ಲಸಿಕೆ ಪಡೆದು ಕೊರೊನಾ ದೂರ ಮಾಡಿ: ಜ್ಯೋತಿಗಣೇಶ್

411

Get real time updates directly on you device, subscribe now.

ತುಮಕೂರು: ನಗರದ ಸಪ್ತಗಿರಿ ಬಡಾವಣೆ, ವಿಜಯನಗರದ ನಳಂದ ಕಾನ್ವೆಂಟ್ ನ ಬಳಿ ಮಹಾನಗರ ಪಾಲಿಕೆ ಸದಸ್ಯ ವಿಷ್ಣುವರ್ಧನ, ತಾಲ್ಲೂಕು ಆರೋಗ್ಯಾಧಿಕಾರಿ ಮೋಹನ್‌ ಹಾಗೂ ಪ್ರೈಮರಿ ಹೆಲ್ತ್ ಕೇರ್‌ ಸೆಂಟರ್ ನ ಡಾ.ಸುಭಾಷ್‌ ಹಾಗೂ ಸಿಬ್ಬಂದಿ ಸಹಯೋಗದೊಂದಿಗೆ ನಡೆಯುತ್ತಿರುವ ಕೋವಿಡ್‌ ಲಸಿಕಾ ಕೇಂದ್ರಕ್ಕೆ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಭೇಟಿ ನೀಡಿ ಲಸಿಕೆ ಪಡೆಯುವ ಜನರ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಕಳೆದ ಎರಡು ದಿನಗಳಿಂದ ಕೋವಿಡ್‌ ಲಸಿಕೆ ಹಾಕಲಾಗುತ್ತಿದ್ದು, ಈ ಭಾಗದಲ್ಲಿ ಅತಿ ಹೆಚ್ಚು ಹಿರಿಯ ನಾಗರಿಕರಿದ್ದು, ತುಮಕೂರು ನಗರದಲ್ಲಿ ಇದು ಸಹ ಒಂದು ಕೋವಿಡ್‌ ಹಾಟ್ ಸ್ಪಾಟ್‌ ಆಗಿದೆ, 4 ಸಾವಿರಕ್ಕಿಂತ ಹೆಚ್ಚು ಕೋವಿಡ್‌ ಪಾಸಿಟಿವ್‌ ಆಗಿದ್ದು ಹಾಗೂ 32 ರಿಂದ 40 ಜನ ಕೋವಿಡ್ ನಿಂದ ಮರಣ ಹೊಂದಿರುತ್ತಾರೆ. ಈ ಭಾಗದಲ್ಲಿ ಕೋವಿಡ್‌ ಲಸಿಕೆ ಅಗತ್ಯವಿದ್ದು, ಲಸಿಕೆ ಪಡೆದರೆ ಆದಷ್ಟು ಕೊರೊನ ಹೆಮ್ಮಾರಿಯನ್ನ ಎದುರಿಸಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದರು.
ಮಹಾನಗರ ಪಾಲಿಕೆ ಸದಸ್ಯ ವಿಷ್ಣುವರ್ಧನ ಅವರ ನೇತೃತ್ವದಲ್ಲಿ ಟಿ ಹೆಚ್ ಸಿ ಹಾಗೂ ಟಿ ಹೆಚ್ ಓ ಅವರಿಗೆ ಸಮಾನಂತರವಾಗಿ ಅಗತ್ಯವಿರುವಂತಹ ವಸ್ತುಗಳನ್ನ ಒದಗಿಸಿ ಕೊಟ್ಟಿದ್ದಾರೆ. ಇಲ್ಲಿ ಬರುವ ಜನರಿಗೆ ಯಾವುದೇ ಕೊರತೆಯಿಲ್ಲದೆ ವ್ಯವಸ್ಥಿತವಾಗಿ ನಡೆಯುತ್ತಿದೆ, ನಗರದ ವಿಚಾರಕ್ಕೆ ಬಂದಾಗ ಬರುವ ದಿನಗಳಲ್ಲಿ ಹೆಚ್ಚಿನ ಡೋಸ್‌ ಬಂದಾಗ ಸಾರ್ವಜನಿಕ ಆಸ್ಪತ್ರೆಯನ್ನ ಹೊರತುಪಡಿಸಿ, ನಗರದ ಎರಡು ಮೂರು ವಾರ್ಡ್ ಗಳನ್ನ ಕ್ಲಬ್‌ ಮಾಡಿ ಲಸಿಕೆ ನೀಡಲು ಸೂಕ್ತ, ವ್ಯವಸ್ಥಿತ ಸ್ಥಳವನ್ನ ಗುರುತಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆ ಭಾಗದ ಪಾಲಿಕೆ ಸದಸ್ಯರು ನೇತೃತ್ವದಲ್ಲಿ ಆಯುಕ್ತರು, ಮಹಾಪೌರರು, ಉಪ ಮಹಾಪೌರರು ಸೇರಿ ಟಿ ಹೆಚ್ ಓ ಹಾಗೂ ಪಿ ಹೆಚ್ ಸಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರವನ್ನ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.
ಪ್ರತಿನಿತ್ಯ ಲಸಿಕೆ ಪಡೆಯುವ ಸಾರ್ವಜನಿಕರು ಯಾವುದೇ ರೀತಿಯ ಗೊಂದಲ ಮಾಡಿಕೊಳ್ಳದೆ ಆದ್ಯತೆ ಮೇರೆಗೆ 45 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರು ಲಸಿಕೆ ಪಡೆಯಬೇಕು ಹಾಗೂ ಮುಂದಿನ ದಿನಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪಡೆಯಲು ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಸದಸ್ಯ ವಿಷ್ಣುವರ್ಧನ, ತಾಲ್ಲೂಕು ಆರೋಗ್ಯಾಧಿಕಾರಿ ಮೋಹನ್‌ ಹಾಗೂ ಪ್ರೈಮರಿ ಹೆಲ್ತ್ ಕೇರ್‌ ಸೆಂಟರ್ ನ ಡಾ.ಸುಭಾಷ್‌ ಹಾಗೂ ಸಿಬ್ಬಂದಿ, ನೋಡಲ್‌ ಆಫೀಸರ್‌ ಅರುಣ್‌ ಕುಮಾರ್‌, ಸ್ವಯಂ ಸೇವಕ ಕಿಶೋರ್‌, ಬಿಜೆಪಿ ಮುಖಂಡ ಚೇತನ್‌, ಪ್ರವೀಣ್‌, ನಾಗೇಶ್‌, ಆಟೋ ಶ್ಯಾಮ್‌, ಬಿಕೆಎಸ್‌ ಆರಾಧ್ಯ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!