ತುಮಕೂರು: ಲಾಕ್ ಡೌನ್ ಎಫೆಕ್ಟ್ ಕೆಲಸ ಮಾಡ್ತಿದ್ಯಾ ಎಂಬ ಸಂದೇಹ ಸಾರ್ವಜನಿಕರಲ್ಲಿ ಮೂಡಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಬುಧವಾರದಂದು ಕೋವಿಡ್-19 ಮತ್ತೆ 1,798 ಮಂದಿಗೆ ಸೋಂಕು ತಗುಲಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 435 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 82,806 ಕ್ಕೆ ಏರಿಕೆ ಕಂಡಿದೆ. 17,948 ಸಕ್ರಿಯ ಪ್ರಕರಣಗಳ ಪೈಕಿ 1621 ಮಂದಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 435, ಚಿನಾಹಳ್ಳಿ 134, ಗುಬ್ಬಿ 125, ಕೊರಟಗೆರೆ 186, ಕುಣಿಗಲ್ 127, ಮಧುಗಿರಿ 199, ಪಾವಗಡ 143, ಶಿರಾ 117, ತಿಪಟೂರು 187, ತುರುವೇಕೆರೆಯಲ್ಲಿ 145 ಮಂದಿಗೆ ಕೊರೊನಾ ಸೋಂಕು ತಗುಲಿದೆ.
1049 ಪುರುಷರು ಹಾಗೂ 752 ಮಹಿಳೆಯರು ಸೋಂಕಿಗೆ ಒಳಗಾಗಿದ್ದಾರೆ. 60 ವರ್ಷ ಮೇಲ್ಪಟ್ಟವರು 289 ಮಂದಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರು ಹೆಚ್ಚಾಗಲು ಆರ್ ಟಿ ಪಿ ಸಿ ಆರ್ ರಿಸೆಲ್ಟ್ ತಡವಾಗಿ ಬರುತ್ತಿರುವುದಕ್ಕೆ ಸಾರ್ವಜನಿಕರಿಂದ ಆಕ್ಷೇಪ ಕೂಡ ವ್ಯಕ್ತವಾಗಿದೆ.
ಕೋವಿಡ್ ಗೆ 19 ಬಲಿ
ತುಮಕೂರು: ನಗರದ ಹನುಮಂತಪುರದ ಮಹಿಳೆ (45), ಉಪ್ಪಾರಹಳ್ಳಿ ಬಡಾವಣೆಯ ವ್ಯಕ್ತಿ (44), ಅನ್ಯಕಾರಣದಿಂದ ಮೇಳೆಕೋಟೆಯ ವ್ಯಕ್ತಿ (50), ಹೊನ್ನುಡಿಕೆ ಗ್ರಾಮದ ವ್ಯಕ್ತಿ(62) ಮೃತರಾಗಿದ್ದಾರೆ.
ಪಾವಗಡ: ಟಿ.ಎನ್.ಪೇಟೆ ಬಡಾವಣೆ ವ್ಯಕ್ತಿ (60) ಕಣೆವೇಲಹಳ್ಳಿ ಗ್ರಾಮದ ವ್ಯಕ್ತಿ (73) ಬೆಳ್ಳಿಬಟ್ಲು ಗ್ರಾಮದ ವ್ಯಕ್ತಿ (31), ಅನ್ಯಕಾರಣದಿಂದ ರಂಗಸಂದ್ರ ಗ್ರಾಮದ ವ್ಯಕ್ತಿ(54)
ಮಧುಗಿರಿ: ಬಡಿಗೊಂಡನಹಳ್ಳಿ ಗ್ರಾಮದ ವ್ಯಕ್ತಿ (54), ಛತ್ರಪಾಳ್ಯ ಗ್ರಾಮದ ವ್ಯಕ್ತಿ (60), ಬ್ಯಾಲ್ಯ ಗ್ರಾಮದ ವ್ಯಕ್ತಿ (31), ಅನ್ಯಕಾರಣದಿಂದ ಕಂಬದಹಳ್ಳಿ ಗ್ರಾಮದ ವ್ಯಕ್ತಿ(60)
ಕೊರಟಗೆರೆ: ಹೊಸಹಳ್ಳಿ ಗ್ರಾಮದ ವ್ಯಕ್ತಿ (62), ಎಚ್.ಎಚ್. ಪಾಳ್ಯ ಗ್ರಾಮದ ವ್ಯಕ್ತಿ (65), ಕಾರ್ಪೇನಹಳ್ಳಿ ಗ್ರಾಮದ ವ್ಯಕ್ತಿ (85), ಓಬಳಾಪುರ ಗ್ರಾಮದ ಮಹಿಳೆ(23), ಕತ್ತಿನಾಗೇನಹಳ್ಳಿ ಗ್ರಾಮದ ವ್ಯಕ್ತಿ(80).
ಗುಬ್ಬಿ: ತಿಮ್ಮಪ್ಪನಹಟ್ಟಿ ಗ್ರಾಮದ ಮಹಿಳೆ (42),ಅನ್ಯಕಾರಣದಿಂದ ಚೇಳೂರು ಗ್ರಾಮದ ಮಹಿಳೆ (50)
ಒಟ್ಟು 19 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
Comments are closed.