ಲೋಕಾಯುಕ್ತ ಡಿವೈಎಸ್ಪಿ ಕಾರ್ಯಕ್ಕೆ ಮೆಚ್ಚುಗೆ

148

Get real time updates directly on you device, subscribe now.

ಚಿಕ್ಕನಾಯಕನಹಳ್ಳಿ: ಕೊರೊನಾ ಪಾಸಿಟಿವ್ ರೋಗಿಗಳಿಗೆ ಬೆಡ್ ವ್ಯವಸ್ಥೆ, ಆಮ್ಲಜನಕ ವ್ಯವಸ್ಥೆ, ನೀರಿನ ವ್ಯವಸ್ಥೆ ಕಲ್ಪಿಸಲು ತಾಕೀತು, ವಿದ್ಯುತ್ ಕಂಬ ಅಳವಡಿಸಲು ಕ್ರಮ, ಆಹಾರ ಕಿಟ್ ವಿತರಣೆ ಸೇರಿದಂತೆ ಹತ್ತು ಹಲವು ಸಮಾಜಮುಖಿ ಸೇವೆಗೆ ತಾಲೂಕಿನ ಜನ ಫಿದಾ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಲೋಕಾಯುಕ್ತ ಡಿವೈಎಸ್ಪಿ ರವೀಶ್ ಅವರಿಗೆ ಹೊಗಳಿಕೆಯ ಮಹಾಪೂರವೇ ಹರಿದುಬರುತ್ತಿದೆ.
ತುಮಕೂರು ಲೋಕಾಯುಕ್ತ ಡಿವೈಎಸ್ಪಿ ಆಗಿ ಸೇವೆ ಸಲ್ಲಿಸುತ್ತಿರುವ ರವೀಶ್ ಮೂಲತಹ ಚಿಕ್ಕನಾಯಕನಹಳ್ಳಿ ಪಟ್ಟಣದ ನಿವಾಸಿ, ತಾಲೂಕಿನ ಬಹುತೇಕರಿಗೆ ಚಿರಪರಿಚಿತರಾಗಿರುವ ಇವರಿಗೆ ದಿನನಿತ್ಯ ಹಲವಾರು ಕರೆ ಬರುತ್ತಿವೆ, ಸರ್ ಬೆಡ್ ವ್ಯವಸ್ಥೆ ಮಾಡಿಕೊಡಿ, ಆಮ್ಲಜನಕ ವ್ಯವಸ್ಥೆ ಮಾಡಿಕೊಡಿ, ನಮ್ಮೂರಲ್ಲಿ ನೀರು ಬಿಟ್ಟಲ್ಲ ,ಗಾಳಿ ಮಳೆಗೆ ವಿದ್ಯುತ್ ಕಂಬ ಬಿದ್ದಿವೆ, ಮನೆಗಳಿಗೆ ನಾಲ್ಕು ದಿನವಾದರು ವಿದ್ಯುತ್ ಇಲ್ಲ ಎಂಬ ಹತ್ತಾರು ಸಮಸ್ಯೆ ಹೇಳಿಕೊಂಡು ನೂರಾರು ಕರೆಗಳು ಡಿವೈಎಸ್ಪಿ ರವೀಶ್ ಗೆ ಬರುತ್ತಿವೆ, ಈ ಎಲ್ಲಾ ಕರೆಗಳನ್ನು ಸ್ವೀಕರಿಸುವ ರವೀಶ್ ಅವರು ಒಂದೊಂದೆ ಸಮಸ್ಯೆ ಬಗೆಹರಿಸಿ ಸಾರ್ವಜನಿಕರ ಮನಸ್ಸಿಗೆ ಹತ್ತಿರವಾಗುತ್ತಿದ್ದಾರೆ. ಸಮಸ್ಯೆ ಕಂಡರೆ ಮೊದಲು ರವೀಶ್ ಗೆ ಜನರು ಕರೆ ಮಾಡುತ್ತಿದ್ದು ವಾಟ್ಸಾಪ್ ಹಾಗೂ ಫೇಸ್ ಬುಕ್ ನಲ್ಲಿ ಇವರದ್ದೇ ಗುಣಗಾನವಾಗಿದೆ.
ತಾಲೂಕಿನಲ್ಲಿ ಆಲೆಮಾರಿ, ಸಿಳ್ಳೆಕ್ಯಾತ, ಸುಡುಗಾಡು ಸಿದ್ಧರು ಸೇರಿದಂತೆ ಇತರ ಹಿಂದುಳಿದ ಜನಾಂಗದವರ ಕಷ್ಟ ನೋಡಿ ಡಿವೈಎಸ್ಪಿ ರವೀಶ್ ಅವರು ಇನ್ಪೋಸಿಸ್ ಫೌಂಡೇಷನ್ ನಿಂದ ದಿನಸಿ ಕಿಟ್ ಗಳನ್ನು ವ್ಯವಸ್ಥೆ ಮಾಡಿಸಿದ್ದು, ಲಾಕ್ ಡೌನ್ ನಿಂದ ಊಟಕ್ಕೆ ಪರದಾಡುತ್ತಿದ್ದ ಇವರಿಗೆ ಹೊಟ್ಟೆ ತುಂಬ ಊಟ ಸಿಕ್ಕಿದಂತಾಗಿದೆ.
ಒಟ್ಟಿನಲ್ಲಿ ಸಾರ್ವಜನಿಕರ ಕಷ್ಟಗಳಿಗೆ ಡಿವೈಎಸ್ಪಿ ರವೀಶ್ ಸ್ಪಂದಿಸುತ್ತಿದ್ದು ಎಷ್ಟೋ ಜನಕ್ಕೆ ಇವರಿಂದ ಕಷ್ಟದ ಕಾಲದಲ್ಲಿ ನೆರವು ಸಿಕ್ಕುತ್ತಿದೆ, ಮುಂದಿನ ದಿನಗಳಲ್ಲಿಯೂ ನೊಂದವರಿಗೆ ಇವರ ನೆರವು ದೊರೆಯಲಿ ಎಂಬುವುದೆ ಸಾರ್ವಜನಿಕರ ಆಶಯವಾಗಿದೆ.

Get real time updates directly on you device, subscribe now.

Comments are closed.

error: Content is protected !!