ತುಮಕೂರು-8, ಕೊರಟಗೆರೆ-3 ಸೇರಿ ಒಟ್ಟು 15 ಸಾವು

1,754 ಮಂದಿಗೆ ಪಾಸಿಟಿವ್

3,530

Get real time updates directly on you device, subscribe now.

ತುಮಕೂರು: ಕ್ರೂರಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಮಂಗಳವಾರದಂದು ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತೆ 1,754 ಏರಿಕೆ ಕಂಡಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 395 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 81,008 ಕ್ಕೆ ಏರಿಕೆ ಕಂಡಿದೆ. 17,790 ಸಕ್ರಿಯ ಪ್ರಕರಣಗಳ ಪೈಕಿ 1,721 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 395, ಚಿನಾಹಳ್ಳಿ 126, ಗುಬ್ಬಿ 324, ಕೊರಟಗೆರೆ 129, ಕುಣಿಗಲ್ 62, ಮಧುಗಿರಿ 129, ಪಾವಗಡ 162, ಶಿರಾ 214, ತಿಪಟೂರು 71, ತುರುವೇಕೆರೆಯಲ್ಲಿ 142 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಕೋವಿಡ್ ನಿಂದ ತಿಪಟೂರು ತಾಲೂಕಿನ ಕೆಆರ್ ಬಡಾವಣೆಯ ವ್ಯಕ್ತಿ (40), ಕುಣಿಗಲ್ ತಾಲೂಕಿನ ದುರ್ಗದ ಹಳ್ಳಿ ಗ್ರಾಮದ ವ್ಯಕ್ತಿ (34), ಕೊರಟಗೆರೆ ತಾಲೂಕಿನ ಯರಪ್ಪನಹಳ್ಳಿ ಗ್ರಾಮದ ಮಹಿಳೆ (70), ತುಮಕುರು ನಗರದ ಶಿವಮೂಕಾಂಬಿಕ ನಗರದ ವ್ಯಕ್ತಿ (59), ಪಾವಗಡ ತಾಲೂಕಿನ ಗುಪುರ್ ತಾಂಡದ ವ್ಯಕ್ತಿ (43), ಕೊರಟಗೆರೆ ತಾಲೂಕಿನ ಮಹಿಳೆ (60), ಕೊರಟಗೆರೆ ತಾಲೂಕಿನ ಜಂಪೇನಹಳ್ಳಿ ಗ್ರಾಮದ ವ್ಯಕ್ತಿ (37), ಅನ್ಯಕಾರಣದಿಂದ ತುಮಕೂರು ನಗರದ ಜಯನಗರದ ವ್ಯಕ್ತಿ (51), ತುಮಕೂರು ನಗರದ ಶಿರಾಗೇಟ್ ಬಡಾವಣೆಯ ವ್ಯಕ್ತಿ (60), ತುಮಕೂರು ನಗರದ ಜೆ.ಪಿ ಲೇಔಟ್ ನ ವ್ಯಕ್ತಿ (52), ತುಮಕೂರು ನಗರದ ಕೆ.ಹೆಚ್.ಬಿ ಕಾಲೋನಿಯ ವ್ಯಕ್ತಿ (72), ತುಮಕೂರಿನ ಸದಾಶಿವನಗರದ ವ್ಯಕ್ತಿ (84), ತುಮಕೂರು ನಗರದ ಪುರಸ್ ಕಾಲೋನಿಯ ವ್ಯಕ್ತಿ (55), ತುಮಕೂರು ತಾಲೂಕಿನ ಗೌರಿಪುರ ಗ್ರಾಮದ ವ್ಯಕ್ತಿ (70), ಮಧುಗಿರಿ ತಾಲೂಕಿನ ಮಿಡಿಗೇಶಿ ಗ್ರಾಮದ ವ್ಯಕ್ತಿ (55) ಒಟ್ಟು15 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!