ರೈತ ಸಂಪರ್ಕ ಕೇಂದ್ರದ ಕಾರ್ಯವೈಖರಿಗೆ ಆಕ್ರೋಶ

137

Get real time updates directly on you device, subscribe now.

ಕುಣಿಗಲ್‌: ಪಟ್ಟಣದ ಕೃಷಿ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿರುವ ಕಸಬಾ ಹೋಬಳಿ ರೈತ ಸಂಪರ್ಕ ಕೇಂದ್ರದ ಅಸಮರ್ಪಕ ಕಾರ್ಯ ನಿರ್ವಹಣೆ ಬಗ್ಗೆ ರೈತರು ಅಸಮಾಧಾನ ವ್ಯಕ್ತಪಡಿಸಿ, ಇಲಾಖೆಯ ಮೇಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಕೊವಿಡ್‌ ಎರಡನೆ ಅಲೆಯ ಲಾಕ್ ಡೌನ್‌ ಘೋಷಣೆಯಾಗಿರುವುದರಿಂದ ರೈತ ಸಂಪರ್ಕ ಕೇಂದ್ರವನ್ನು ಬೆಳಗ್ಗೆ ಆರು ಗಂಟೆಗೆ ತೆಗೆಯಬೇಕು. ಆದರೆ ಎಂಟು ಗಂಟೆಯಾದರೂ ತೆಗೆಯುವುದಿಲ್ಲ, ರೈತರಿಗೆ ಸರಿಯಾದ ಮಾಹಿತಿ ನೀಡುವುದಿಲ್ಲ, ಪ್ರಶ್ನಿಸಿದರೆ ಸರಿಯಾಗಿ ಯಾವುದೇ ಉತ್ತರ ನೀಡುವುದಿಲ್ಲ ಎಂದು ರೈತರಾದ ದಿನೇಶ್‌, ವಿಶ್ವ ಇತರರು ಆರೋಪಿಸಿದರು.
ಶುಕ್ರವಾರ ಬೆಳಗಿನಿಂದ ಕಾಯುತ್ತಿದ್ದ ರೈತರು ತಡವಾಗಿ ಬಂದ ಸಂಪರ್ಕ ಕೇಂದ್ರದ ಸಿಬ್ಬಂದಿ ಲಕ್ಷ್ಮೀ ಎಂಬುವರನ್ನು ಪ್ರಶ್ನಿಸಿದಾಗ, ತಾವು ಹೊರಗುತ್ತಿಗೆ ಮೇಲೆ ಕೆಲಸಕ್ಕಿದ್ದು ಗೂಳೂರಿನಿಂದ ಬರಬೇಕು, ತಡವಾಗುತ್ತದೆ ಏನು ಮಾಡಲಾಗುವುದಿಲ್ಲ, ಏನಾದರೂ ಬೇಕಿದ್ದರೆ ಕಚೇರಿಯಲ್ಲಿ ಕೇಳಿಹೋಗಿ ಎನ್ನುತ್ತಾರೆ. ಬಿತ್ತನೆ ಕಾಳುಗಳ ದರಪಟ್ಟಿ ಪ್ರದರ್ಶನ ಮಾಡಿದ್ದು ಟಾರ್ ಪಾಲ್ ನ ಬೆಲೆಗೆ ಸಂಬಂಧಿಸಿದಂತೆ ದರಪಟ್ಟಿ ಹಾಕಿಲ್ಲ, 1300 ರೂ. ವಸೂಲು ಮಾಡುತ್ತಾರೆ. ಸರ್ಕಾರದ ನಿಗದಿತ ದರ 975 ರೂ. ಸಾಮಾನ್ಯ ವರ್ಗಕ್ಕೆ, ಆದರೆ ಕೆಲ ಕೆಮಿಕಲ್‌ ಬಾಟಲಿ ನೀಡಿ 1300 ರೂ. ಪಡೆಯುತ್ತಾರೆ. ಬೇಡ ಎಂದರೆ ಟಾರ್ ಪಾಲ್‌ ನೀಡುವುದಿಲ್ಲ ಎನ್ನುತ್ತಾರೆ ಎಂದು ರೈತರು ಆರೋಪಿಸಿದ್ದಾರೆ. ಒಂದೆಡೆ ಸರ್ಕಾರ ರಾಸಾಯನಿಕವನ್ನು ಕಡಿಮೆ ಬಳಕೆ ಮಾಡಬೇಕೆಂದು ಇದೆ, ಕೃಷಿ ಇಲಾಖೆ ಮೂಲಕ ಹಲವು ಕಾರ್ಯಕ್ರಮ ಮಾಡುತ್ತದೆ, ಆದರೆ ಇಲ್ಲಿ ಬಲವಂತವಾಗಿ ನೀಡುತ್ತಾರೆ.
ಲಾಕ್ ಡೌನ್‌ ಕಾರಣ ರೈತರು ರೈತ ಸಂಕರ್ಪ ಕೇಂದ್ರ ಸಿಬ್ಬಂದಿ ಬಂದು ದಾಖಲೆಗಳ ಪರಿಶೀಲನೆ ಮಾಡುವ ಹೊತ್ತಿಗೆ ಹತ್ತು ಗಂಟೆ ಆಗಿರುತ್ತದೆ, ಪೊಲೀಸರು ವಾಹನ ಹಿಡಿಯುತ್ತಾರೆ, ಒಂದೆಡೆ ಕೃಷಿ ಇಲಾಖಾಧಿಕಾರಿಗಳ ನಿರ್ಲಕ್ಷ್ಯ, ಮತ್ತೊಂದೆಡೆ ಪೊಲೀಸರ ಕಾಟ ಹೀಗಾದರೆ ರೈತರು ಹೇಗೆ ಸರ್ಕಾರದ ಸವಲತ್ತು ಪಡೆದು ನೆಮ್ಮದಿಯಾಗಿ ಕೃಷಿ ಮಾಡಲಾಗುತ್ತದೆ, ಇಲಾಖೆಯ ಮೇಲಾಧಿಕಾರಿಗಳು ಈ ನಿಟ್ಟಿನಲ್ಲಿ ಗಮನ ಹರಿಸಿ ನಿಗದಿತ ಅವಧಿಗೆ ಸಂಪರ್ಕ ಕೇಂದ್ರ ಕಾರ್ಯರಂಭ ಮಾಡಿ ಸರ್ಕಾರ ನಿಗದಿ ಪಡಿಸಿದ ದರಪಟ್ಟಿ ಪ್ರಕಟಣೆ ಮಾಡಬೇಕೆಂದು ಅನಗತ್ಯ ರಾಸಾಯನಿಕ ವಿತರಣೆಗೆ ಕಡಿವಾಣ ಹಾಕುವಂತೆ ರೈತರು ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!