2,284 ಮಂದಿಗೆ ಕೋವಿಡ್: 18 ಸಾವು

2,395

Get real time updates directly on you device, subscribe now.

ತುಮಕೂರು: ಶನಿವಾರದಂದು ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತೆ 2,284 ಏರಿಕೆ ಕಂಡಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 702 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 75,558 ಕ್ಕೆ ಏರಿಕೆ ಕಂಡಿದೆ. 18,398 ಸಕ್ರಿಯ ಪ್ರಕರಣಗಳ ಪೈಕಿ 1,707 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 702, ಚಿನಾಹಳ್ಳಿ 89, ಗುಬ್ಬಿ 189, ಕೊರಟಗೆರೆ 55, ಕುಣಿಗಲ್ 117, ಮಧುಗಿರಿ 138, ಪಾವಗಡ 107, ಶಿರಾ 249, ತಿಪಟೂರು 314, ತುರುವೇಕೆರೆಯಲ್ಲಿ 324 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಕೋವಿಡ್ ನಿಂದ ಪಾವಗಡ ತಾಲೂಕಿನ ಸಿ.ಎಸ್.ಆರ್. ಪಾಳ್ಯ ಗ್ರಾಮದ ವ್ಯಕ್ತಿ (40), ತುಮಕೂರು ತಾಲೂಕಿನ ಕ್ಯಾತಸಂದ್ರದ ವ್ಯಕ್ತಿ (60), ತುಮಕೂರು ತಾಲೂಕಿನ ಸೀತಾಕಲ್ಲು ಊರ್ಡಿಗೆರೆ ಗ್ರಾಮದ ಮಹಿಳೆ (55), ತುಮಕೂರು ತಾಲೂಕಿನ ದೇವರಾಯ ಪಟ್ಟಣ ಗ್ರಾಮದ ವ್ಯಕ್ತಿ (55), ತುಮಕೂರಿನ ಸದಾಶಿವ ನಗರದ ವ್ಯಕ್ತಿ (40), ತುಮಕೂರು ನಗರದ ಉಪ್ಪಾರಹಳ್ಳಿ ಬಡಾವಣೆಯ ಮಹಿಳೆ (35), ತುರುವೇಕೆರೆ ತಾಲೂಕಿನ ಬೆಸೆಗೆರೆಹಳ್ಳಿ ಗ್ರಾಮದ ವ್ಯಕ್ತಿ (55), ಶಿರಾ ನಗರದ ವ್ಯಕ್ತಿ (60),ಅನ್ಯಕಾರಣದಿಂದ ತುಮಕೂರು ತಾಲೂಕಿನ ದೊಡ್ಡತಿಮ್ಮಯನಪಾಳ್ಯ ಗ್ರಾಮದ ವ್ಯಕ್ತಿ (56), ತುಮಕೂರಿನ ಸದಾಶಿವ ನಗರದ ಮಹಿಳೆ (36), ತುಮಕೂರು ತಾಲೂಕಿನ ಹೆಗ್ಗೆರೆ ಗ್ರಾಮದ ಮಹಿಳೆ (66), ಪಾವಗಡ ತಾಲೂಕಿನ ದೇವಲಕೆರೆ ಗ್ರಾಮದ ವ್ಯಕ್ತಿ (86), ಪಾವಗಡ ತಾಲೂಕಿನ ಶೈಲಾಪುರ ಗ್ರಾಮದ ವ್ಯಕ್ತಿ (58) ಪಾವಗಡ ತಾಲೂಕಿನ ವ್ಯಕ್ತಿ (76), ಪಾವಗಡ ತಾಲೂಕಿನ ವೆಂಕಾಟಪುರ ಗ್ರಾಮದ ವ್ಯಕ್ತಿ (60),ಶಿರಾ ತಾಲೂಕಿನ ವ್ಯಕ್ತಿ (68), ಪಾವಗಡ ತಾಲೂಕಿನ ಮರಡಿಪಾಳ್ಯಗ್ರಾಮದ ಮಹಿಳೆ (50) ಒಟ್ಟು18 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!