ತುಮಕೂರು: ಮಂಗಳವಾರದಂದು ಕೋವಿಡ್ ಸೋಂಕು 1,312 ಮಂದಿಗೆ ಕಾಣಿಸಿಕೊಂಡಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 201 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 96,740 ಕ್ಕೆ ಏರಿಕೆ ಕಂಡಿದೆ. 18,104 ಸಕ್ರಿಯ ಪ್ರಕರಣಗಳ ಪೈಕಿ 2,490 ಮಂದಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 201, ಚಿನಾಹಳ್ಳಿ 69, ಗುಬ್ಬಿ 124, ಕೊರಟಗೆರೆ 104, ಕುಣಿಗಲ್ 147, ಮಧುಗಿರಿ 143, ಪಾವಗಡ 96, ಶಿರಾ 69, ತಿಪಟೂರು 94, ತುರುವೇಕೆರೆಯಲ್ಲಿ 66 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಕೋವಿಡ್ ಗೆ ಬಲಿ: 14
ಕೊರಟಗೆರೆ: ಗೊರವನಹಳ್ಳಿ ಗ್ರಾಮದ ಮಹಿಳೆ (65), ನಗರದ ವ್ಯಕ್ತಿ (70), ಹೊಸಹಳ್ಳಿ ಗ್ರಾಮದ ವ್ಯಕ್ತಿ (80).
ತಿಪಟೂರು: ನಗರದ ವ್ಯಕ್ತಿ (36), ನಗರದ ವ್ಯಕ್ತಿ (45), ನೊಣವಿನಕೆರೆ ಗ್ರಾಮದ ಮಹಿಳೆ (65),
ತುಮಕೂರು: ಸತ್ಯಮಂಗಲ ಬಡಾವಣೆಯ ವ್ಯಕ್ತಿ (67), ಪಿಎಸ್ ಪಾಳ್ಯ ಬಡಾವಣೆಯ ವ್ಯಕ್ತಿ (60), ಶಿವಮೂಕಾಂಬಿಕ ನಗರದ ವ್ಯಕ್ತಿ (82)
ಪಾವಗಡ: ಕುರುಬರಹಳ್ಳಿ ಗ್ರಾಮದ ವ್ಯಕ್ತಿ (70), ಹೊಸದುರ್ಗ ಗ್ರಾಮದ ವ್ಯಕ್ತಿ (50)
ಶಿರಾ: ಚಿಕ್ಕನಹಳ್ಳಿ ಗ್ರಾಮದ ಮಹಿಳೆ (80).
ಚಿಕ್ಕನಾಯಕನಹಳ್ಳಿ: ಮತ್ತಿಘಟ್ಟ ಗ್ರಾಮದ ಮಹಿಳೆ (70), ವಳಗೆರೆ ವ್ಯಕ್ತಿ (52).
ಒಟ್ಟು 14 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
Comments are closed.