ಶಿರಾ: ಕೊರೊನಾ ಸೋಂಕಿನ ಲಕ್ಷಣ ಉಳ್ಳ ವ್ಯಕ್ತಿಗೆ ಸೋಂಕಿನ ಧೃಡ ವರದಿ ಬರುವವರೆಗೂ ಕಾಯುವುದು ಸೋಂಕು ಉಲ್ಬಣಕ್ಕೆ ಕಾರಣವಾಗುತ್ತದೆ, ಜ್ವರ, ತಲೆನೋವಿನಂತಹ ಲಕ್ಷಣವಿರುವ ರೋಗಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದರೆ ಅಂತಹ ವ್ಯಕ್ತಿಗಳಿಗೆ ಕೋವಿಡ್ ಮೆಡಿಸನ್ ಮುಂಜಾಗ್ರತ ಕ್ರಮವಾಗಿ ನೀಡಿದರೆ ಸೋಂಕು ನಿಯಂತ್ರಣ ಸಾಧ್ಯ, ರೋಗಿಗೆ ಪಾಸಿಟಿವ್ ಬಂದರು ಸಹ ಕಾಯಿಲೆ ಅರ್ಧ ಗುಣಮುಖವಾಗಿರುತ್ತದೆ ಎಂಬ ವೈದಕೀಯ ತಜ್ಞರ ಸಲಹೆಯಂತೆ ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಶಿರಾ ತಾಲೂಕಿನ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದಕ್ಕು 250 ಜನರಿಗೆ ಬೇಕಾಗುವ ಮಾತ್ರೆಯನ್ನು ನನ್ನ ಸ್ವಂತ ಹಣದಲ್ಲಿ ನೀಡಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಹೇಳಿದರು.
ಶಿರಾ ತಾಲೂಕಿನ ತಾವರೆಕೆರೆ, ಪಟ್ಟನಾಯಕನಹಳ್ಳಿ, ಗೋಮಾರದನಹಳ್ಳಿ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಜನರ ಆರೋಗ್ಯ ಮತ್ತು ಚಿಕಿತ್ಸೆಯ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದು ಸಿಎಂಜಿ ಫೌಂಡೇಶನ್ ವತಿಯಿಂದ ನೀಡುತ್ತಿರುವ ಮೆಡಿಕಲ್ ಕಿಟ್ ವೈದ್ಯರಿಗೆ ಹಸ್ತಾಂತರಿಸಿ ಮಾತನಾಡಿದರು.
ಕೊರೊನಾ ಸೋಂಕಿನ ಬಗ್ಗೆ ನಿರ್ಲಕ್ಷ ಅಸಡ್ಡೆ ಬೇಡ, ಸೋಂಕಿನ ಲಕ್ಷಣ ಕಂಡು ಬಂದರೆ ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆಯಿರಿ, ಸೋಂಕು ದೃಡ ಪಟ್ಟರೆ ಕಡ್ಡಾಯವಾಗಿ ಕೊವೀಡ್ ಕೇರ್ ಸೆಂಟರ್ ಗೆ ದಾಖಲಾಗಿ ಗುಣಮುಖರಾಗಿ ಗ್ರಾಮೀಣ ಪ್ರದೇಶದತ್ತ ಸೋಂಕು ವೇಗವಾಗಿ ಹಬ್ಬುತ್ತಿದ್ದು ಜನ ಹೆಚ್ಚು ಜಾಗರೂಕರಾಗುವ ಅವಶ್ಯಕತೆ ಇದೆ, ಪ್ರತಿಯೊಂದಕ್ಕು ಸರ್ಕಾರದ ಕಡೆ ನೋಡದೆ ನಮ್ಮ ಆರೋಗ್ಯದ ಬಗ್ಗೆ ನಾವೇ ಹೆಚ್ಚು ಕಾಳಜಿ ವಹಿಸಿ ಸೋಂಕಿನ ವಿರುದ್ಧ ಹೋರಾಟ ಮಾಡಿ ಸೋಂಕು ಮುಕ್ತ ಗ್ರಾಮಗಳಾಗಿ ಮಾಡುವ ಸಂಕಲ್ಪ ಪ್ರತಿಯೊಬ್ಬರು ಮಾಡೋಣ ಎಂದರು.
ಡಾ.ಜಗದೀಶ್, ಡಾ.ಪುರುಷೋತ್ತಮ್, ತಾಪಂ ಮಾಜಿ ಅಧ್ಯಕ್ಷ ಚಿಕ್ಕಣ್ಣ, ಮುಖಂಡರಾದ ವಾಚ್ ಉಮೇಶ್, ಸುಬ್ಬರಾಜು ಸೇರಿದಂತೆ ಹಲವರು ಹಾಜರಿದ್ದರು.
ವೃದ್ಧ ಕಂಡು ಮರುಗಿದ ಎಂಎಲ್‌ಸಿ: ತಾವರೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ರೋಗಿಗಳಿಂದ ಭರ್ತಿಯಾಗಿತ್ತು, ಮೆಡಿಕಲ್ ಕಿಟ್ ವಿತರಣೆ ಆಸ್ಪತ್ರೆಗೆ ಹೋಗಿದ್ದ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡರಿಗೆ ತಕ್ಷಣ ಕಣ್ಣಿಗೆ ಬಿದ್ದದ್ದು ಆಸ್ಪತ್ರೆ ಹೊರ ಭಾಗದಲ್ಲಿ ವಿಲ್ ಚೇರ್‌ನಲ್ಲಿ ವೃದ್ಧ ರೋಗಿ, ತಕ್ಷಣ ವೈದ್ಯ ಜಗದೀಶ್ ರನ್ನು ಕರೆದು ವಿಚಾರಿಸಿದಾಗ ವೃದ್ಧನಿಗೆ ಹೆಚ್ಚಿನ ಚಿಕಿತ್ಸೆಗೆ ಶಿರಾ ಆಸ್ಪತ್ರೆಗೆ ಕಳುಹಿಸಬೇಕು, ಆಕ್ಸಿ ಮೀಟರ್‌ನಲ್ಲಿ ವೃದ್ಧನ ಉಸಿರಾಟ 81 ತೋರಿಸುತ್ತಿದೆ, ಮಕ್ಕಳು ಇಲ್ಲಿ ತಂದು ಬಿಟ್ಟು ಹೋಗಿದ್ದಾರೆ ಎಂದು ಹೇಳಿದರು.
ಇದಕ್ಕೆ ಬಾವುಕರಾದ ಚಿದಾನಂದ ಎಂಗೌಡ ತಕ್ಷಣ 1 ಸಾವಿರ ರೂಪಾಯಿ ಹಣ ನೀಡಿ ಜೊತೆಗೆ ಆ್ಯಂಬುಲೆನ್ಸ್ ಗೆ ಕರೆ ಮಾಡಿ ವೃದ್ಧ ನನ್ನು ಶಿರಾ ಆಸ್ಪತ್ರೆಗೆ ಕಳುಹಿಸಿದ್ದು ಜನರ ಮೆಚ್ಚುಗೆ ಪಡೆಯಿತು.
Comments are closed.