ಅಕ್ರಮವಾಗಿ ಮಾರುತ್ತಿದ್ದ ಮದ್ಯ ವಶ

500

Get real time updates directly on you device, subscribe now.

ಮಧುಗಿರಿ: ತಾಲೂಕಿನ ಕಸಬಾದ ಚಿನಕವಜ್ರ ಗ್ರಾಮದಲ್ಲಿ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಂಶಿಕೃಷ್ಣ ಅವರು ಕೋವಿಡ್‌ ಸೋಂಕಿತರ ಆರೋಗ್ಯ ವಿಚಾರಿಸಿದ ಸಂದರ್ಭದಲ್ಲಿ, ಅದೇ ಊರಿನ ಸಾರ್ವಜನಿಕರು ಜಿಲ್ಲಾಧಿಕಾರಿಗೆ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಮೂಗರ್ಜಿ ನೀಡಿದ್ದರು, ಇದನ್ನು ಅರಿತ ಸಿಪಿಐ ಎಂ.ಎಸ್‌.ಸರ್ದಾರ್‌ ಹಾಗೂ ಅವರ ತಂಡ ಚಿನಕವಜ್ರ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಮಾಯಮ್ಮ ಹಾಗೂ ಕೆಂಪೇಗೌಡ ಅವರ ಅಂಗಡಿ ಮೇಲೆ ದಾಳಿ ಮಾಡಿ ಮದ್ಯ ವಶಪಡಿಸಿಕೊಂಡಿದ್ದಾರೆ,
ಈ ವೇಳೆ ಮಾಯಮ್ಮ ಪರಾರಿಯಾಗಿದ್ದು, ಅವರ ಮಗ ಕೆಂಪೇಗೌಡನನ್ನು ಬಂಧಿಸಿದ್ದಾರೆ. ಮತ್ತೊಂದು ಕಡೆ ಖಚಿತ ಮಾಹಿತಿ ಮೇರೆಗೆ ಕಸಬಾ ಹೋಬಳಿ ಕಾರಮರಡಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ರಾಜಣ್ಣ ಅವರ ಅಂಗಡಿ ಮಳಿಗೆ ಮೇಲೆ ದಾಳಿ ಮಾಡಿದ ಸಿಪಿಐ ಎಂ.ಎಸ್‌.ಸರ್ದಾರ್‌ ಹಾಗೂ ಅವರ ತಂಡ ಸುಮಾರು 10000 ರೂ. ಮೌಲ್ಯದ ಮದ್ಯ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ನಂತರ ಮತ್ತೊಂದು ಕಡೆ ಪಿಎಸ್‌ಐ ಮಂಗಳ ಗೌರಮ್ಮ ಹಾಗೂ ಅವರ ತಂಡ ಕಸಬಾ ಹೋಬಳಿ ವೀರೇನಹಳ್ಳಿ ತಾಂಡದಲ್ಲಿ ಅಕ್ರಮ ಮದ್ಯ ಮಾರುತ್ತಿದ್ದಾರೆ ಎಂಬ ಮಾಹಿತಿಯೊಂದಿಗೆ ಅವರ ತಂಡ ದಾಳಿ ಮಾಡಿ ಸುಮಾರು ಎಂಟು ಸಾವಿರ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಪೇದೆಗಳಾದ ನಟರಾಜ್‌, ರಾಮಕೃಷ್ಣ, ರಂಗನಾಥ್‌, ತಿಪ್ಪೇಸ್ವಾಮಿ, ಕಾಂತರಾಜು, ಕಲ್ಲೇಶ್‌, ಅಂಜನಮೂರ್ತಿ ಮತ್ತಿತರಿದ್ದರು.

Get real time updates directly on you device, subscribe now.

Comments are closed.

error: Content is protected !!