ಕೊರೊನಾ ಸೋಂಕಿತರಿಗೆ ಧೈರ್ಯ ತುಂಬಿದ ಡೀಸಿ

132

Get real time updates directly on you device, subscribe now.

ಕುಣಿಗಲ್‌: ಜಿಲ್ಲಾಧಿಕಾರಿಗಳ ನೇತೃತ್ವದ ಅಧಿಕಾರಿಗಳ ತಂಡ ಬುಧವಾರ ತಾಲೂಕಿನ ಕೊತ್ತಗೆರೆ ಹೋಬಳಿಯ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಕ್ರೋ ಕಂಟೈನ್ ಮೆಂಟ್‌ ಝೋನ್ ಗಳಾದ ಸೀಂಗೋನಹಳ್ಳಿ, ಕಾಮನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಸೋಂಕಿತರಿಗೆ ಧೈರ್ಯ ತುಂಬಿದರು.
ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌, ಎಸ್ಪಿ ವಂಶಿಕೃಷ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ, ಉಪ ವಿಭಾಗಾಧಿಕಾರಿ ಅಜಯ್‌, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜೋಸೆಫ್, ತಾಲೂಕು ಆರೋಗ್ಯಾಧಿಕಾರಿ ಜಗದೀಶ್‌, ಭಕ್ತರಹಳ್ಳಿ ತಾಂಡ, ಭಕ್ತರಹಳ್ಳಿ ಗ್ರಾಮ ಪಂಚಾಯಿತಿಯ ಸಿಂಗೋನಹಳ್ಳಿ, ಕಾಮನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮನೆಯಲ್ಲೆ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರನ್ನು ಭೇಟಿ ಮಾಡಿ ಸೋಂಕಿತರಿಗೆ ಧೈರ್ಯ ತುಂಬಿದರು.
ಸೋಂಕಿತರೊಂದಿಗೆ ಚರ್ಚೆ ನಡೆಸಿ ಅವರಿಗೆ ಸರ್ಕಾರ ಒದಗಿಸಿರುವ ಸವಲತ್ತುಗಳ ಬಗ್ಗೆ ವಿವರಿಸಿ, ಸ್ಥಳೀಯವಾಗಿ ಮೆಡಿಕಲ್‌ ಕಿಟ್‌ ವಿತರಣೆ ಮಾಡಲಾಗಿದೆಯೆ, ಮಾತ್ರೆ ತೆಗೆದುಕೊಳ್ಳುವ ಬಗ್ಗೆ ಹಾಗೂ ವೈದ್ಯರು, ಆಶಾ ಕಾರ್ಯಕರ್ತೆಯರು ಭೇಟಿ ನೀಡುತ್ತಿರುವ ಬಗ್ಗೆ ಮಾಹಿತಿ ಪಡೆದರು.
ಪಿಡಿಒ ಸುದರ್ಶನ್‌ ಮಾತನಾಡಿ, ಕಾಮನಹಳ್ಳಿಯಲ್ಲಿ 14, ಸೀಂಗೊನಹಳ್ಳಿಯಲ್ಲಿ 13 ಸೋಂಕಿತರಿದ್ದು ಆಶಾ ಕಾರ್ಯಕರ್ತರ ಮೂಲಕ ಆಮ್ಲಜನಕ ಮಟ್ಟ, ಥರ್ಮಲ್‌ ಸ್ಕ್ಯಾನರ್ ಮೂಲಕ ತಾಪಮಾನ ದಾಖಲು ಮಾಡಿ ದಿನ ಎರಡು ಹೊತ್ತು ನಿಗಾ ವಹಿಸುತ್ತಿದ್ದು, ಅವರಿಗೆ ಬೇಕಾದಲ್ಲಿ ಆಹಾರ ವ್ಯವಸ್ಥೆಗೊಳಿಸಲು ಸಿದ್ಧತೆ ಮಾಡಲಾಗುತ್ತಿದೆ. ಸುರಕ್ಷತಾ ಕ್ರಮವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಸೋಂಕು ನಿವಾರಕ ಸಿಂಪಡಣೆ ಮಾಡಲಾಗಿದೆ. ಸೋಂಕಿತರ ಮನೆ ಸುತ್ತಲು ನೈರ್ಮಲ್ಯ ನಿರ್ವಹಣೆಗೂ ಆದ್ಯತೆ ನೀಡಲಾಗುತ್ತಿದೆ ಎಂಬ ವಿವರ ನೀಡಿ, ಸರ್ಕಾರದ ಸೂಚನೆ ಮೇರೆಗೆ ಸೋಂಕಿತರ ಸಂಪರ್ಕಕ್ಕೆ ಬರುವ ಪ್ರಾಥಮಿಕ, ದ್ವಿತೀಯ ಹಂತದವರ ಬಗ್ಗೆ ನಿಗಾವಹಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.
ಅಧಿಕಾರಿಗಳು ಸಾಮಾನ್ಯ ಸ್ಥಿತಿಗಿಂತ ಹೆಚ್ಚು ಅಸ್ವಸ್ಥತೆಯಾದಲ್ಲಿ ಅವರನ್ನು ಕೂಡಲೆ ಕೋವಿಡ್‌ ಕೇರ್ ಸೆಂಟರ್ ಗಳಿಗೆ ಸ್ಥಳಾಂತರಿಸುವಂತೆ ಸೂಚನೆ ನೀಡಿ, ಸ್ಥಳೀಯವಾಗಿ ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಕೈಗೊಂಡಿರುವ ಸುರಕ್ಷತೆ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಮತ್ತಷ್ಟು ಅಗತ್ಯ ಇರುವ ಕ್ರಮಗಳ ಕಟ್ಟುನಿಟ್ಟು ಜಾರಿಗೆ ಸೂಚಿಸಿದರು.
ಗ್ರಾಪಂ ಅಧ್ಯಕ್ಷೆ ಅಲೀಮಾಬಿ, ಉಪಾಧ್ಯಕ್ಷೆ ಲೀಲಾವತಿ, ಆರೋಗ್ಯ ಕೇಂದ್ರದ ವೈದ್ಯೆ ಪುಷ್ಪ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!