ಅಮಲಾಪುರದಲ್ಲಿ ಕುಟುಂಬಗಳಿಗೆ ಅಗತ್ಯ ವಸ್ತು ವಿತರಣೆ

ಹಕ್ಕಿಪಿಕ್ಕಿ ಜನರ ಬದುಕಿಗೆ ಜಪಾನಂದಜಿ ಆಸರೆ

441

Get real time updates directly on you device, subscribe now.

ತುಮಕೂರು: ಸ್ವಾಮಿ ಜಪಾನಂದಜೀ ಅವರು ಇತ್ತೀಚೆಗೆ ಮಾಧ್ಯಮದಲ್ಲಿ ಬಂದ ಸುದ್ದಿ ಗಮನಿಸಿ ತುಮಕೂರು ತಾಲ್ಲೂಕಿನ ಅಮಲಾಪುರ ಗ್ರಾಮದ ಕೇಂದ್ರೀಯ ವಿದ್ಯಾಲಯದ ಹತ್ತಿರ ಇರುವ ಸುಮಾರು 150 ಹಕ್ಕಿ ಪಿಕ್ಕಿ ಜನಾಂಗದ ವಾಸ ಸ್ಥಳಕ್ಕೆ ಭೇಟಿ ನೀಡಿ ಆಹಾರದ ಕಿಟ್‌ ವಿತರಿಸಿದರು.
ಪಾವಗಡದಿಂದ ಸುಮಾರು 75 ಕಿ.ಮೀ. ಇರುವ ಅಮಾಲಾಪುರ ಬಳಿ ಕೊರೊನಾ ಲಾಕ್ ಡೌನ್‌ ಸಮಯದಲ್ಲಿ ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿದ್ದ, ಯಾವುದೇ ರೀತಿಯ ಮೂಲಭೂತ ಸೌಕರ್ಯವಿಲ್ಲದೆ ಜೀವನ ಸಾಗಿಸುತ್ತಿದ್ದ ಜನರಿಗೆ ನೆರವಾಗಬೇಕೆಂದು ಸ್ವಾಮೀಜಿ ತೀರ್ಮಾನಿಸಿದರು.
ತಕ್ಷಣವೇ ತಮ್ಮ ವಿವೇಕ ಬ್ರಿಗೇಡ್‌ ತಂಡದವರೊಂದಿಗೆ ಸ್ವಾಮೀಜಿಯವರು ಪಾವಗಡದ ಸರ್ಕಾರಿ ಸಹಾಯಕ ಅಭಿಯೋಜಕ ವಿ.ಮಂಜುನಾಥ್‌ ಅವರೊಂದಿಗೆ ಭೇಟಿ ನೀಡಿ 150 ಜನನರಿರುವ ಸಮುಚ್ಛಯದಲ್ಲಿ ಪ್ರತಿ ಕುಟುಂಬಕ್ಕೆ ಅಡುಗೆ ಪಾತ್ರೆಗಳ ಸೆಟ್‌, ಅಡುಗೆ ಎಣ್ಣೆ, 10 ಕೆಜಿ ಅಕ್ಕಿ, ತಲಾ 2 ಕೆಜಿಯಂತೆ ಬೇಳೆ, ರವೆ, ಸಕ್ಕರೆ, ಉಪ್ಪು, ಗೋಧಿ ಹಿಟ್ಟು ಮತ್ತು 1 ಕೆಜಿ ಸಾಂಬಾರು ಪುಡಿ ಇತ್ಯಾದಿಗಳನ್ನು ನೀಡಿದರಲ್ಲದೆ ಪ್ರತಿಯೊಬ್ಬರಿಗೂ ಮುಖಗವಸು, ಸೋಪು ವಿತರಿಸಿದರು.
ನಿಜಕ್ಕೂ ಕೊರೊನಾದ ಎರಡನೇ ಅಲೆ ಇಂತಹ ಸಾವಿರಾರು ಕುಟುಂಬಗಳನ್ನು ನಿರ್ಗತಿಕರನ್ನಾಗಿ ಮಾಡಿರುವುದು ಅತ್ಯಂತ ದುಃಖವಾದ ವಿಚಾರವೇ ಸರಿ, ಈ ಸಂದರ್ಭದಲ್ಲಿ ಸ್ವಾಮೀಜಿಯವರು ಮಾತನಾಡಿ ತುಮಕೂರು ಜಿಲ್ಲೆಯಲ್ಲಿರುವ ಇಂತಹ ನಿರ್ಗತಿಕ ಮತ್ತು ಅತ್ಯಂತ ಹಿಂದುಳಿದ ಹಕ್ಕಿ ಪಿಕ್ಕಿ ಜನಾಂಗ ಕಾಡು ಮೇಡುಗಳನ್ನು ಸುತ್ತುತ್ತಾ ಬಾಚಣಿಗೆ, ಪಿನ್ನು ಇತ್ಯಾದಿಗಳನ್ನು ಊರಿಂದೂರಿಗೆ ಹೋಗಿ ಮಾರುತ್ತಾ ಜೀವನ ನಡೆಸುತ್ತಿರುವ ಇವರಿಗೆ ಸಹಾಯಹಸ್ತ ನೀಡುವುದು ಮಾನವೀಯ ಕಾರ್ಯ, ಇಡೀ ತುಮಕೂರು ಜಿಲ್ಲೆಯಲ್ಲಿಯೇ ಈ ಕಾರ್ಯಕ್ರಮ ಆರಂಭವಾಗಿದೆ, ಕರುನಾಡ ತಾಯಿ ಸುಧಾಮೂರ್ತಿಯವರ ಹಾಗೂ ಇನ್ಫೋಸಿಸ್‌ ಫೌಂಡೇಷನ್ ನ ಅಮೂಲ್ಯ ಸಹಕಾರದೊಂದಿಗೆ ಈ ಕೆಲಸ ಕೈಗೆತ್ತಿಕೊಂಡಿರುವುದಾಗಿ ಹಾಗೂ ಸರಿ ಸುಮಾರು 600 ಕುಟುಂಬಗಳಿಗೆ ಈ ರೀತಿಯ ಸೇವೆ ಸಲ್ಲಿಸುವುದಾಗಿ, ಅವರವರ ಸ್ಥಳಗಳಿಗೆ ತೆರಳಿ ಚಿಕ್ಕನಾಯಕನಹಳ್ಳಿಯಿಂದ ಹಿಡಿದು ಪಾವಗಡದವರೆಗೆ ಇಂತಹ ಸಮುಚ್ಚಯಗಳನ್ನು ಗುರುತಿಸಿದ್ದು ಇವರಿಗೆ ಸಹಾಯಹಸ್ತ ನೀಡಲಾಗುತ್ತದೆ ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!