ವೈದ್ಯರ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮಕ್ಕೆ ರಾಜೇಶ್ ಗೌಡ ಚಾಲನೆ

ಹಳ್ಳಿಗಳಲ್ಲಿಯೇ ಕೋವಿಡ್ ಟೆಸ್ಟ್ ಗೆ ಆದ್ಯತೆ

521

Get real time updates directly on you device, subscribe now.

ಶಿರಾ: ಕೋವಿಡ್ ಸೋಂಕು ಗ್ರಾಮೀಣ ಪ್ರದೇಶದಲ್ಲೂ ಹೆಚ್ಚು ವ್ಯಾಪಿಸಿದ್ದು, ಅದರ ನಿಯಂತ್ರಣಕ್ಕಾಗಿ ಸರಕಾರದಿಂದ ವಿನೂತನ ಕಾರ್ಯಕ್ರಮ ವೈದ್ಯರ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಸಮಸ್ಯೆ ಇರುವವರು ಸ್ಥಳದಲ್ಲಿಯೇ ಕೋವಿಡ್ ಪರೀಕ್ಷೆ ಮಾಡಿಸಿ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ತಿಳಿಸಿದರು.
ನಗರದ ಜ್ಯೋತಿನಗರದಲ್ಲಿ ವೈದ್ಯರ ನಡೆ ಹಳ್ಳಿ ಕಡೆಗೆ ವಾಹನಕ್ಕೆ ಚಾಲನೆ ನೀಡಿ ಮಾತನಾಡಿ, ಕೋವಿಡ್ ಸೋಂಕಿತರು ಮನೆಯಲ್ಲಿಯೇ ಚಿಕಿತ್ಸೆ ಪಡೆದರೆ ಮನೆಯ ಇತರೆ ಸದಸ್ಯರಿಗೂ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಕೋವಿಡ್ ಕೇರ್ ಸೆಂಟರ್ ಗೆ ಬಂದು ಉತ್ತಮ ಚಿಕಿತ್ಸೆ ಪಡೆದು ಶೀಘ್ರ ಗುಣಮುಖರಾಗಬಹುದು, ಆದ್ದರಿಂದ ತಾಲ್ಲೂಕಿನಲ್ಲಿ ಯಾರಿಗೆ ಕೋವಿಡ್ ಸೋಂಕು ತಗುಲಿದರೂ ಸಹ ಅವರು ತಕ್ಷಣ ಕೋವಿಡ್ ಕೇರ್ ಸೆಂಟರ್ ಗೆ ಆಗಮಿಸಬೇಕು ಎಂದರು.
ತಹಶೀಲ್ದಾರ್ ಮಮತ ಮಾತನಾಡಿ ವೈದ್ಯರ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮ ಸರಕಾರದ ಆದೇಶದಂತೆ ಪ್ರಾರಂಭಿಸಲಾಗಿದೆ. ಈ ವಾಹನದಲ್ಲಿ ವೈದ್ಯರ ತಂಡ ಕೊರೊನಾ ರೆಡ್ ಜೋನ್ ಮತ್ತು ಹಾಟ್ ಸ್ಪಾಟ್ ಗ್ರಾಮಗಳಲ್ಲಿ ಸಂಚರಿಸಲಿದೆ, ಶಿರಾದ ಜ್ಯೋತಿನಗರ, ಕಸಬಾ ಹೋಬಳಿಯ ಕೂಸುಕುಂಟೆ, ಹಾಲೇನಹಳ್ಳಿ ಗ್ರಾಮಗಳಲ್ಲಿ ಸಂಚರಿಸಿ ಗ್ರಾಮಗಳಲ್ಲಿ ಸ್ಥಳದಲ್ಲಿಯೇ ರ್ಯಾಪಿಡ್ ಟೆಸ್ಟ್ ಮಾಡಿ ಪಾಸಿಟಿವ್ ಬಂದರೆ, ಅಲ್ಲಿಯೇ ಮೆಡಿಕಲ್ ಕಿಟ್ ನೀಡಿ ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಲಾಗುವುದು, ವಾಹನ ತಮ್ಮ ಗ್ರಾಮಗಳಿಗೆ ಬಂದಾಗ ಆರೋಗ್ಯ ಸಮಸ್ಯೆ ಇರುವವರು ಬಂದು ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಪೌರಾಯುಕ್ತ ಪರಮೇಶ್ವರಪ್ಪ, ಆರೋಗ್ಯ ನಿರೀಕ್ಷಕ ಮಹಮದ್ ಗೌಸ್, ವಿಜಯರಾಜ್, ವೈದ್ಯರಾದ ಡಾ.ರಂಗನಾಥ ರೆಡ್ಡಿ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!