ಕೊರೊನಾ ಸೋಂಕಿತರಿಗೆ ಧೈರ್ಯ ತುಂಬಿದ ಜಿಲ್ಲಾಧಿಕಾರಿ

359

Get real time updates directly on you device, subscribe now.

ತುಮಕೂರು: ಕೊರಟಗೆರೆ ತಾಲೂಕಿನ ರೆಡ್‌ ಝೋನ್‌ ಗ್ರಾಮ ತೀತಾ, ಹಾಟ್‌ ಸ್ಪಾಟ್‌ ಗ್ರಾಮಗಳಾದ ಜಟ್ಟಿ ಅಗ್ರಹಾರ ಮತ್ತು ಎಲೆರಾಂಪುರ ಗ್ರಾಮಗಳಿಗೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅವರು ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದರು. ಸೋಂಕಿತರಿಗೆ ಕೋವಿಡ್‌ ಔಷಧ ಕಿಟ್‌ ಸಮರ್ಪಕವಾಗಿ ತಲುಪುತ್ತಿದೆಯಾ ಎಂಬುದನ್ನು ಪರಿಶೀಲಿಸಿದರು.
ಜಿಲ್ಲಾಧಿಕಾರಿಗಳು ಸೋಂಕಿತರ ಮನೆ ಮನೆಗೆ ಭೇಟಿ ನೀಡಿ ಕೋವಿಡ್‌ ಕಿಟ್‌ ನೀಡಿರುವ ಬಗ್ಗೆ ಪರಿಶೀಲನೆ ನಡೆಸಿ, ಆರೋಗ್ಯ ವಿಚಾರಿಸಿ, ಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರಿಗೆ ವಿಶ್ವಾಸ ತುಂಬಿದರು.
ತೀತಾ ಗ್ರಾಮದಲ್ಲಿ 44 ಕೋವಿಡ್‌ ಪಾಸಿಟಿವ್‌ ಪ್ರಕರಣಗಳಿದ್ದು ರೆಡ್‌ ಝೋನ್‌ ಎಂದು ಘೋಷಿಸಲಾಗಿದೆ. ಅದೇ ರೀತಿ 22 ಪ್ರಕರಣಗಳಿದ್ದ ಜಟ್ಟಿ ಅಗ್ರಹಾರ ಗ್ರಾಮವನ್ನು ಹಾಟ್ ಸ್ಪಾಟ್‌ ಎಂದು ಗುರುತಿಸಲಾಗಿತ್ತು. ತಾಲ್ಲೂಕು ಆಡಳಿತ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದ ಪ್ರಸ್ತುತ 8 ಸಕ್ರಿಯ ಪ್ರಕರಣಗಳಿಗೆ ಇಳಿದಿದೆ.
ಜಟ್ಟಿ ಅಗ್ರಹಾರ ಸೇರಿದಂತೆ ಉಳಿದ ಹಾಟ್‌ ಸ್ಪಾಟ್‌ ಪ್ರದೇಶಗಳಲ್ಲಿ ಸೋಂಕಿನ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಡೀಸಿ ಸೂಚಿಸಿದರು.
ಈ ವೇಳೆ ಎಸ್‌ಪಿ ಡಾ.ಕೆ.ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಕೊರಟಗೆರೆ ತಾಲೂಕು ತಹಸೀಲ್ದಾರ್‌ ಡಿ.ಎಂ.ಗೋವಿಂದರಾಜು ಇದ್ದರು.

Get real time updates directly on you device, subscribe now.

Comments are closed.

error: Content is protected !!