದ ರೇಣುಕಾ ವಿದ್ಯಾಪೀಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್‌ ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಪಡಿಸಿರುವ ಆಹಾರ, ಮೊಟ್ಟೆ ನೀಡಲು ಕ್ರಮವಹಿಸಲಾಗುವುದು ಎಂದು ಹೇಳಿದರು.
ಆರೋಗ್ಯ, ಜಿಲ್ಲಾಸ್ಪತ್ರೆಯ ವೈದ್ಯರು ರೋಗಿಗಳ ಮೇಲ್ವಿಚಾರಣೆ ನಡೆಸಲಿದ್ದು, ಆಮ್ಲಜನಕದ ಅಗತ್ಯ ಇರುವವರಿಗೆ ಆಮ್ಲಜನಕ ಒದಗಿಸಲಾಗುವುದು, ಶನಿವಾರದಿಂದ ಈ ಕೋವಿಡ್ ಕೇರ್‌ ಘಟಕ ಪ್ರಾರಂಭವಾಗಲಿದ್ದು, ಹೋಂ ಕ್ವಾರಂಟೈನ್ ನಲ್ಲಿ ಇರುವವರು ಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲಾಗುವಂತೆ ಮನವಿ ಮಾಡಿದರು.
ಜನರ ಪ್ರಾಣ ಉಳಿಸುವುದಕ್ಕಾಗಿ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ಸಂಘ ಸಂಸ್ಥೆಗಳು ಹಾಗೂ ಜಿಲ್ಲಾಡಳಿತ ಕೆಲಸ ಮಾಡುತ್ತಿವೆ, ಅಂತ್ಯ ಸಂಸ್ಕಾರಕ್ಕೆ ಟಿಂಬರ್‌ ಮರ್ಚೆಂಟ್ ಗಳ ಸೌದೆಯನ್ನು ನೀಡಿದ್ದಾರೆ, ಸಚಿವರು ಎರಡು ಲೋಡ್‌ ಸೌದೆಯನ್ನು ಚಿಕ್ಕನಾಯಕನಹಳ್ಳಿಯಿಂದ ಕಳುಹಿಸಿಕೊಟ್ಟಿದ್ದಾರೆ, ಈ ಸೆಂಟರ್‌ ನಲ್ಲಿ ಪಾಲಿಕೆ ಸಿಬ್ಬಂದಿ ಸ್ವಚ್ಛತೆ ಮಾಡಲಿದ್ದು, ವೈದ್ಯರು ಹಾಗೂ ದಾದಿಯರು ನಿಗದಿತವಾಗಿ ಭೇಟಿ ನೀಡಲಿದ್ದಾರೆ ಎಂದರು.
ಅಂತ್ಯ ಸಂಸ್ಕಾರ ನೆರವೇರಿಸಲು ಬಜರಂಗದಳದ ಯುವಕರು ಮುಂದಾಗಿದ್ದಾರೆ, ಎಲ್ಲ ಸಮುದಾಯದವರಿಗೆಅಂತ್ಯ ಸಂಸ್ಕಾರ ಮಾಡಲಿದ್ದಾರೆ, ನಾಗರಾಜು 9945942319 ಇವರಿಗೆ ಕರೆ ಮಾಡಿದರೆ ಆ್ಯಂಬುಲೆನ್ಸ್ ನೊಂದಿಗೆ ಬಂದು ಅಂತ್ಯ ಸಂಸ್ಕಾರ ಮಾಡಲಿದ್ದಾರೆ ಎಂದು ಹೇಳಿದರು.
ನಗರ ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್‌ ಮಾತನಾಡಿ, ಸಮಾಜದ ವತಿಯಿಂದ ಕೋವಿಡ್ ಕೇರ್‌ ಸೆಂಟರ್‌ ಪ್ರಾರಂಭಕ್ಕೆ ಮೂಲ ಸೌಕರ್ಯ ಒದಗಿಸುವುದು ನಮ್ಮ ಜವಾಬ್ದಾರಿಯಾಗಿದ್ದು, ಕೋವಿಡ್‌ ರೋಗಿಗಳಿಗೆ ಮನರಂಜನೆ ಒದಗಿಸಲು ಎಲ್ ಇ ಡಿ ಅಳವಡಿಸುವ ಮೂಲಕ ಯಾವುದೇ ಕೊರತೆಯಾಗದಂತೆ ಕ್ರಮವಹಿಸಲಾಗಿದೆ ಎಂದು ಹೇಳಿದರು.
ಕೋವಿಡ್‌ ಸೋಂಕಿತರಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಲಾಗಿದ್ದು, ರೋಟರಿ ವತಿಯಿಂದ ಆರ್ ಟಿ ಪಿ ಸಿ ಆರ್‌ ಯೂನಿಟ್‌ ಸ್ಥಾಪಿಸಲಾಗುತ್ತಿದ್ದು, ರೋಗಿಗಳಿಗೆ 500 ರೂ. ಶುಲ್ಕ ವಿಧಿಸಲಾಗುವುದು, ಹಾಗೆಯೇ ಸಮಾಜದ ವತಿಯಿಂದಲೇ ರೋಗಿಗಳಿಗೆ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಟಿಎಂಸಿಸಿ ಬ್ಯಾಂಕ್‌ ಅಧ್ಯಕ್ಷ ಎನ್‌.ಎಸ್‌.ಜಯಕುಮಾರ್‌ ಮಾತನಾಡಿ, ಕೋವಿಡ್ ಅಲೆ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕಾರ ನೀಡುತ್ತಿರುವುದು ಶ್ಲಾಘನೀಯ ವಿಚಾರವಾಗಿದ್ದು, ಸ್ಮಶಾನ ಅಭಿವೃದ್ಧಿ ಆಗದೆ ಇರುವುದರಿಂದ ಅಂತ್ಯ ಸಂಸ್ಕಾರಕ್ಕೆ ತೊಂದರೆಯಾಗುತ್ತಿದ್ದನ್ನು ಮನಗಂಡು, ಥಾಣೆ ಮತ್ತು ಮಂಗಳೂರಿನಿಂದ ಒಟ್ಟು ಆರು ಅಂತ್ಯ ಸಂಸ್ಕಾರದ ಘಟಕವನ್ನು ತರಿಸಿ ಅಳವಡಿಸಲಾಗಿದ್ದು, ಅಂತ್ಯ ಸಂಸ್ಕಾರಕ್ಕೆ ತೊಂದರೆಯಾಗುವುದಿಲ್ಲ ಎಂದರು.
ಚಿಕ್ಕನಾಯಕಹಳ್ಳಿಗೆ ಅಂತ್ಯ ಸಂಸ್ಕಾರದ ಘಟಕ ನೀಡುವಂತೆ ಸಚಿವ ಮಾಧುಸ್ವಾಮಿ ಅವರು ಕೇಳಿದ್ದರು, ಈಗ ಮತ್ತೆ ಜನರು ಕೇಳಿದ್ದಾರೆ ಅದನ್ನು ತರಿಸಿಕೊಡುತ್ತೇವೆ, 75 ಸಾವಿರ ಬೆಲೆಯ 9 ಲೀಟರ್‌ 300 ಕಾಂನ್ಸಟ್ರೇಟರ್ ಗಳನ್ನು ನೀಡಲು ಉದ್ಯಮಿಗಳು ಹಾಗೂ ಸಂಘ ಸಂಸ್ಥೆಗಳು ಮುಂದೆ ಬಂದಿದ್ದು ಶೀಘ್ರದಲ್ಲಿಯೇ ಜಿಲ್ಲೆಗೆ ಬರಲಿದ್ದು ನಂತರ ತಾಲ್ಲೂಕುವಾರು ಹಂಚಿಕೆ ಮಾಡಲಾಗುವುದು ಎಂದರು.
ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಲು ಹಿಂದೆಕರೆ ನೀಡಲಾಗಿತ್ತು, ಯಾವುದೇ ದೇಶಗಳು ಯಾವ ಉತ್ಪನ್ನವನ್ನು ಕಡೆಗಣಿಸುವುದಿಲ್ಲ, ಪರಸ್ಪರ ಅವಲಂಬನೆ ಇದ್ದು, ಭಾರತದಲ್ಲಿ ಚೀನಾ ಉತ್ಪನ್ನ ಆಮದಿಗೆ ಸರ್ಕಾರ ಅನುಮತಿ ನೀಡಿದೆ, ಜನರು ಬದುಕುವುದು ಮುಖ್ಯವಾಗಿದ್ದು, ಆಮದು ಶುಲ್ಕ ಕಡಿಮೆಯಾಗಿದ್ದು, ಜಿ ಎಸ್ ಟಿ ತೆಗೆದು ಹಾಕುವುದು ಅವಶ್ಯಕ ಎಂದು ಹೇಳಿದರು.
ಪಾಲಿಕೆ ಸದಸ್ಯ ಲಕ್ಷ್ಮೀನರಸಿಂಹರಾಜು, ಬಿಜೆಪಿ ಉಪಾಧ್ಯಕ್ಷ ಚಂದ್ರಶೇಖರ್‌, ಪ್ರಸನ್ನ, ರಮೇಶ್‌ ಬಾಬು, ಉಪಾಧ್ಯಕ್ಷ ಚಂದ್ರಮೌಳಿ, ರಂಗನಾಥ್‌, ಹರೀಶ್‌, ಪರಮೇಶ್‌, ರವಿಶಂಕರ್‌, ಸಿದ್ಧಲಿಂಗಮೂರ್ತಿ ಸೇರಿದಂತೆ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!