ತುಮಕೂರು: ಬ್ಯಾಂಕ್ ಗಳು ಪ್ರತಿಯೊಬ್ಬರ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ, ಬ್ಯಾಂಕ್ ಗಳು ಸಾಲ ಸೌಲಭ್ಯ ನೀಡುವ ಮೂಲಕ ಗ್ರಾಹಕರ ಆರ್ಥಿಕಾಭಿವೃದ್ಧಿಗೆ ಸಹಕಾರಿಯಾಗಿವೆ, ಜೊತೆಗೆ ಹಣ ಉಳಿತಾಯಕ್ಕೂ ಬ್ಯಾಂಕ್ ಗಳು ತುಂಬಾ ಸೇಫ್… ಇಂದು ನೂರಾರು ಬ್ಯಾಂಕ್‌ಗಳು ಕೆಲಸ ಮಾಡುತ್ತಿವೆ, ಗ್ರಾಹಕರಿಗೆ ಬೇಕಾದ ಸೌಲಭ್ಯ ಒದಗಿಸುವ ಮೂಲಕ ಹಣಕಾಸು ವ್ಯವಹಾರಕ್ಕೆ ಬುನಾದಿಯಾಗುತ್ತಿವೆ, ಇಷ್ಟೇ ಅಲ್ಲದೆ ಗ್ರಾಹಕರಿಗೆ ತಕ್ಷಣಕ್ಕೆ ಯಾವ ಜಾಗದಲ್ಲಿ ಯಾದರೂ ಹಣ ಬಿಡಿಸಿಕೊಳ್ಳಲು ಎಟಿಎಂ ವ್ಯವಸ್ಥೆ ಮಾಡಲಾಗಿದೆ. ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ಹೊಸ, ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಗ್ರಾಹಕ ಸ್ನೇಹಿ ಸಹಕಾರಿ ಸಂಸ್ಥೆಯಾಗಿ ಹೊರಹೊಮ್ಮುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್ ಸಂಚಾರಿ ಎಟಿಎಂಗೆ ಚಾಲನೆ ನೀಡಿ ಮಾತನಾಡಿ, ವರ್ಷದಿಂದ ವರ್ಷಕ್ಕೆ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಸಹಕಾರಿ ಕ್ಷೇತ್ರದಲ್ಲಿ ಹೊಸ ದಾಖಲೆ ಮಾಡುತ್ತಿದೆ, ಗ್ರಾಹಕರಿಗೆ ಅನುಕೂಲವಾಗಲೆಂದು ಹೊಸ ತಂತ್ರಜ್ಞಾನ ಬಳಸಿಕೊಳ್ಳುವುದರ ಜತೆಗೆ ಪಾರದರ್ಶಕತೆ ಕಾಪಾಡಿಕೊಂಡು ಗ್ರಾಹಕರ ನಂಬಿಕೆ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಈ ಬ್ಯಾಂಕ್ ಇನ್ನಷ್ಟು ಹೆಮ್ಮೆಯ ಸಂಸ್ಥೆಯಾಗಿ ಮತ್ತಷ್ಟು ಬೃಹದಾಕಾರವಾಗಿ ಬೆಳೆಯಲಿ ಎಂದು ಆಶಿಸಿದರು. ತುಂಬಾ ಖುಷಿ ವಿಚಾರ ಅಂದ್ರೆ ರಾಜ್ಯದಲ್ಲಿಯೇ ಈ ಸಂಚಾರಿ ಎಟಿಎಂ ಸೇವೆ ಮೊದಲಿಗೆ ಆರಂಭವಾಗಿರುವುದು ತುಮಕೂರಿನಲ್ಲೇ, ಈ ಪರಿಕಲ್ಪನೆಗೆ ಕಾರಣೀಭೂತರಾದ ಎನ್.ಎಸ್.ಜಯಕುಮಾರ್ ಬಗ್ಗೆ ಗ್ರಾಹಕರು ಮೆಚ್ಚುಗೆ ಮಾತನಾಡಿದ್ದಾರೆ. ಸಂಸದ ಜಿ.ಎಸ್.ಬಸವರಾಜು, ಮಾಜಿ ಸಚಿವ ಸೊಗಡು ಶಿವಣ್ಣ, ವೀರಶೈವ ಬ್ಯಾಂಕ್ ನ ಸಿಇಓ ಹೆಚ್.ಎಸ್.ಲಿಂಗರಾಜು ನಿರ್ದೇಶಕರಾದ ಡಿ.ಎ.ಮೋಹನ್, ಎಂ.ಎಸ್.ನಾಗರಾಜಗುಪ್ತ, ಸಂಸ್ಥೆಯ ಸಿಇಓ ಪಿ.ಎನ್.ರಮೇಶ್ ಸುಂದರ ಕ್ಷಣಕ್ಕೆ ಸಾಕ್ಷಿಯಾದರು.
ಗ್ರಾಹಕರ ಬಳಿಗೆ ಬರುತ್ತೆ ಎಟಿಎಂ- ರಾಜ್ಯದಲ್ಲೇ ಮೊದಲ ಸಂಚಾರಿ ಎಟಿಎಂಗೆ ಚಾಲನೆ
ಟಿಎಂಸಿಸಿ ಬ್ಯಾಂಕ್ ನಿಂದ ಸಂಚಾರಿ ಎಟಿಎಂ
Get real time updates directly on you device, subscribe now.
Next Post
Comments are closed.