ಪಾವಗಡ-6 ಮಧುಗಿರಿ-6, ತುಮಕೂರು-4 ಸೇರಿ 21 ಸಾವು

ಮತ್ತೆ 1,438 ಮಂದಿಗೆ ಕೋವಿಡ್

3,729

Get real time updates directly on you device, subscribe now.

ತುಮಕೂರು: ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಗುರುವಾರದಂದು ಕೋವಿಡ್-19 ಮತ್ತೆ 1,438 ಮಂದಿಗೆ ಸೋಂಕು ತಗುಲಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 379 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 84,244 ಕ್ಕೆ ಏರಿಕೆ ಕಂಡಿದೆ. 17,694 ಸಕ್ರಿಯ ಪ್ರಕರಣಗಳ ಪೈಕಿ 1671 ಮಂದಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 379, ಚಿನಾಹಳ್ಳಿ 141, ಗುಬ್ಬಿ 54, ಕೊರಟಗೆರೆ 99, ಕುಣಿಗಲ್ 67, ಮಧುಗಿರಿ 137, ಪಾವಗಡ 128, ಶಿರಾ 196, ತಿಪಟೂರು 138, ತುರುವೇಕೆರೆಯಲ್ಲಿ 199 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಕೋವಿಡ್ ಗೆ 21 ಬಲಿ
ತುಮಕೂರು: ಸದಾಶಿವ ನಗರ ವ್ಯಕ್ತಿ (54), ಅನ್ಯಕಾರಣದಿಂದ ನಾಗಣ್ಣನಪಾಳ್ಯ ಬಡಾವಣೆ ವ್ಯಕ್ತಿ (65), ಪಿ.ಎಚ್ ಕಾಲೋನಿ ಮಹಿಳೆ (39), ಸಮುದ್ರನಹಳ್ಳಿ ಗ್ರಾಮದ ಮಹಿಳೆ (68) ಮೃತರಾಗಿದ್ದಾರೆ.
ಕೊರಟಗೆರೆ: ದಾಸರಹಳ್ಳಿ ಗ್ರಾಮದ ಮಹಿಳೆ (25), ಬಸವಹಳ್ಳಿ ಗ್ರಾಮದ ವ್ಯಕ್ತಿ (60) ಜೀವ ಬಿಟ್ಟಿದ್ದಾರೆ.
ಪಾವಗಡ: ವಿನಾಯಕ ನಗರ ವ್ಯಕ್ತಿ (32), ಬಲ್ಲೇನಹಳ್ಳಿ ಗ್ರಾಮದ ವ್ಯಕ್ತಿ (80), ಸಾಸಲುಕುಂಟೆ ಗ್ರಾಮದ ಮಹಿಳೆ (70), ನಲಿಗನಹಳ್ಳಿ ಗ್ರಾಮದ ಮಹಿಳೆ (56) ಅನ್ಯಕಾರಣದಿಂದ ನಾಗೇನಹಳ್ಳಿ ಗ್ರಾಮದ ವ್ಯಕ್ತಿ (75), ಹುಸೇನಪುರ ಗ್ರಾಮದ ವ್ಯಕ್ತಿ (57) ಬಲಿ ಆಗಿದ್ದಾರೆ.
ಮಧುಗಿರಿ: ಲಾಲಪೇಟೆ ನಗರದ ವ್ಯಕ್ತಿ (42), ಕಾಳೇನಹಳ್ಳಿ ಗ್ರಾಮದ ವ್ಯಕ್ತಿ (23,) ಪುರವರ ಗ್ರಾಮದ ವ್ಯಕ್ತಿ (36), ಜಕ್ಕೇನಹಳ್ಳಿ ಗ್ರಾಮದ ವ್ಯಕ್ತಿ (58), ಕಿತ್ತಗಳಿ ಗ್ರಾಮದ ವ್ಯಕ್ತಿ (65), ಬಡವನಹಳ್ಳಿ ಗ್ರಾಮದ ಮಹಿಳೆ (55) ಜೀವ ತೆತ್ತಿದ್ದಾರೆ.
ತುರುವೇಕೆರೆ: ಗ್ರಾಮದ ವ್ಯಕ್ತಿ (30) ಹಾಗೂ
ಕುಣಿಗಲ್: ನಗರದ ಮಹಿಳೆ (50) ಸಾವಿಗೀಡಾಗಿದ್ದಾರೆ.
ತಿಪಟೂರು: ಅನ್ಯಕಾರಣದಿಂದ ಗ್ರಾಮಾಂತರದ ವ್ಯಕ್ತಿ (65) ಒಟ್ಟು 21 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!