ಮಧುಗಿರಿ: ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮ ಮದ್ಯ ದಾಸ್ತಾನು ಮಾಡಿದ್ದ ಆರೋಪಿಯೊಬ್ಬನನ್ನು ಬಂಧಿಸಿದ್ದು ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಶೇಖರಣೆಗೆ ಸಹಕರಿಸಿದ ರೂಮಿನ ಮಾಲೀಕರನ್ನು ತನಿಖಾ ಸಮಯದಲ್ಲಿ ಬಂಧಿಸಬೇಕಾಗಿದೆ. 216 ಲೀಟರ್ ನಷ್ಟು ಮದ್ಯ, 46 8ಲೀಟರ್ ನಷ್ಟು ಬಿಯರ್ ನ್ನು ದಾಳಿ ವೇಳೆ ವಶಪಡಿಸಿಕೊಂಡಿದ್ದು, ಇದರ ಮೌಲ್ಯ 1.03 ಲಕ್ಷ ರೂ. ಗಳಷ್ಟು ಆಗಿದೆ.
ಮಧುಗಿರಿ ಸಂಪೂರ್ಣ ಆಂಧ್ರದ ಗಡಿ ಭಾಗಕ್ಕೆ ಹೊಂದಿಕೊಂಡಿದ್ದು ಚಂದ್ರಬಾವಿ, ಐಡಿ ಹಳ್ಳಿ, ಕೊಡಿಗೇನಹಳ್ಳಿ ಮತ್ತು ರಂಟವಾಳದ ಸುತ್ತಮುತ್ತ ಅವ್ಯಾಹತವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂದು ಸಾರ್ವಜನಿಕರಿಂದ ಮತ್ತು ಆಗಾಗ್ಗೆ ದಲಿತ ಸಂಘರ್ಷ ಸಮಿತಿಯವರು ಸಭೆಗಳಲ್ಲಿ ದೂರುತ್ತಿದ್ದರು, ಇತ್ತೀಚೆಗೆ ಆಗಮಿಸಿದ ಅಬಕಾರಿ ನಿರೀಕ್ಷಕರು ಈ ದಾಳಿಯ ನೇತೃತ್ವ ವಹಿಸಿದ್ದರು.
ಕೊರೊನ ಲಾಕ್ ಡೌನ್ ನಿಂದಾಗಿ ಮದ್ಯ ಮಾರಾಟವನ್ನು ಬೆಳಿಗ್ಗೆ ಆರರಿಂದ ಹತ್ತರ ವರೆಗೆ ನಿಗದಿಪಡಿಸಲಾಗಿದೆ, ಅವಧಿ ಮುಗಿದ ನಂತರ ಆಂಧ್ರದವರು ಗಡಿ ಭಾಗಕ್ಕೆ ಬಂದು ಮದ್ಯವನ್ನು ದುಪ್ಪಟ್ಟು ದರಕ್ಕೆ ಖರೀದಿಸುತ್ತಿದ್ದ ಹಿನ್ನೆಲೆಯಲ್ಲಿ ಅತಿ ಹೆಚ್ಚು ಹಣ ಗಳಿಸಬಹುದೆಂದು ಕೆಲವು ಯುವಕರು ಸಹ ಈ ದಂಧೆಯಲ್ಲಿ ಪಾಲ್ಗೊಂಡಿರುವುದು ವಿಷಾಧನೀಯವೆಂದು ಗ್ರಾಮಸ್ಥರು ಅಬಕಾರಿ ಅಧಿಕಾರಿಗಳಿಗೆ ದಾಳಿ ವೇಳೆ ದೂರಿದ್ದಾರೆ .
ಮಧುಗಿರಿ ಅಬಕಾರಿ ಇಲಾಖೆಯವರು ಅಕ್ರಮವಾಗಿ ಮದ್ಯ ಶೇಖರಣೆ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಗಳಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ತಾಲ್ಲೂಕಿನ ಮಿಡಿಗೇಶಿ ಹೋಬಳಿ ಚಂದ್ರಬಾವಿ ಗ್ರಾಮದ ತಾಯಮ್ಮ ಅವರಿಗೆ ಸೇರಿದ ಕೊಟ್ಟಿಗೆ ಮನೆಯಲ್ಲಿ ಅಕ್ರಮವಾಗಿ ವಿವಿಧ ಬ್ರಾಂಡ್‌ನ 146.8 ಲೀಟರ್‌ನಷ್ಟು ಮದ್ಯ ಹಾಗೂ 46. 8 ಲೀಟರ್ ಬಿಯರನ್ನು ದಾಸ್ತಾನು ಮಾರಾಟದ ಉದ್ದೇಶಕ್ಕಾಗಿ ಕಂಡು ಬಂದ ಮೇರೆಗೆ ಆರೋಪಿ ಲೋಕೇಶ್ ನನ್ನು ವಶಕ್ಕೆ ಪಡೆದಿದ್ದಾರೆ. ಇದರ ಮೌಲ್ಯ 74248 ರೂ. ಗಳಷ್ಟಿದೆ. ಮಧುಗಿರಿ ಅಬಕಾರಿ ಉಪ ನಿರೀಕ್ಷಕ ಡಿ.ನಾಗಲಿಂಗಾಚಾರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಚಂದ್ರಬಾವಿ ಗ್ರಾಮದ ಆಂಧ್ರಪ್ರದೇಶ ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡಿರುವ ರಾಜ್ಯ ಹೆದ್ದಾರಿ -3ರ ಪಕ್ಕದಲ್ಲಿರುವ ರೂಮ್ ನಲ್ಲಿ 69.12 ಲೀಟರ್ ಮದ್ಯವನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದು ಕಂಡು ಬಂದಿದ್ದು ಇದರ ಮೌಲ್ಯ 29354 ರೂ. ಇರುತ್ತದೆ. ಇದರ ಆರೋಪಿ ಪರಾರಿಯಾಗಿದ್ದು ಮತ್ತು ಸ್ಥಳದ ಮಾಲೀಕನನ್ನು ಸಹ ತನಿಖಾ ಸಮಯದಲ್ಲಿ ಪತ್ತೆ ಹಚ್ಚಿ ಬಂಧಿಸಬೇಕಾಗಿದೆ. ಅಬಕಾರಿ ನಿರೀಕ್ಷಕ ಎಸ್.ರಾಮಮೂರ್ತಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಕ್ರಮ ಮದ್ಯ ದಾಸ್ತಾನು- ಆರೋಪಿ ಅರೆಸ್ಟ್
Get real time updates directly on you device, subscribe now.
Next Post
Comments are closed.