ತುಮಕೂರು: ಶುಕ್ರವಾರದಂದು ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತೆ 2,190 ಏರಿಕೆ ಕಂಡಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 592 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 73,274 ಕ್ಕೆ ಏರಿಕೆ ಕಂಡಿದೆ. 17,839 ಸಕ್ರಿಯ ಪ್ರಕರಣಗಳ ಪೈಕಿ 2,062 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 592, ಚಿನಾಹಳ್ಳಿ 307, ಗುಬ್ಬಿ 101, ಕೊರಟಗೆರೆ 157, ಕುಣಿಗಲ್ 137, ಮಧುಗಿರಿ 250, ಪಾವಗಡ 148, ಶಿರಾ 209, ತಿಪಟೂರು 184, ತುರುವೇಕೆರೆಯಲ್ಲಿ 105 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಕೋವಿಡ್ ನಿಂದ ಪಾವಗಡ ತಾಲೂಕಿನ ಕರೆಕ್ಯಾತನಹಳ್ಳಿ ವ್ಯಕ್ತಿ (47), ಕೊರಟಗೆರೆ ತಾಲೂಕಿನಮಹಿಳೆ (55), ತುರುವೇಕೆರೆ ತಾಲೂಕಿನ ಬೇವಿನಹಳ್ಳಿ ಗ್ರಾಮದ ವ್ಯಕ್ತಿ (40), ತುಮಕೂರಿನ ಎಸ್.ಐ.ಟಿ ಬಡಾವಣೆಯ ವ್ಯಕ್ತಿ (29), ತುಮಕೂರಿನ ಶಾಂತಿನಗರದ ವ್ಯಕ್ತಿ (52), ತುರುವೇಕೆರೆ ತಾಲೂಕಿನ ಹಡವನಹಳ್ಳಿ ಗ್ರಾಮದ ವ್ಯಕ್ತಿ (80), ತುಮಕೂರಿನ ಎನ್.ಆರ್ ಕಾಲೋನಿ ಬಡಾವಣೆಯ ವ್ಯಕ್ತಿ (65), ತುಮಕೂರಿನ ರಾಜೀವ್ ಗಾಂಧಿ ನಗರದ ಬಾಲಕಿ (16), ಅನ್ಯಕಾರಣದಿಂದ ತುಮಕೂರಿನ ಅಗ್ರಹಾರ ಬಡಾವಣೆಯ ಮಹಿಳೆ (65), ಪಾವಗಡ ತಾಲೂಕಿನ ಬಾಲಮ್ಮನಹಳ್ಳಿ ಗ್ರಾಮದ ವ್ಯಕ್ತಿ (45), ತುಮಕೂರು ನಗರದ ಬಟವಾಡಿಯ ಮಹಿಳೆ (65), ತುರುವೇಕೆರೆ ತಾಲೂಕಿನ ಡಿ. ಕಲ್ಕೆರೆ ಗ್ರಾಮದ ಮಹಿಳೆ (75), ಕೊರಟಗೆರೆ ತಾಲೂಕಿನ ಮಾರಚರಹಳ್ಳಿ ಗ್ರಾಮದ ವ್ಯಕ್ತಿ (70), ಪಾವಗಡ ತಾಲೂಕಿನ ನೀಲಮ್ಮನಹಳ್ಳಿ ಗ್ರಾಮದ ಮಹಿಳೆ (70), ತುಮಕೂರು ನಗರ ಶಿರಗೇಟ್ ನ ಮಹಿಳೆ (60), ಮಧುಗಿರಿ ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ವ್ಯಕ್ತಿ (50), ಮಧುಗಿರಿ ತಾಲೂಕಿನ ಚಿನ್ನಕವಜ್ರ ಗ್ರಾಮದ ವ್ಯಕ್ತಿ (80) ಒಟ್ಟು17 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
2,190 ಮಂದಿಗೆ ಕೋವಿಡ್: 17 ಸಾವು
Get real time updates directly on you device, subscribe now.
Comments are closed.