ಶಿರಾ: ಶಿರಾ ತಾಲ್ಲೂಕಿನ ಯುವ ಗ್ರಾಮ ಪಂಚಾಯಿತಿ ಸದಸ್ಯ ತಿಪ್ಪೇಶ್ (25) ಮಂಗಳವಾರ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.
ತಾಲ್ಲೂಕಿನ ಕೊಟ್ಟ ಗ್ರಾಮ ಪಂಚಾಯಿತಿ, ಕೊಟ್ಟ ಗ್ರಾಮದ ತಿಪ್ಪೇಶ್ ಬಿಜೆಪಿಯ ಸಾಮಾಜಿಕ ಜಾಲ ತಾಣದ ಕಾರ್ಯಕರ್ತನಾಗಿದ್ದ, ಯುವ ಉತ್ಸಾಹಿ ಯುವಕನಾಗಿದ್ದ ತಿಪ್ಪೇಶ್ ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಮೊದಲ ಬಾರಿಗೆ ಆಯ್ಕೆಯಾಗಿದ್ದ, ಗೆದ್ದ ಕೆಲವೇ ದಿನಗಳಲ್ಲಿ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತ ಜನಮನ್ನಣೆ ಗಳಿಸಿದ್ದ, ಕಳೆದ ವಾರದಿಂದ ಕೋವಿಡ್ ಸೋಂಕು ತಗುಲಿ ಶಿರಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಆದರೆ ಉಸಿರಾಟದ ಸಮಸ್ಯೆ ಹೆಚ್ಚಾಗಿದ್ದರಿಂದ ತುಮಕೂರಿನ ಆಸ್ಪತ್ರೆಗೆ ರವಾನಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಸಂತಾಪ: ಮೃತ ಗ್ರಾಪಂ ಸದಸ್ಯ ತಿಪ್ಪೇಶ್ ಅವರ ಸಾವಿಗೆ ಸಂಸದ ಎ.ನಾರಾಯಣ ಸ್ವಾಮಿ, ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ರೇಷ್ಮೆ ಉದ್ಯಮಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ, ಮುಖಂಡ ಕೊಟ್ಟ ಶಂಕರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಗೆ ಗ್ರಾಪಂ ಸದಸ್ಯ ಬಲಿ
Get real time updates directly on you device, subscribe now.
Next Post
Comments are closed.