ಜಿಲ್ಲಾ ಸಚಿವರಿಗೆ ಮಾಹಿತಿ ನೀಡಿದ ತೇಜಸ್ವಿನಿ- ಕ್ರಮಕ್ಕೆ ಸಚಿವರ ಸೂಚನೆ

ಕೆಂಕೆರೆಯಲ್ಲಿ ತಹಸೀಲ್ದಾರ್ ಮೇಲೆ ಹಲ್ಲೆಗೆ ಯತ್ನ

2,007

Get real time updates directly on you device, subscribe now.

ಹುಳಿಯಾರು: ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮದ ಪುಂಡರ ಗುಂಪೊಂದು ಕರ್ತವ್ಯ ನಿರತ ತಹಸೀಲ್ದಾರ್ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದ್ದು ಸ್ವತಃ ತಹಸೀಲ್ದಾರ್ ಅವರೇ ಕೆಂಕೆರೆಯಲ್ಲಿ ನಡೆದ ಕೋವಿಡ್ ಟಾರ್ಸ್ಫೋರ್ಸ್ ಸಭೆಯಲ್ಲಿ ಸಚಿವರ ಗಮನಕ್ಕೆ ತಂದರು.
ಕೋವಿಡ್ ಟಾರ್ಸ್ ಫೋರ್ಸ್ ಸಭೆಯನ್ನು ಕೆಂಕೆರೆಯ ಶಾಲಾ ಆವರಣದಲ್ಲಿ ಕರೆಯಲಾಗಿತ್ತು, ಸಭೆಗೆ ಬಂದ ಸಚಿವ ಮಾಧುಸ್ವಾಮಿ ಅವರು ಈ ಶಾಲಾ ಆವರಣದಲ್ಲಿ ಇಸ್ಪೀಟ್ ಆಡೋ ಮಾಹಿತಿ ಇದ್ದು ಕ್ರಮ ಕೈಗೊಳ್ಳುವಂತೆ ಪಿಎಸ್ಐ ರಮೇಶ್ ಅವರಿಗೆ ಸೂಚಿಸಿದರು, ತಕ್ಷಣ ತಹಸೀಲ್ದಾರ್ ತೇಜಸ್ವಿನಿ ಅವರು ಲಾಕ್ ಡೌನ್ ಚೆಕ್ಪೋಸ್ಟ್ ವೀಕ್ಷಣೆಗೆ ಇಓ ಅವರೊಂದಿಗೆ ತೆರಳುತ್ತಿರುವಾಗ ಗುಂಪಿರುವುದನ್ನು ಗಮನಿಸಿ ಶಾಲಾ ಆವರಣಕ್ಕೆ ಬಂದಾಗ 10 ಮಂದಿ ಮದ್ಯಪಾನ ಮಾಡಿ ಇಸ್ಪೀಟ್ ಆಡುತ್ತಿದ್ದರು, ಲಾಕ್ ಡೌನ್ ಇದ್ದು ಮನೆಗೆ ಹೋಗಿ ಎಂದು ಸೂಚನೆ ನೀಡಿದರೆ ಕೇಳದೆ ಬಾಯಿಗೆ ಬಂದಂತೆ ಮಾತನಾಡಿದರಲ್ಲದೆ ಮೇಲೆ ಪ್ಲಾಸ್ಟಿಕ್ ಬಾಟಲ್ ಎಸೆದು ಓಡಿಹೋದರು ಎಂದು ಘಟನೆ ವಿವರ ಬಿಚ್ಚಿಟ್ಟರು.
ಈ ಘಟನೆಯ ಬಗ್ಗೆ ತಾಪಂ ಇಓ ಹಾಗೂ ನಾನು ಸೇರಿ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ತಕ್ಷಣ ಸಚಿವರು ಪೊಲೀಸರಿಗೆ ತಾಲೂಕು ಮ್ಯಾಜಿಸ್ಟರೆಟ್ ಮೇಲೆ ಹಲ್ಲೆಗೆ ಯತ್ನ ಮಾಡಿರುವವರನ್ನು ಸುಮ್ಮನೆ ಬಿಟ್ಟಿದ್ದಿರಲ್ರಿ, ಯಾರಿಗೋ ಹೆದರಿಕೊಂಡು ಆಡಳಿತ ಮಾಡೋದೇನ್ರಿ, ತಕ್ಷಣ ಅವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಖಡಕ್ ಸೂಚನೆ ನೀಡಿದರು. ನಂತರ ಇಓ, ತಾಲೂಕು ವೈದ್ಯಾಧಿಕಾರಿಗಳೂ ಸಹ ಇಲ್ಲಿಂದ ಕೆಲವರು ಸಮಯದ ಪರಿವಿಲ್ಲದೆ ಕುಡಿದು ರಾತ್ರಿ ಹನ್ನೊಂದು ಹನ್ನೆರಡು ಗಂಟಗೆ ಕರೆ ಮಾಡಿ ಏಕವಚನದಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಸಾರ್ ಎಂದು ಆರೋಪಿಸಿದರು.
ಅಲ್ಲದೆ ಹೋಂ ಐಸೋಲೇಷನ್ ಇರುವವರು ಮನೆಯಿಂದ ಹೊರಗೆ ಬಂದು ಎಲ್ಲೆಂದರಲ್ಲಿ ತಿರುಗಾಡುತ್ತಿತ್ತಾರೆ. ಕೋವಿಡ್ ಕೇರ್ ಸೆಂಟರ್ ನಲ್ಲಿದ್ದ ಕೆಂಕೆರೆಯ ಕೆಲವರು ಊಟ ಸರಿಯಿಲ್ಲ, ತಹಸೀಲ್ದಾರ್ ನಮ್ಮೆದುರಿಗೆ ಬಂದು ಈ ಫುಡ್ ತಿನ್ಬೇಕು, ಕೋವಿಡ್ ಗೆ ಚಿಕಿತ್ಸೆ ಕೊಡೋದು ಇದಲ್ಲ, ಈ ಚಿಕಿತ್ಸೆ ಕೊಡಿ ಎಂದು ಅಲ್ಲಿನ ಸಿಬ್ಬಂದಿ ಮೇಲೆ ಗಲಾಟೆ ಸಹ ಮಾಡಿದ್ದಾರೆ. ಕೇರ್ ಸೆಂಟರ್ ನಲ್ಲಿ ನೂರೈವತ್ತಕ್ಕೂ ಹೆಚ್ಚು ಮಂದಿಯಿದ್ದು ಅವರಿಗೂ ಇಲ್ಲದ ಅವ್ಯವಸ್ಥೆ ಇವರಿಗೆ ಮಾತ್ರ ಇದೆ ಸಾರ್ ಎಂದು ದೂರಿನ ಮೇಲೆ ದೂರನ್ನು ಹೇಳಿದರು. ಇದಕ್ಕೆ ಸಚಿವರು ಫೋನ್ ಮಾಡಿದವರ ರೆಕಾರ್ಡ್ ಮಾಡಿಕೊಂಡು ಕಂಪ್ಲೇಟ್ ಕೊಡಿ ಎಂದರಲ್ಲದೆ ಪುಂಡಾಟಿಕೆ ಮಟ್ಟ ಹಾಕುವಂತೆಯೂ, ಕೋವಿಡ್ ಬಂದಿರುವ ವ್ಯಕ್ತಿ ತಿರುಗಾಡುವ ವೀಡಿಯೋ ಮಾಡಿ ಜೈಲ್ ವಾರ್ಡ್ ಗೆ ಕಳುಹಿಸಿ ಎಂದು ಪೊಲೀಸರಿಗೆ ಸೂಚಿಸಿದರು.

Get real time updates directly on you device, subscribe now.

Comments are closed.

error: Content is protected !!