ಶಿರಾ: ಗ್ರಾಮೀಣ ಪ್ರದೇಶದ ಕೊರೊನಾ ಸೋಂಕಿತರು ದೂರದ ಕೊವೀಡ್ ಕೇರ್ ಸೆಂಟರ್ ಗೆ ಬರುವುದು ಕಷ್ಟ ಸಾಧ್ಯ, ಈ ನಿಟ್ಟಿನಲ್ಲಿ ಪಂಜಿಗಾನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನನ್ನ ಸ್ವಂತ ಹಣ 2.50 ಲಕ್ಷ ರೂಪಾಯಿ ಖರ್ಚು ಮಾಡಿ 10 ಬೆಡ್ ಗಳನ್ನು ಒಳಗೊಂಡ ಶೆಡ್ ನಿರ್ಮಾಣ ಮಾಡಿದ್ದೇವೆ, ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೂ ಅನುಕೂಲವಾಗಲಿದೆ, ತಾಲೂಕಿನ ಎಲ್ಲಾ ಪಂಚಾಯತಿಯಲ್ಲಿ ಕೊವೀಡ್ ಟಾಸ್ಕ್ ಫೋರ್ಸ್ ಸ್ಥಾಪನೆ ಮಾಡಲಾಗಿದ್ದು ಗ್ರಾಪಂ ಸದಸ್ಯರು ಹಾಗೂ ಆಶಾ ಮತ್ತು ಆರೋಗ್ಯ ಕಾರ್ಯಕರ್ತರು ಒಗ್ಗೂಡಿ ಸೋಂಕಿಗೆ ಕಡಿವಾಣ ಹಾಕಲು ಸಹಕರಿಸಬೇಕಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ತಿಳಿಸಿದರು.
ತಾಲೂಕಿನ ಪಂಜಿಗಾನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಕೊವೀಡ್ ಕೇರ್ ಸೆಂಟರ್ ಉದ್ಘಾಟಿಸಿ ಮಾತನಾಡಿ, ಬೆಂಗಳೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಇಳಿಮುಖವಾಗಿದೆ, ಆದರೆ ಶಿರಾ ತಾಲೂಕಿನಲ್ಲಿ ಸಾರ್ವಜನಿಕರಿಗೆ ಅರಿವಿನ ಕೊರತೆ, ಸೋಂಕಿತರ ಜೊತೆ ಒಡನಾಟ ಇರುವುದು ಸೋಂಕು ನಿಯಂತ್ರಣ ನಿಧಾನವಾಗಿದೆ. ತಾಲೂಕಿನಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದ್ದು, ಸೋಂಕಿನ ನಿಯಂತ್ರಣಕ್ಕೆ ಹೆಚ್ಚು ಗಮನಹರಿಸಿ ಅಗತ್ಯ ಮುಂಜಾಗ್ರತ ಕ್ರಮಗಳು ಕೈಗೊಳ್ಳಲಾಗಿದ್ದು ಸೋಂಕಿತರ ಸಂಖ್ಯೆ ಕೊಡ ಶೀಘ್ರ ಇಳಿಮುಖವಾಗುವ ವಿಶ್ವಾಸವಿದೆ. ಕೊರೊನಾ ಸೋಂಕಿತರ ಸಾವಿನ ನಂತರ ಅಂತ್ಯ ಸಂಸ್ಕಾರ ಮಾಡುವ ಬಾಹುಬಲಿ ತಂಡ, ಕೊವಿಡ್ ಟಾಸ್ಕ್ ಫೋರ್ಸ್‌ನ ವಾಟ್ಸಫ್ ಗ್ರೂಪ್ ತಂಡ ಹಾಗೂ ನಿರಂತರವಾಗಿ ಆಹಾರ ತಯಾರು ಮಾಡಿ ನಿರ್ಗತಿಕರಿಗೆ, ಬಡವರಿಗೆ, ಸೋಂಕಿತರಿಗೆ, ಸಹಾಯಕರಿಗೆ ಸೇವಾ ಮನೋಭಾವದಿಂದ ದುಡಿಯುತ್ತಿರುವ ಪ್ರತಿಯೊಬ್ಬರ ಸೇವೆ ಅವಿಸ್ಮರಣೀಯ ಎಂದರು.
ವೈದ್ಯಾಧಿಕಾರಿ ಡಾ.ಶ್ರೀಕಾಂತ್, ಮುಖಂಡರಾದ ಪಿ.ಎನ್.ನಾಗರಾಜು, ಜಯಮ್ಮ, ರಾಮಕೃಷ್ಣೇಗೌಡ, ಗೋಪಾಲಪ್ಪ, ಆರೋಗ್ಯ ಕಾರ್ಯಕರ್ತರಾದ ಸುರೇಶ್ ಬಾಬು, ವಿಜಯೇಂದ್ರ, ಮಕ್ಸೂದ್ ಹಾಜರಿದ್ದರು.
ಎರಡೂವರೆ ಲಕ್ಷ ವೆಚ್ಚದಲ್ಲಿ ಕೊವೀಡ್ ಕೇರ್ ಸೆಂಟರ್ ನಿರ್ಮಾಣ
Get real time updates directly on you device, subscribe now.
Next Post
Comments are closed.