ತುಮಕೂರು-5, ಮಧುಗಿರಿ-2, ಪಾವಗಡ-2 ಸೇರಿ ಒಟ್ಟು 14 ಸಾವು

2,014 ಮಂದಿಗೆ ಪಾಸಿಟಿವ್

3,722

Get real time updates directly on you device, subscribe now.

ತುಮಕೂರು: ಕ್ರೂರಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಸೋಮವಾರದಂದು ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತೆ 2,014 ಏರಿಕೆ ಕಂಡಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 497 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 79,254 ಕ್ಕೆ ಏರಿಕೆ ಕಂಡಿದೆ. 17,772 ಸಕ್ರಿಯ ಪ್ರಕರಣಗಳ ಪೈಕಿ 2,292 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 497, ಚಿನಾಹಳ್ಳಿ 116, ಗುಬ್ಬಿ 70, ಕೊರಟಗೆರೆ 124, ಕುಣಿಗಲ್ 306, ಮಧುಗಿರಿ 364, ಪಾವಗಡ 90, ಶಿರಾ 97, ತಿಪಟೂರು 228, ತುರುವೇಕೆರೆಯಲ್ಲಿ 122 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಕೋವಿಡ್ ನಿಂದ ತುಮಕೂರು ತಾಲೂಕಿನ ವೀರಾಪುರ ಗ್ರಾಮದ ವ್ಯಕ್ತಿ (60), ತುಮಕೂರು ನಗರದ ಶಿರಾಗೇಟ್ ಬಡಾವಣೆಯ ವ್ಯಕ್ತಿ (71), ತುಮಕೂರು ತಾಲುಕಿನ ಕುರುಬರಹಳ್ಳಿ ಗ್ರಾಮದ ಮಹಿಳೆ (65), ತುಮಕೂರು ನಗರದ ಜೈಪುರ ಮಹಿಳೆ (60), ತುಮಕೂರು ನಗರದ ಎಸ್.ಎಸ್. ಪುರಂ ನ ವ್ಯಕ್ತಿ (88).
ತುರುವೇಕೆರೆ ತಾಲೂಕಿನ ಕರಿಗೊಮಡರಹಳ್ಳಿ ಗ್ರಾಮದ ವ್ಯಕ್ತಿ (37), ಮಧುಗಿರಿ ತಾಲೂಕಿನ ಮಿಡತರಹಳ್ಳಿ ಗ್ರಾಮದ ಮಹಿಳೆ (29), ಮಧುಗಿರಿ ತಾಲೂಕಿನ ಮಲ್ಲನಾಯಕನಹಳ್ಳಿ ಗ್ರಾಮದ ವ್ಯಕ್ತಿ (65), ಗುಬ್ಬಿ ತಾಲುಕಿನ ಕಡಬ ಗ್ರಾಮದ ವ್ಯಕ್ತಿ (28), ಪಾವಗಡ ತಾಲುಕಿನ ಕೊಡಿಗೆಹಳ್ಳಿ ಗ್ರಾಮದ ವ್ಯಕ್ತಿ (48), ಪಾವಗಡ ತಾಲೂಕಿನ ಸಿ.ಕೆ ಪುರ ಗ್ರಾಮದ ವ್ಯಕ್ತಿ (40), ಕುಣಿಗಲ್ ತಾಲೂಕಿನ ವ್ಯಕ್ತಿ (61), ತಿಪಟೂರು ತಾಲೂಕಿನ ಹೊನ್ನವಳ್ಳಿ ಗ್ರಾಮದ ಮಹಿಳೆ (65), ಅನ್ಯಕಾರಣದಿಂದ ಶಿರಾ ತಾಲೂಕಿನ ಬಾಲಜಿ ನಗರದ ಮಹಿಳೆ (54) ಒಟ್ಟು14 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!