ಶಾಸಕರ ತಂಡದಿಂದ ಬುಗುಡನಹಳ್ಳಿ ಕೆರೆ ವೀಕ್ಷಣೆ

453

Get real time updates directly on you device, subscribe now.

ತುಮಕೂರು: ನಗರಕ್ಕೆ ಕುಡಿಯುವ ನೀರಿನ ಮೂಲವಾಗಿರುವ ಬುಗುಡನಹಳ್ಳಿ ಕೆರೆಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಪಾಲಿಕೆ ಮೇಯರ್‌ ಬಿ.ಜಿ ಕೃಷ್ಣಪ್ಪ, ಉಪ ಮೇಯರ್‌ ನಾಜೀಮಾಬಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ನಯಾಜ್‌ ಅಹಮದ್‌, ಧರಣೇಂದ್ರ ಕುಮಾರ್‌, ಪಾಲಿಕೆ ಸದಸ್ಯರಾದ ಮಂಜುನಾಥ್‌, ಮಂಜುಳ ಆದರ್ಶ್‌, ರೂಪಶ್ರೀ ಶೆಟ್ಟಳ್ಳಯ್ಯ ಭೇಟಿ ನೀಡಿ ನೀರಿನ ಮಟ್ಟ ಪರಿಶೀಲನೆ ನಡೆಸಿದರು.
ಈ ವೇಳೆ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಮಾತನಾಡಿ, ಬುಗುಡನಹಳ್ಳಿ ಕೆರೆಯ ಇಂದಿನ ನೀರಿನ ಮಟ್ಟ ಸರಿ ಸುಮಾರು 30 ಎಂಎಫ್‌ಟಿ ಇದ್ದು, ಪ್ರತಿ ನಿತ್ಯ ತುಮಕೂರು ನಗರಕ್ಕೆ 2 ಎಂಟಿಎಫ್‌ಟಿ ನೀರಿನ ಅಗತ್ಯವಿದೆ. ಮುಂದಿನ 10 ರಿಂದ 15 ದಿನಗಳ ವರೆಗೆ ಮಾತ್ರ ಬುಗುಡನಹಳ್ಳಿ ಕೆರೆಯಲ್ಲಿ ಸಂಗ್ರಹವಾಗಿರುವ ನೀರನ್ನು ನಾವು ಉಪಯೋಗಿಸಬಹುದು. ತದನಂತರ ಬೋರ್ ವೆಲ್‌ ಆಶ್ರಯಿಸಿ ವಾರ್ಡ್‌ಗಳಿಗೆ ವಾಟರ್‌ ಟ್ಯಾಂಕರ್‌ ಮೂಲಕ ನೀರು ಪೂರೈಸಬೇಕಾಗುವ ಅನಿವಾರ್ಯತೆ ಉಂಟಾಗುತ್ತದೆ ಎಂದರು.
ಬುಗುಡನಹಳ್ಳಿ ಕೆರೆ ನೀರಿನ ಸ್ಥಿತಿಗತಿಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಶೀಘ್ರವಾಗಿ ಗೊರೂರು ಜಲಾಶಯದಿಂದ ಬುಗುಡನಹಳ್ಳಿ ಕೆರೆಗೆ ನೀರು ಹರಿಸುವಂತೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.
ಪಾಲಿಕೆ ಆಯುಕ್ತೆ ರೇಣುಕಾ, ಅಧಿಕಾರಿಗಳು, ಮುಖಂಡರಾದ ಮಹೇಶ್‌ ಬಾಬು, ಮನೋಹರ್ ಗೌಡ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!