ಕುಣಿಗಲ್: ಕೊವಿಡ್ ಎರಡನೆ ಅಲೆ ನಿಯಂತ್ರಣ ನಿಟ್ಟಿನಲ್ಲಿ ಸಕಾರದ ಅಸಹಕಾರದ ನಡುವೆಯೂ ನಾವು, ನಮ್ಮ ಕಾರ್ಯಕರ್ತರು ಉತ್ತಮ ಸೇವೆ ಸಲ್ಲಿಸುತ್ತಿದ್ದೇವೆ. ಇದನ್ನು ಸಹಿಸದೆ ವಿರೋಧ ಪಕ್ಷದವರು ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿಸಿದ್ದರೂ ಲೆಕ್ಕಿಸದೆ ನಮ್ಮ ಸೇವೆ ಮುಂದುವರೆಯುತ್ತದೆ ಎಂದು ಶಾಸಕ ಡಾ.ರಂಗನಾಥ ತಿಳಿಸಿದರು.
ಗುರುವಾರ ಪಟ್ಟಣದ ಸಂಸದರ ಕಚೇರಿಯಲ್ಲಿ ಬೆಂಗಳೂರು ರೋಟರಿ ಸೌತ್ ಪರೇಡ್ ಇತರೆ ಸಂಘ ಸಂಸ್ಥೆಯಾಶ್ರಯದಲ್ಲಿ ತಾಲೂಕಿಗೆ ಕೊಡುಗೆಯಾಗಿ ನೀಡಿದ ಹತ್ತು ಆಕ್ಸಿಜನ್ ಕಾನ್ ಸಂಟ್ರೇಟರ್ ಸ್ವೀಕರಿಸಿ ಮಾತನಾಡಿ ಕೊವಿಡ್‌ಎರಡನೆ ಅಲೆ ಭೀಕರವಾಗಿದೆ, ಗ್ರಾಮಾಂತರ ಪ್ರದೇಶದಲ್ಲಿ ಅನಧಿಕೃತವಾಗಿ ಎರಡೂ ಸಾವಿರಕ್ಕೂ ಹೆಚ್ಚು ಕೇಸ್ ಇವೆ, ಸುಮಾರು 75 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ, ಆದರೂ ಸರ್ಕಾರ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ, ಜನರಸಮಸ್ಯೆಗೆ ಸ್ಪಂದಿಸಲು ಅಮೃತೂರಿನಲ್ಲಿ 30 ಬೆಡ್ ಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಜೊತೆಯಲ್ಲಿ ಪಟ್ಟಣದಲ್ಲಿನ ಸಪ್ತಗಿರಿ ಖಾಸಗಿ ಆಸ್ಪತ್ರೆಯಲ್ಲಿ ಸ್ವಂತ ಖರ್ಚಿನಿಂದ 20 ಹಾಸಿಗೆ ಆಸ್ಪತ್ರೆ ಪ್ರಾರಂಭಿಸುತ್ತಿದ್ದು ಇದಕ್ಕಾಗಿ ಆಸ್ಪತ್ರೆಯ ವೈದ್ಯ ಡಾ.ಕುಮಾರ್ ಸೇವೆ ನೀಡಲು ಒಪ್ಪಿರುವ ಖಾಸಗಿ ವೈದ್ಯ ಡಾ.ಶೈಲೇಶ್ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿ, ಸೋಂಕಿಗೆ ಒಳಗಾಗಿರುವವರಿಗೆ ಗುಣಮಟ್ಟದ ರೋಗ ನಿರೋಧಕ ಔಷಧ ಹಾಗೂ ಸೋಂಕಿನಿಂದ ಗುಣಮುಖರಾಗಿರುವವರಿಗೆ ಉಚಿತವಾಗಿ ವಿಟಮಿನ್ ಮಾತ್ರೆ ಪೂರೈಕೆ ಸೇರಿದಂತೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವವರಿಗೆ ಪಿಪಿಇ ಕಿಟ್ ನೀಡಲು ಸಂಸದ ಡಿ.ಕೆ.ಸುರೇಶ್, ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ನೇತೃತ್ವದಲ್ಲಿ ಸಿದ್ಧತೆ ಮಾಡಲಾಗಿದೆ ಎಂದರು.
ಬೆಂಗಳೂರು ರೋಟರಿ ಸೌತ್‌ಪರೇಡ್ ನ ಅಧ್ಯಕ್ಷ ಆನಂದಕುಮಾರ್ ಮಾತನಾಡಿ, ಈಗಾಗಲೆ 50 ಕಾನ್ಸಂಟ್ರೇಟರ್ ಸಂಸ್ಥೆ ವತಿಯಿಂದ ನೀಡಲಾಗಿದೆ, ನಮ್ಮ ಈ ಸೇವೆಯಲ್ಲಿ ಸಹಭಾಗಿತ್ವ ನೀಡುತ್ತಿರುವ ಏರ್ ಏಸಿಯಾ, ಅವಿರತ ಭಾರತ ಯುವ ಸಂಘಟನೆ, ಐ ಕ್ಯಾಟ್ ಫೌಂಡೇಶನ್ ಇತರೆ ಸಂಸ್ಥೆಗಳಗೆ ಅಭಿನಂದನೆ ಸಲ್ಲಿಸಿದರು.
ಟಿ ಎಚ್ ಒ ಜಗದೀಶ್, ಆಸ್ಪತ್ರೆ ವೈದ್ಯಾಧಿಕಾರಿ ಗಣೇಶ್‌ಬಾಬು, ರೋಟರಿ ಪದಾಧಿಕಾರಿಗಳಾದ ರವಿಪ್ರಸಾದ್, ಶ್ಯಾಂ, ಹರ್ಷ, ಅರುಣಕುಮಾರ, ವೈದ್ಯರಾದ ಡಾ.ಕುಮಾರ್, ಡಾ.ಶೈಲೇಶ್ ಇತರರು ಇದ್ದರು.
ಕೋವಿಡ್ ತಡೆಯುವಲ್ಲಿ ಸರ್ಕಾರ ವಿಫಲ: ರಂಗನಾಥ್
Get real time updates directly on you device, subscribe now.
Next Post
Comments are closed.