1,324 ಮಂದಿಗೆ ಪಾಸಿಟಿವ್: 11 ಸಾವು

ಕೋವಿಡ್ ಗೆ ಬಲಿ: 11

2,925

Get real time updates directly on you device, subscribe now.

ತುಮಕೂರು: ಸೋಮವಾರದಂದು ಕೋವಿಡ್ ಸೋಂಕು 1,324 ಮಂದಿಗೆ ಕಾಣಿಸಿಕೊಂಡಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 306 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 90,513 ಕ್ಕೆ ಏರಿಕೆ ಕಂಡಿದೆ. 15,886 ಸಕ್ರಿಯ ಪ್ರಕರಣಗಳ ಪೈಕಿ 1,484 ಮಂದಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 306, ಚಿನಾಹಳ್ಳಿ 100, ಗುಬ್ಬಿ 62, ಕೊರಟಗೆರೆ 133, ಕುಣಿಗಲ್ 94, ಮಧುಗಿರಿ 164, ಪಾವಗಡ 131, ಶಿರಾ 151, ತಿಪಟೂರು 86, ತುರುವೇಕೆರೆಯಲ್ಲಿ 97 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಕೋವಿಡ್ ಗೆ ಬಲಿ: 11
ತುಮಕೂರು: ಉಪ್ಪಾರಹಳ್ಳಿ ಬಡಾವಣೆಯ ವ್ಯಕ್ತಿ (50), ಕೊಡಿಗೇನಹಳ್ಳಿ ಗ್ರಾಮದ ವ್ಯಕ್ತಿ (67) ಅನ್ಯಕಾರಣದಿಂದ ಯಲ್ಲಪುರ ಬಡಾವಣೆಯ ವ್ಯಕ್ತಿ (67), ನಂದಿಹಳ್ಳಿ ಗ್ರಾಮದ ಮಹಿಳೆ (60), ಲಿಂಗನಹಳ್ಳಿ ಗ್ರಾಮದ ವ್ಯಕ್ತಿ (70), ಅಜ್ಜನಹಳ್ಳಿ ಗ್ರಾಮದ ವ್ಯಕ್ತಿ (38)
ಮಧುಗಿರಿ: ನಗರದ ವ್ಯಕ್ತಿ (36), ಅನ್ಯಕಾರಣದಿಂದ ಕೃಷ್ಣಸಾಗರ ಗ್ರಾಮದ ವ್ಯಕ್ತಿ (64).
ಚಿಕ್ಕನಾಯಕನಹಳ್ಳಿ: ಮತ್ತಿಘಟ್ಟ ಗ್ರಾಮದ ಮಹಿಳೆ (74), ಅನ್ಯಕಾರಣದಿಂದ ಮದ್ದೇನಹಳ್ಳಿ ಗ್ರಾಮದ ಮಹಿಳೆ (60).
ಗುಬ್ಬಿ: ಮಲ್ಲಪ್ಪನಹಳ್ಳಿ ಗ್ರಾಮದ ಮಹಿಳೆ (45).
ಒಟ್ಟು 11 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!