ಕೊರೊನಾ ವಾರಿಯರ್ಸ್ ಗಳಿಗೆ ಊಟದ ವ್ಯವಸ್ಥೆ

112

Get real time updates directly on you device, subscribe now.

ಗುಬ್ಬಿ: ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಕೆಲಸ ಕಾರ್ಯಗಳು ಇಲ್ಲದೆ ಕಷ್ಟದಲ್ಲಿರುವವರಿಗೆ ಸಹಕಾರ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಬಿ.ಚಂದ್ರಶೇಖರ್ ಬಾಬು ತಿಳಿಸಿದರು.
ಗುಬ್ಬಿ ತಾಲೂಕಿನ ಪುರ ಗ್ರಾಮದಲ್ಲಿ ಕೊರೊನಾ ವಾರಿಯರ್ಸ್ಗಳಿಗೆ ಹಾಗೂ ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಿ ತಾಲೂಕಿನ ನಿಟ್ಟೂರು, ಚೇಳೂರು, ಗುಬ್ಬಿ ಸೇರಿದಂತೆ ಹಲವು ಭಾಗದಲ್ಲಿ ಊಟದ ವ್ಯವಸ್ಥೆ ಮಾಡಿ ಮಾತನಾಡಿ, ಲಾಕ್ಡೌನ್ನಿಂದಾಗಿ ಯಾವುದೇ ಹೋಟೆಲ್ ಗಳು ಬಾಗಿಲು ತೆಗೆದಿಲ್ಲ, ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಮಾಡುತ್ತಿರುವರಿಗೂ ಸಹ ಊಟದ ಸಮಸ್ಯೆ ಕಾಡುತ್ತಿದೆ ಅದರ ಜೊತೆಯಲ್ಲಿ ಪ್ರತಿನಿತ್ಯ ನಿಟ್ಟೂರು ಚೇಳೂರು ಆಸ್ಪತ್ರೆಗಳಿಗೆ ಅನಾರೋಗ್ಯ ಹಿನ್ನಲೆಯಲ್ಲಿ ಜನ ಬರುತ್ತಿದ್ದು ಅವರಿಗೂ ಊಟದ ಸಮಸ್ಯೆ ಎದುರಾಗಿತ್ತು, ಇದನ್ನು ಕಂಡಂತ ನಮ್ಮ ಸ್ನೇಹಿತರ ಬಳಗ ಕಳೆದ ವಾರದಿಂದ ಬೆಳಗ್ಗೆ, ತಿಂಡಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗುತ್ತಿದೆ, ಲಾಕ್ ಡೌನ್ ಮುಗಿಯುವವರೆಗೂ ಸಹ ಕಷ್ಟದಲ್ಲಿ ಇರುವವರಿಗೆ ಪ್ರತಿನಿತ್ಯ ಊಟದ ವ್ಯವಸ್ಥೆ ಮಾಡಲಾಗುತ್ತದೆ ಹಾಗೂ ರಸ್ತೆಯಲ್ಲಿ ನಿರ್ಗತಿಕರಾಗಿ ಓಡಾಡುವ ಹಾಗೂ ಲಾರಿ ಚಾಲಕರು ಸೇರಿದಂತೆ ಇನ್ನಿತರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಕಾರ್ಯಕ್ಕೆ ಹರ್ಷ ಸಂದೇಶ್, ಕೀರ್ತಿ, ಸುರೇಶ್, ಮುರುಗೇಂದ್ರಪ್ಪ, ಕಲ್ಲೇಶ್, ದರ್ಶನ್, ರಕ್ಷಿತ್, ಪರಮೇಶ್ ಸಹಕಾರ ನೀಡುತ್ತಿದ್ದಾರೆ.

Get real time updates directly on you device, subscribe now.

Comments are closed.

error: Content is protected !!