ತುಮಕೂರು: ನಗರದ ಬಸ್ ನಿಲ್ದಾಣದ ಬಳಿ ರೇಣುಕಾ ವಿದ್ಯಾಪೀಠ ಶಾಲೆಯಲ್ಲಿ ಪ್ರಾರಂಭಿಸಲಾಗಿರುವ ಕೋವಿಡ್ ಕೇರ್ ಸೆಂಟರ್ ಗೆ ರೋಟರಿ ವತಿಯಿಂದ ಸ್ಪಿರುಲಿನ ಚಿಕ್ಕಿ ವಿತರಿಸಲಾಯಿತು.
ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಅಧಿಕವಾಗಿರುವ ಹಿನ್ನೆಲೆಯಲ್ಲಿ ನಗರದ ರೇಣುಕಾ ವಿದ್ಯಾಪೀಠ ಶಾಲೆಯಲ್ಲಿ ಸದ್ಭಾವನ ಕೋವಿಡ್ ಕೇರ್ ಸೆಂಟರ್ ಗೆ 100 ಜನ ಸೋಂಕಿತರಗೆ ಆಗುವಷ್ಟ ಸ್ಪಿರುಲಿನ ಚಿಕ್ಕಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಮಲ್ಲೇಶ್ ಮಾತನಾಡಿ, ರೋಟರಿ ಸಂಸ್ಥೆಯಿಂದ ರೇಣುಕಾ ವಿದ್ಯಾಪೀಠ ಕೋವಿಡ್ ಕೇರ್ ಸೆಂಟರ್ ನ ನೂರು ಜನ ಸೋಂಕಿತರಿಗೆ ಆಗುವಷ್ಟು ಸ್ಪಿರುಲಿನ ಚಿಕ್ಕಿ ನೀಡಲಾಗಿದೆ, ಅವುಗಳನ್ನು ಸೇವಿಸುವುದರಿಂದ ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದ್ದು, ಬೇಗ ಸೋಂಕಿನಿಂದ ಗುಣಮುಖರಾಗುತ್ತಾರೆ, ಆದ್ದರಿಂದ ಅವರಿಗೆ ಅನುಕೂಲವಾಗುತ್ತದೆ ಎಂದು ತಿಳಿದು ಚಿಕ್ಕಿ ವಿತರಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಸ್ಪಿರುಲಿನ ಫೌಂಡೇಶನ್ ಅಧ್ಯಕ್ಷ ಮಹೇಶ್ ಮಾತನಾಡಿ, ಸ್ಪಿರುಲಿನ ಚಿಕ್ಕಿಯಲ್ಲಿ ಪೋಷಕಾಂಶ ಹೇರಳವಾಗಿದ್ದು ಸಮುದ್ರ ಪಾಚಿಯಿಂದ ಸ್ಪಿರುಲಿನ ಚಿಕ್ಕಿ ತಯಾರಾಗಿದ್ದು ಸೋಂಕಿತರು ಮತ್ತು ವೈದ್ಯಕೀಯ ಸಿಬ್ಬಂದಿ ಇವುಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿ ಸೋಂಕು ಬಹುಬೇಗ ನಿವಾರಣೆಯಾಗುತ್ತದೆ ಎಂದು ತಿಳಿಸಿದರು.
ಕೋವಿಡ್ ಕೇರ್ ಸೆಂಟರ್ ಗೆ ಸ್ಪಿರುಲಿನ ಚಿಕ್ಕಿ ವಿತರಣೆ
Get real time updates directly on you device, subscribe now.
Prev Post
Comments are closed.