ಸಾರ್ವಜನಿಕ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸೆಂಟ್ರೇಟರ್‌ ರವಾನೆ

323

Get real time updates directly on you device, subscribe now.

ಶಿರಾ: ಕೋವಿಡ್‌ ಸೋಂಕಿನಿಂದಾಗಿ ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಅವಶ್ಯಕವಾದ ಆಮ್ಲಜನಕದ ಪೂರೈಕೆಗಾಗಿ ದಾನಿಗಳಿಂದ ಸಂಗ್ರಹಿಸಿದ್ದ ಮೂರು ಆಕ್ಸಿಜನ್‌ ಕಾನ್ಸೆಂಟ್ರೇಟರ್‌ಗಳನ್ನು ಪೊಲೀಸ್‌ ಇಲಾಖೆ ಗುರುವಾರ ಬೆಳಗ್ಗೆ ಸಾರ್ವಜನಿಕ ಆಸ್ಪತ್ರೆಗೆ ಹಸ್ತಾಂತರಿಸಿತು.
ಈ ವೇಳೆ ಹಾಜರಿದ್ದ ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ ಮಾತನಾಡಿ, ಪೊಲೀಸರು ಸೋಂಕಿನ ವಿರುದ್ಧ ಹೋರಾಡಲು ಸಹಾಯವಾಗುವಂತೆ ನಮ್ಮ ಆಸ್ಪತ್ರೆ ಗುರುತಿಸಿ 10 ಲೀಟರ್‌ ಸಾಮರ್ಥ್ಯದ ಮೂರು ಆಕ್ಸಿಜನ್‌ ಕಾನ್ಸೆಂಟ್ರೇಟರ್‌ಗಳನ್ನು ನೀಡಿರುವುದು ಗಮನಾರ್ಹ. ಕೋವಿಡ್‌ ಮೊದಲನೇ ಅಲೆ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ಜನರಲ್ಲಿ ಸೋಂಕು ಹರಡದಂತೆ ಜಾಗೃತಿ ವಹಿಸಿದ್ದರು. ಎರಡನೇ ಅಲೆ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಯಲ್ಲಿ ಸೋಂಕಿನ ವಿರುದ್ಧವೂ ಹೋರಾಟ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಈ ಹಿಂದೆ ಶಿರಾ ಆಸ್ಪತ್ರೆಯಲ್ಲಿ 5 ಕಾನ್ಸೆಂಟ್ರೇಟರ್ ಗಳು ಇದ್ದು, ಅಮೆಜಾನ್‌ ಕಂಪನಿಯಿಂದ ಕೆಲದಿನಗಳ ಹಿಂದೆ ಐದನ್ನು ಕಳುಹಿಸಿಕೊಡಲಾಗಿದೆ. ಆರೋಗ್ಯ ಇಲಾಖೆಯಿಂದ ಮತ್ತೆ ಏಳು ಕಾನ್ಸೆಂಟ್ರೇಟರ್ ಗಳನ್ನು ಕಳುಹಿಸಿಕೊಡಲಾಗಿದ್ದು ಅದರ ಜೊತೆಯಲ್ಲಿ ಪೊಲೀಸ್‌ ಇಲಾಖೆಯಿಂದ ನೀಡಲ್ಪಟ್ಟ ಮೂರು ಸೇರಿ ಒಟ್ಟು 20 ಆಕ್ಸಿಜನ್‌ ಕಾನ್ಸೆಂಟ್ರೇಟರ್ ಗಳು ರೋಗಿಗಳ ಸೇವೆಗೆ ಲಭ್ಯವಿದ್ದು ಜೊತೆಯಲ್ಲಿ ಆಕ್ಸಿಜನ್‌ ಸಿಲಿಂಡರ್ ಗಳನ್ನು ಕೂಡ ಬಳಕೆ ಮಾಡಲಾಗುತ್ತಿದೆ.
ಸದ್ಯಕ್ಕೆ ಶಿರಾ ಆಸ್ಪತ್ರೆಯಲ್ಲಿ ಆಮ್ಲಜನಕದ ಯಾವುದೇ ಕೊರತೆ ಇಲ್ಲವಾಗಿ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ಪಡೆದು ಗುಣಮುಖರಾದವರು ಡಿಸ್ಚಾರ್ಜ್‌ ಆಗುತ್ತಿದ್ದು, ಹೊಸ ರೋಗಿಗಳಿಗೆ ಕೂಡ ಆಕ್ಸಿಜನ್‌ನ ಕೊರತೆ ಕಂಡು ಬರುತ್ತಿಲ್ಲ ಎಂದರು. ತಹಶೀಲ್ದಾರ್‌ ಮಮತಾ, ಡಿವೈಎಸ್ಪಿ ಕುಮಾರಪ್ಪ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!