1,682 ಮಂದಿಗೆ ಕೊರೊನಾ: 11 ಸಾವು

1,863

Get real time updates directly on you device, subscribe now.


ತುಮಕೂರು:ಭಾನುವಾರದಂದು ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತೆ 1,682 ಕ್ಕೆ ಏರಿಕೆ ಕಂಡಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 311 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 77,240 ಕ್ಕೆ ಏರಿಕೆ ಕಂಡಿದೆ.

18,057 ಸಕ್ರಿಯ ಪ್ರಕರಣಗಳ ಪೈಕಿ 2,005 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 311, ಚಿನಾಹಳ್ಳಿ 135, ಗುಬ್ಬಿ 182, ಕೊರಟಗೆರೆ 215, ಕುಣಿಗಲ್ 28, ಮಧುಗಿರಿ 46, ಪಾವಗಡ 222, ಶಿರಾ 414, ತಿಪಟೂರು 65, ತುರುವೇಕೆರೆಯಲ್ಲಿ 64 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಕೋವಿಡ್ ನಿಂದ ಶಿರಾ ತಾಲ್ಲೂಕಿನ ಹಾಲೇನಹಳ್ಳಿ ಗ್ರಾಮದ ಪುರುಷ (28), ನಗರದ ಮಹಿಳೆ (80) ಅನ್ಯಕಾರಣದಿಂದ ಮೃತರಾಗಿದ್ದಾರೆ.

ತುರುವೇಕೆರೆ ನಗರದ ಮಹಿಳೆ (54) ಇದೇ ತಾಲೂಕಿನ ಬಡಗೇರಹಳ್ಳಿ ಗ್ರಾಮದ ಮಹಿಳೆ (52) ಬಲಿ ಆಗಿದ್ದಾರೆ.

ಕೊರಟಗೆರೆ ನಗರದ ಮಹಿಳೆ (28) ಇದೇ ತಾಲ್ಲೂಕಿನ ಮರಟಹಳ್ಳಿ ಗ್ರಾಮದ ಪುರುಷ (55) ಜೀವ ಬಿಟ್ಟಿದ್ದಾರೆ.

ತುಮಕೂರಿನ ಶ್ರೀರಾಮನಗರ ಮಹಿಳೆ (77), ಬನಶಂಕರಿ ಬಡಾವಣೆಯ ಮಹಿಳೆ (52) ಮೃತರಾಗಿದ್ದಾರೆ.

ಮಧುಗಿರಿ ನಗರದ ಮಹಿಳೆ (36), ಮಧುಗಿರಿ ತಾಲ್ಲೂನಿಕ ಮಲ್ಲೇನಹಳ್ಳಿ ಗ್ರಾಮದ ವ್ಯಕ್ತಿ (31) ಕೋವಿಡ್ ನಿಂದ ಹಾಗೂ ಪಾವಗಡದ ನಗರದ ವ್ಯಕ್ತಿ (73) ಅನ್ಯಕಾರಣದಿಂದ ಜೀವ ಬಿಟ್ಟಿದ್ದಾರೆ.

ಒಟ್ಟು11 ಮಂದಿ ಜೀವ ತೆತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!