ತುಮಕೂರು: ಶುಕ್ರವಾರರದಂದು ಕೋವಿಡ್ ಸೋಂಕು 1,709 ಮಂದಿಗೆ ಕಾಣಿಸಿಕೊಂಡಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 425 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 85,953 ಕ್ಕೆ ಏರಿಕೆ ಕಂಡಿದೆ. 17,190 ಸಕ್ರಿಯ ಪ್ರಕರಣಗಳ ಪೈಕಿ 2197 ಮಂದಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 425, ಚಿನಾಹಳ್ಳಿ 148, ಗುಬ್ಬಿ 169, ಕೊರಟಗೆರೆ 140, ಕುಣಿಗಲ್ 96, ಮಧುಗಿರಿ 83, ಪಾವಗಡ 116, ಶಿರಾ 276, ತಿಪಟೂರು 139, ತುರುವೇಕೆರೆಯಲ್ಲಿ 117 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಕೋವಿಡ್ ಗೆ 16 ಬಲಿ:
ತುರುವೇಕೆರೆ: ಮಲ್ಲದೇವನಹಳ್ಳಿ ಗ್ರಾಮದ ವ್ಯಕ್ತಿ (40), ಮಣಿಚೆಂಡೂರು ಗ್ರಾಮದ ವ್ಯಕ್ತಿ (58), ಕೊಡಿಗೆಹಳ್ಳಿ ಗ್ರಾಮದ ವ್ಯಕ್ತಿ (52), ಆಯರಹಳ್ಳಿ ಗ್ರಾಮದ ವ್ಯಕ್ತಿ (30), ಕಡೇಹಳ್ಳಿ ಗ್ರಾಮದ ಮಹಿಳೆ (60).
ಮಧುಗಿರಿ: ಮಿಡಿಗೇಶಿ ಗ್ರಾಮದ ವ್ಯಕ್ತಿ (50), ಕತ್ತಿರಾಜನಹಳ್ಳಿ ಗ್ರಾಮದ ವ್ಯಕ್ತಿ (55), ಸಜ್ಜೆಹೊಸಹಳ್ಳಿ ಗ್ರಾಮದ ವ್ಯಕ್ತಿ (42).
ತುಮಕೂರು: ಸದಾಶಿವನಗರದ ವ್ಯಕ್ತಿ (55), ಹೆಗ್ಗೆರೆ ಗ್ರಾಮದ ವ್ಯಕ್ತಿ (55), ಅನ್ಯಕಾರಣದಿಂದ ಹನುಮಂತಪುರದ ಮಹಿಳೆ(63), ಬುಡೇನ ಸಾಬರ ಪಾಳ್ಯದ ಮಹಿಳೆ(45), ಗಂಗಸಂದ್ರ ಗ್ರಾಮದ ವ್ಯಕ್ತಿ (34).
ಕೊರಟಗೆರೆ: ಗೋವಗಾನಹಳ್ಳಿ ಗ್ರಾಮದ ವ್ಯಕ್ತಿ (68).
ಪಾವಗಡ: ತಾಲೂಕಿನ ಗುಟ್ಟಹಳ್ಳಿ ಗ್ರಾಮದ ವ್ಯಕ್ತಿ (42).
ಚಿಕ್ಕನಾಯಕನಹಳ್ಳಿ: ಹುಳಿಯಾರು ಗ್ರಾಮದ ವ್ಯಕ್ತಿ (65)ಒಟ್ಟು 16 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
Get real time updates directly on you device, subscribe now.
Comments are closed.