ಕುಣಿಗಲ್: ಜೂಜುಕೋರರ ತಂಡದ ಮೇಲೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ, ಮೂವರನ್ನು ವಶಕ್ಕೆ ಪಡೆದಿರುವ ಘಟನೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ನೀಲತ್ತಹಳ್ಳಿ ಗ್ರಾಮದ ಕೆರೆ ಬಯಲು ಪ್ರದೇಶದಲ್ಲಿ ಕೆಲವರು ಜೂಜಾಟದಲ್ಲಿ ನಿತರರಾಗಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕುಣಿಗಲ್ ಸಿಪಿಐ ರಾಜು ಮತ್ತು ತಂಡ ದಾಳಿಗೆ ತೆರಳಿದ್ದರು. ಪೊಲೀಸರ ಆಗಮನ ವಿಷಯ ತಿಳಿದು ಪರಾರಿಯಾಗುತ್ತಿದ್ದವರ ಪೈಕಿ ಇಬ್ಬರನ್ನು ವಶಕ್ಕೆ ಪಡೆದಿದ್ದು ಉಳಿದವರು ಪರಾರಿಯಾಗಿದ್ದಾರೆ. ವಶಕ್ಕೆ ಪಡೆದವರನ್ನು ಠಾಣೆಗೆ ಕರೆತರುವ ಮಾರ್ಗಮಧ್ಯೆ ಕಾರಿನಲ್ಲಿ ಬಂದ ಉಮೇಶ, ಸತೀಶ, ಲೋಕೇಶ ಎಂಬುವರು ಪೊಲೀಸರ ವಾಹನ ಅಡ್ಡಗಟ್ಟಿ ವಶಕ್ಕೆ ಪಡೆದಿರುವ ಬಗ್ಗೆ ವಾಗ್ವಾದ ನಡೆಸಿದರು. ಇದನ್ನು ತಡೆಯಲು ವಾಹನದಿಂದ ಇಳಿದ ಮುಖ್ಯಪೇದೆ ಅಬ್ದುಲ್‌ಖಾದರ್ ಜಿಲಾನಿ ಅವರೊಂದಿಗೆ ಜಟಾಪಟಿ ನಡೆಸಿ ಹಲ್ಲೆ ನಡೆಸಲು ಮುಂದಾಗಿದ್ದಲ್ಲದೆ ವಾಹನ ಸುಡುವ ಬೆದರಿಕೆ ಹಾಕಿದ್ದರು. ಬೆದರಿಕೆ ಹಾಕಿದ್ದವರನ್ನೂ ವಶಕ್ಕೆ ಪಡೆದ ಪೊಲೀಸರು, ಸಿಪಿಐ ರಾಜು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರ ಮೇಲೆ ಹಲ್ಲೆಗೆ ಯತ್ನ- ಮೂವರ ಬಂಧನ
Get real time updates directly on you device, subscribe now.
Next Post
Comments are closed.